More

    ನೆಮಾಯ್ ಘೋಷ್​ ಕನ್ನಡ ನಂಟಿನ ಬಗ್ಗೆ ನಿಮಗೆಷ್ಟು ಗೊತ್ತು?

    ಬೆಂಗಳೂರು: ಸತ್ಯಜಿತ್ ರೇ ಅವರ ಸ್ಟಿಲ್ ಫೋಟೋಗ್ರಾಫರ್​ ಎಂದೇ ಜನಪ್ರಿಯರಾಗಿದ್ದ ನೆಮಾಯ್ ಘೋಷ್​ ಇತ್ತೀಚೆಗಷ್ಟೇ ನಿಧನರಾಗಿದ್ದಾರೆ. ರೇ ನಿರ್ದೇಶನದ ‘ಘೂಪಿ ಘೈನೆ ಭಾಘಾ ಬೈನೆ’ ಚಿತ್ರದಿಂದ, ಕೊನೆಯ ಚಿತ್ರ ‘ಆಗುಂತಕ್’ವರೆಗೂ ಅವರ ಜತೆಗೆ ಘೋಷ್​ ಕೆಲಸ ಮಾಡಿದ್ದರು. ಬ್ಲಾಕ್ ಆ್ಯಂಡ್ ವೈಟ್ ಸ್ಟಿಲ್‌ಗಳಿಗೆ ಹೆಸರಾದ ಘೋಷ್​, ‘ಸತ್ಯಜಿತ್ ರೇ ಅಟ್ ಸೆವೆಂಟಿ’, ‘ಸತ್ಯಜಿತ್ ರೇ – ಫ್ರಮ್​ ಸ್ಕ್ರಿಪ್ಟ್ ಟು ಸ್ಕ್ರೀನ್’ ಮುಂತಾದ ಪುಸ್ತಕಗಳನ್ನೂ ರಚಿಸಿದ್ದರು.

    ಕೆಲವು ವರ್ಷಗಳ ಹಿಂದೆ ಎಂ.ಎಸ್. ಸತ್ಯು ನಿರ್ದೇಶನದ ‘ಇಜ್ಜೋಡು’ ಚಿತ್ರ ಮಾಡಿದಾಗ, ಅವರನ್ನು ಸ್ಟಿಲ್ ಫೋಟೋಗ್ರಾಫರ್​ ಆಗಿ ಕರೆಸಿಕೊಳ್ಳಲಾಯಿತು. ‘ಇಜ್ಜೋಡು’ ಚಿತ್ರಕ್ಕೆ ಕೆಲಸ ಮಾಡಿದ ನಂತರ, ಸುಧೀರ್ ಅತ್ತಾವರ್ ನಿರ್ದೇಶನದ ‘ಪರಿ’ ಚಿತ್ರಕ್ಕೂ ಸ್ಟಿಲ್ ಫೋಟೋಗ್ರಾಫರ್​ ಆಗಿ ಕೆಲಸ ಮಾಡಿದ್ದರು ಘೋಷ್​.

    ಹೀಗೆ ಹಲವು ಕನ್ನಡ ಚಿತ್ರಗಳಿಗೆ ಕೆಲಸ ಮಾಡುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ್ದ ಘೋಷ್​ ಇನ್ನು ನೆನಪು ಮಾತ್ರ.

    ಬಯೋಪಿಕ್​ನಲ್ಲಿ ನನ್ನ ಪಾತ್ರ ಇವರಲ್ಲೊಬ್ಬರು ಮಾಡಲಿ: ಸಾನಿಯಾ ಮಿರ್ಜಾ ಒಲವು ಯಾರ ಮೇಲೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts