ಅಪ್ಪ-ಅಮ್ಮನ ಮದುವೆ ಆ್ಯನಿವರ್ಸರಿಗೆ ರಾಗಿಣಿ ಕೊಟ್ಟ ಗಿಫ್ಟ್​ ಏನು?

Ragini Final
Published on

ಲಾಕ್‌ಡೌನ್ ಶುರುವಾದಾಗಿನಿಂದ ಸಖತ್ ಬ್ಯುಸಿಯಾದವರ ಪೈಕಿ ರಾಗಿಣಿ ಪ್ರಮುಖರು. ಬಹಳಷ್ಟು ನಾಯಕಿಯರು ಈ ಲಾಕ್‌ಡೌನ್‌ನಲ್ಲಿ ಎಲ್ಲಿ ನಾಪತ್ತೆಯಾದರು ಅಂತ ಗೊತ್ತಾಗದಿರುವ ಸಮಯದಲ್ಲಿ, ರಾಗಿಣಿ ಮಾತ್ರ ಪ್ರತಿ ದಿನ ಒಂದಲ್ಲ ಒಂದು ಕಡೆ ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಲೇ ಬಂದಿದ್ದಾರೆ.

ಹೀಗಿರುವಾಗಲೇ ರಾಗಿಣಿ ಅವರ ಅಪ್ಪ-ಅಮ್ಮನ ಮದುವೆ ವಾರ್ಷಿಕೋತ್ಸವ ಇಂದು. ಈ ವಾರ್ಷಿಕೋತ್ಸವವನ್ನು ಸ್ಮರಣೀಯ ಮಾಡುವ ನಿಟ್ಟಿನಲ್ಲಿ, ಅವರು ತಮ್ಮ ತಂಡದ ಜತೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ 300ಕ್ಕೂ ಹೆಚ್ಚು ಸಿಬ್ಬಂದಿಗೆ ಇಂದು ಊಟ ಕೊಡುವ ಮೂಲಕ ಅಪ್ಪ-ಅಮ್ಮನ ಮದುವೆ ವಾರ್ಷಿಕೋತ್ಸವಕ್ಕೆ ಗಿಫ್ಟು ಕೊಟ್ಟಿದ್ದಾರೆ.

ಈ ಕುರಿತು ಬುಧವಾರವೇ ಘೋಷಿಸಿದ್ದ ರಾಗಿಣಿ, ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿಗೆ ಚನ್ನಾ ಬತುರಾ ಮತ್ತು ಸಿಹಿ ಹಂಚುವುದಾಗಿ ಹೇಳಿಕೊಂಡಿದ್ದರು. ಅದರಂತೆ, ಇಂದು ತಮ್ಮ ತಂದೆ ಹಾಗೂ ತಂಡದ ಜತೆಗೆ ಮಧ್ಯಾಹ್ನ ಒಂದರ ಸುಮಾರಿಗೆ ಹೋದ ರಾಗಿಣಿ, ಅಲ್ಲಿ ವೈದ್ಯರನ್ನು ಭೇಟಿ ಮಾಡುವುದರ ಜತೆಗೆ, ಸಿಬ್ಬಂದಿಗೆ ಆಹಾರ ಕೊಟ್ಟು ಬಂದಿದ್ದಾರೆ.

ಇದಕ್ಕೂ ಮುನ್ನ, ಕೆಲವು ದಿನಗಳ ಹಿಂದೆ, ಅವರು ತಮ್ಮ ಕುಟುಂಬದವರ ಜತೆಗೆ ಸೇರಿ ವಿಕ್ಟೋರಿಯಾ ಆಸ್ಪತ್ರೆಯ ಸುಮಾರು 150ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗೆ ಮನೆಯಲ್ಲೇ ಅಡುಗೆ ಮಾಡಿ ಕಳಿಸಿದ್ದರು. ಅದು ಮತ್ತೊಮ್ಮೆ ಮುಂದುವರೆದಿದೆ ಎಂಬುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net