More

    ‘ರಾಧೆ ಶ್ಯಾಮ್’ ಬಿಡುಗಡೆ ದಿನಾಂಕ ಘೋಷಣೆಯಾಗಿದೆ! ಅಪ್ಪು ಅವರ ‘ಜೇಮ್ಸ್’ಗೆ ದಾರಿ ಕೊಟ್ಟ ಡಾರ್ಲಿಂಗ್ ಪ್ರಭಾಸ್…

    ನಿರ್ದೇಶಕ ರಾಧಾ ಕೃಷ್ಣ ಕುಮಾರ್ ಅವರ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ರಾಧೆ ಶ್ಯಾಮ್ನಲ್ಲಿ ನಟ ಡಾರ್ಲಿಂಗ್ ಪ್ರಭಾಸ್ ಮತ್ತು ನಟಿ ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಒಂದು ಪ್ರೇಮ ಕಥೆಯಾಗಿದ್ದು, ಚಿತ್ರದ ಬಗ್ಗೆ ಮೊದಲು ಸುದ್ದಿ ಹೊರಬಂದಾಗಿನಿಂದ ಇಡೀ ದಕ್ಷಿಣ ಭಾರತದಲ್ಲಿ ಈ ಸಿನಿಮಾವನ್ನು ನೋಡಲು ಎಲ್ಲರೂ ಕಾದು ಕುಳಿತಿದ್ದಾರೆ.
    ಅಂದಾಹಾಗೆ, ನಟಿ ಭಾಗ್ಯಶ್ರೀ ಮತ್ತು ನಟ ಕೃಷ್ಣಂ ರಾಜು ಅವರು ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಇದೇ ವರ್ಷದ ಮಾರ್ಚ್ 11 ರಂದು ತೆರೆಗಪ್ಪಳಿಸಲಿದೆ. ನಿರ್ಮಾಪಕರು ಚಿತ್ರದ ಬಿಡುಗಡೆ ದಿನಾಂಕವನ್ನು ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ. ಸಿನಿಮಾ ರಿಲೀಸ್ ಡೇಟ್ ಅನ್ನು ಶೇರ್ ಮಾಡಿಕೊಂಡ ನಟ ಪ್ರಭಾಸ್, “11.03.22. ನಾನು ನಿಮ್ಮನ್ನು ನೋಡಲು ರೆಡಿ ಇದ್ದೇನೆ. #RadheShyamOnMarch11,’ ಎಂಬ ಕ್ಯಾಪ್ಷನ್ ನೀಡಿದ್ದಾರೆ.
    ಈ ಮೂಲಕ ಮಾರ್ಚ್ 17 ರಂದು ಬಿಡುಗಡೆಯಾಗಲಿರುವ ಅಪ್ಪು ಅವರ ಜೇಮ್ಸ್ಚಿತ್ರಕ್ಕೆ ರಾಧೆ ಶ್ಯಾಮ್ತಂಡ ಕೂಡ ‘RRR’ ಚಿತ್ರತಂಡದಂತೆ ದಾರಿ ಮಾಡಿಕೊಟ್ಟಿದೆ ಎಂದೇ ಹೇಳಬೇಕು. ಸದ್ಯ, ‘ಜೇಮ್ಸ್ಚಿತ್ರಕ್ಕೆ ಉಳಿದ ಎಲ್ಲಾ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳು ಅಡ್ಡವಾಗದಂತೆ ತಮ್ಮ ರಿಲೀಸ್ ದಿನಾಂಕಗಳನ್ನು ಘೋಷಿಸುತ್ತಿರುವುದು ನಿಜಕ್ಕೂ ಅಪ್ಪು ಅಭಿಮಾನಿಗಳಿಗಂತೂ ಸಂತಸ ನೀಡಿದೆ.

    'ರಾಧೆ ಶ್ಯಾಮ್' ಬಿಡುಗಡೆ ದಿನಾಂಕ ಘೋಷಣೆಯಾಗಿದೆ! ಅಪ್ಪು ಅವರ 'ಜೇಮ್ಸ್'ಗೆ ದಾರಿ ಕೊಟ್ಟ ಡಾರ್ಲಿಂಗ್ ಪ್ರಭಾಸ್...

    ಹಾಟ್ ಫೋಟೋಶೂಟ್ ನಲ್ಲಿ ಬಿಕಿನಿ ತೊಟ್ಟು ಮಿಂಚಿದ ಮಾಳವಿಕಾ! ನೆಟ್ಟಿಗರು ಫಿದಾ…

    ವಿರೋಧಿಗಳಿಗೆ ಒಂದೇ ಪದದಲ್ಲಿ ಉತ್ತರಿಸಿದ ಸಮಂತಾ? ನೆಟ್ಟಿಗರು ಶಾಕ್! ಫೋಟೋ, ವಿಡಿಯೋಗಳು ವೈರಲ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts