ಹಾಟ್ ಫೋಟೋಶೂಟ್ ನಲ್ಲಿ ಬಿಕಿನಿ ತೊಟ್ಟು ಮಿಂಚಿದ ಮಾಳವಿಕಾ! ನೆಟ್ಟಿಗರು ಫಿದಾ...

Published on
ದಕ್ಷಿಣ ಭಾರತದ ನಟಿ ಮಾಳವಿಕಾ ಮೋಹನನ್ ಅವರು ತಮ್ಮ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳೊಂದಿಗೆ ಎಲ್ಲರನ್ನು ಸಿಕ್ಕಾಪಟ್ಟೆ ರಂಜಿಸುತ್ತಿದ್ದಾರೆ. ಸದ್ಯ, ನಟಿ ಮಾಲ್ಡೀವ್ಸ್​ನಲ್ಲಿದ್ದು ಅಲ್ಲಿಂದ ತಮ್ಮ ಅದ್ಭುತ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಹಾಗೆ, ನಟಿ ಹಂಚಿಕೊಳ್ಳುತ್ತಿರುವ ಒಂದಿಷ್ಟು ಫೋಟೋಗಳಲ್ಲಿ ಅವರ ಬಿಕಿನಿ ಫೋಟೋಗಳು ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ನಟಿಯನ್ನು ಬಹಳಷ್ಟು ಹಾಟ್ ಆಗಿ ಕಂಡ ನೆಟ್ಟಿಗರು ಫಿದಾ ಆಗಿದ್ದಾರೆ.
ಕೆಲವು ಫೋಟೋಗಳಲ್ಲಿ, ಮಾಳವಿಕಾ ಮೋಹನನ್ ಗುಲಾಬಿ ಬಣ್ಣದ ಮೊನೊಕಿನಿ ಸ್ಟೈಲ್​ನ ಬಿಕಿನಿ ಧರಿಸಿದ್ದಾರೆ. ಈ ಬಿಕಿನಿ ಫೋಟೋಗಳನ್ನು ಹಂಚಿಕೊಂಡ ಮಾಳವಿಕಾ, "ಮೆಚ್ಚಿನ ಸಾರ್ಟೋರಿಯಲ್ ಮೂಡ್- ಪಿಂಕ್" ಎಂದು ಅವುಗಳಿಗೆ ಕ್ಯಾಪ್ಷನ್ ಬರೆದಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ಫೋಟೋಗಳಿಗೆ ಎರಡು ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಇದೀಗ, ಈ ಫೋಟೋಗಳ ಮೇಲೆ 5 ಲಕ್ಷಕ್ಕೂ ಹೆಚ್ಚು ಲೈಕ್ಸ್​ಗಳ ಜತೆಗೆ ಸಾವಿರ ಸಾವಿರ ಕಾಮೆಂಟ್​ಗಳು ಇವೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net