More

    ‘ಬೇಡರ ಕಣ್ಣಪ್ಪ’ ಬಿಡುಗಡೆಯಾಗಿ ಇಂದಿಗೆ 66 ವರ್ಷ!

    ಡಾ. ರಾಜಕುಮಾರ್ ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರ ‘ಬೇಡರ ಕಣ್ಣಪ್ಪ’ ಬಿಡುಗಡೆಯಾಗಿ ಇಂದಿಗೆ 66 ವರ್ಷಗಳಾಗಿವೆ. 1954ರ ಮೇ 07ರಂದು ಚಿತ್ರ ಸಾಗರ್ ಸೇರಿದಂತೆ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು.

    ‘ಬೇಡರ ಕಣ್ಣಪ್ಪ’ ಕನ್ನಡ ಚಿತ್ರರಂಗದ ಪಾಲಿಗೆ ಬಹಳ ಮಹತ್ವವಾದ ಚಿತ್ರ. ಆ ಚಿತ್ರದಿಂದ ಡಾ. ರಾಜಕುಮಾರ್ ಮತ್ತು ನರಸಿಂಹರಾಜು ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು. ಇದಕ್ಕೂ ಮುನ್ನ ರಾಜಕುಮಾರ್ ಅವರು ‘ಶ್ರೀನಿವಾಸ ಕಲ್ಯಾಣ’ ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದರು ಎಂದು ಹೇಳಲಾಗುತ್ತದೆ. ಆದರೆ, ಅವರು ಪೂರ್ಣಪ್ರಮಾಣವಾಗಿ ನಾಯಕನಾಗಿ ಅಭಿನಯಿಸಿದ ಚಿತ್ರ ಎಂದರೆ ಅದು ‘ಬೇಡರ ಕಣ್ಣಪ್ಪ’. ಅದಕ್ಕೂ ಮುನ್ನ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಮತ್ತು ಜನಪ್ರಿಯರಾಗಿದ್ದ ಡಾ. ರಾಜಕುಮಾರ್ ಅವರ ಪ್ರತಿಭೆಯನ್ನು ಗುರುತಿಸಿ, ಅವರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿದವರು ನಿರ್ದೇಶಕ ಎಚ್.ಎಲ್.ಎನ್. ಸಿಂಹ.

    ಇದನ್ನೂ ಓದಿ: ಥ್ಯಾಂಕ್ ಯೂ ಶಾರೂಖ್ … ಹಾಗಂತ ‘ಕಿಂಗ್ ಖಾನ್’ಗೆ ಹೇಳಿದ್ದು ಯಾರು?

    ಗುಬ್ಬಿ ವೀರಣ್ಣ, ಎ.ವಿ. ಮೇಯಪ್ಪ ಚೆಟ್ಟಿಯಾರ್ ಮತ್ತು ಸಿ.ಆರ್. ಬಸವರಾಜು ಅವರು ಜಂಟಿಯಾಗಿ ನಿರ್ಮಿಸಿದ ಈ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುವುದರ ಜತೆಗೆ ತಮಿಳಿಗೆ ಡಬ್ ಸಹ ಆಗಿತ್ತು. ಕನ್ನಡದಲ್ಲಿ ‘ಬೇಡರ ಕಣ್ಣಪ್ಪ’ ಹೆಸರಲ್ಲಿ ಚಿತ್ರ ನಿರ್ಮಾಣವಾದರೆ, ತೆಲುಗಿನಲ್ಲಿ ‘ಕಾಳಹಸ್ತಿ ಮಹಾತ್ಮ್ಯಂ’ ಎಂಬ ಹೆಸರಿನಲ್ಲಿ ನಿರ್ಮಾಣವಾಗಿತ್ತು. ಏಕಕಾಲಕ್ಕೆ ಎರಡೂ ಭಾಷೆಗಳಲ್ಲಿ ನಿರ್ಮಾಣವಾಗಿರುವುದರಿಂದ, ಇದು ಡಾ. ರಾಜಕುಮಾರ್ ಅಭಿನಯದ ಏಕೈಕ ಅನ್ಯಭಾಷೆಯ ಚಿತ್ರ ಎಂದು ಹೇಳಲಾಗುತ್ತದೆ.

    ಇದನ್ನೂ ಓದಿ: ವಿನಯ್​ ಹುಟ್ಟುಹಬ್ಬಕ್ಕೆ ಗ್ರಾಮಾಯಣ ತಂಡದಿಂದ ಟೀಸರ್​ ಉಡುಗೊರೆ

    ಈ ಚಿತ್ರದಲ್ಲಿ ಡಾ. ರಾಜಕುಮಾರ್‌ಗೆ ನಾಯಕಿಯಾಗಿ ಪಂಡರಿಬಾಯಿ ಅಭಿನಯಿಸಿದ್ದರು. ಇನ್ನು ನರಸಿಂಹರಾಜು, ಜಿ.ವಿ. ಅಯ್ಯರ್, ರಾಮಚಂದ್ರ ಶಾಸ್ತ್ರಿ, ರಾಜಸುಲೋಚನಾ ಮುಂತಾದವರು ಅಭಿನಯಿಸಿದ್ದರು. ಇನ್ನು ಜಿ.ವಿ. ಅಯ್ಯರ್ ಅವರು ಅಭಿನಯದ ಜತೆಗೆ ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ರಚಿಸಿದ್ದರು. ತಮಿಳಿನ ಜನಪ್ರಿಯ ಸಂಗೀತ ಸಂಯೋಜಕರಾದ ಆರ್. ಸುದರ್ಶನಂ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ‘ಶಿವಪ್ಪ ಕಾಯೋ ತಂದೆ …’, ‘ಕಾಯೋ ತಂದೆಯೇ …’ ಮುಂತಾದ ಹಾಡುಗಳು ಈಗಲೂ ಜನಪ್ರಿಯವಾಗಿವೆ.

    ಬನ್ಸಾಲಿ ಹೊಸ ಚಿತ್ರದಲ್ಲಿ ನಟಿಸ್ತಾರಾ ರಣಬೀರ್-ದೀಪಿಕಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts