ವಿರೋಧಿಗಳಿಗೆ ಒಂದೇ ಪದದಲ್ಲಿ ಉತ್ತರಿಸಿದ ಸಮಂತಾ? ನೆಟ್ಟಿಗರು ಶಾಕ್! ಫೋಟೋ, ವಿಡಿಯೋಗಳು ವೈರಲ್...

Published on
ಮುಂಬೈ: ವಿಚ್ಛೇದನ ಪಡೆದುಕೊಂಡ ನಂತರ ನಟಿ ಸಮಂತಾ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ ಎಂದೇ ಹೇಳಬೇಕು. ಆದರೆ, ಅದೇ ವಿಚ್ಛೇದನದ ಬಳಿಕ ಕೆಲ ಜನರು ಮಾತ್ರ ನಟಿ ಸಮಂತಾರನ್ನು ಸಿಕ್ಕಾಪಟ್ಟೆ ದ್ವೇಷಿಸುತ್ತಿದ್ದಾರೆ. ಇನ್ನು, ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಸಾಕಷ್ಟು ನೆಗೆಟಿವ್​ ಕಮೆಂಟ್​ಗಳು ಬರುತ್ತಿದ್ದು, ಸಖತ್ ಟ್ರೋಲ್ ಕೂಡ ಆಗುತ್ತಿದ್ದಾರೆ. ಆದರೆ, ವಿಚ್ಛೇದನದ ಬಳಿಕ ನಟಿ ಸಮಂತಾ ಅವರು ಡೋಂಟ್​ ಕೇರ್​ ಆ್ಯಟಿಟ್ಯೂಡ್ ಅಳವಡಿಸಿಕೊಂಡಂತೆ ಕಾಣುತ್ತಿದೆ. ಟ್ರೋಲಿಗರ ಬಗ್ಗೆ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದು ಬಹಳಷ್ಟು ಬಾರಿ ಸಾಬೀತಾಗಿದೆ. ದೇಶ-ವಿದೇಶಗಳಲ್ಲಿ ಟ್ರಿಪ್ ಹೋಗುತ್ತಾ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಇನ್ನು, ಇಂದು ಸಮಂತಾ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.
ಆದರೆ, ಮುಂಬೈನಲ್ಲಿ ಸಮಂತಾ ಕಾಣಿಸಿಕೊಂಡರೂ, ಎಲ್ಲರ ಗಮನ ಸೆಳೆದಿರುವುದು ಮಾತ್ರ ಅವರ ಶರ್ಟ್. ನಟಿ ಸಮಂತಾ ಅವರ ಬಗ್ಗೆ ಅನೇಕ ಟ್ರೋಲ್​ಗಳು ಹರಿದಾಡಿವೆ. ಆದರೆ, ಸಮಂತಾ ಅವರು ಮಾತ್ರ ಯಾವ ಒಂದು ಟ್ರೋಲ್, ನೆಗೆಟಿವ್ ಕಾಮೆಂಟ್​ಗಳಿಗೆ ಯಾವತ್ತು ಉತ್ತರ ನೀಡಿಲ್ಲ. ಹೀಗಿದ್ದರೂ, ಅವರನ್ನು ಟೀಕೆ ಮಾಡುವವರಿಗೆ, ಟ್ರೋಲ್​ ಮಾಡುವವರಿಗೆ ಸ್ಯಾಮ್ ಸದ್ಯ ಒಂದೇ ಪದದ ಮೂಲಕ ಉತ್ತರ ನೀಡಿದ್ದಾರೆ ಎಂದು ಅನಿಸುತ್ತೆ. ನಟಿ ಸಮಂತಾ ತೊಟ್ಟಿರುವ ಶರ್ಟ್​ ಮೇಲೆ 'ಎಫ್'​ ವರ್ಡ್ ಪ್ರಿಂಟ್ ಇದೆ. ಹಾಗಾಗಿ, ಟ್ರೋಲಿಗರಿಗೆ, ವಿರೋಧಿಗಳಿಗೆ ಸಮಂತಾ ನೇರವಾಗಿಯೇ ಈ ಮೂಲಕ ದಿಟ್ಟ ಉತ್ತರ ನೀಡುತ್ತಿದ್ದಾರೆ ಎಂಬುದು ಅವರ ಕಟ್ಟಾಭಿಮಾನಿಗಳ ಅಭಿಪ್ರಾಯವಾಗಿದೆ. ಹಾಗಾಗಿ, ಈಗ ನಟಿಯ ಶರ್ಟ್​ನ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net