ಇಂದು (ಸೆ.27) ವಿಶ್ವ ಪ್ರವಾಸೋದ್ಯಮ ದಿನ: ಈ ವರ್ಷದ ಧ್ಯೇಯವೇನು?

Tourism
Published on

ಬೆಂಗಳೂರು: ಇಂದು (ಸೆ.27) ವಿಶ್ವ ಪ್ರವಾಸೋದ್ಯಮ ದಿನ. ನಮ್ಮ ದೇಶವು ಪ್ರವಾಸಿ ತಾಣಗಳ ತವರು ಎಂದೇ ಹೇಳಬಹುದು. ಧಾರ್ಮಿಕ ಕ್ಷೇತ್ರಗಳಿಂದ ಹಿಡಿದು, ಕಣ್ಣಿಗೆ ಮುದ, ಹಬ್ಬ ನೀಡುವ ಪ್ರಾಕೃತಿಕ ತಾಣಗಳೂ ಸೇರಿದಂತೆ ಪ್ರವಾಸಿಗರ ಮನತಣಿಸುವಷ್ಟು ವಿಭಿನ್ನವಾದ ಪ್ರವಾಸಿ ತಾಣಗಳು ನಮ್ಮ ದೇಶದಲ್ಲಿವೆ. ಕರೊನಾ ಮುಗಿದ ಮೇಲೆ ಪ್ರವಾಸೋದ್ಯಮ ಮತ್ತೆ ಚೇತರಿಸಿಕೊಳ್ಳುತ್ತಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡಿದೆ.

2022ರಲ್ಲಿ ರೀ ಥಿಂಕಿಂಗ್ ಟೂರಿಸಂ (ಪ್ರವಾಸೋದ್ಯಮದ ಬಗ್ಗೆ ಮತ್ತೆ ವಿಚಾರ ಮಾಡುವುದು), ಅಭಿವೃದ್ಧಿಗೆ ಪ್ರವಾಸೋದ್ಯಮ ಆಧಾರ ಸ್ತಂಭ ಎಂಬ ಆಲೋಚನೆ ಬೆಳಸುವುದು ಎಂಬ ಧ್ಯೇಯದೊಂದಿಗೆ ಈ ಬಾರಿಯ ವಿಶ್ವ ಪ್ರವಾಸೋದ್ಯಮವನ್ನು ಆಚರಿಸಲಾಗುತ್ತಿದೆ.

ವಿಶ್ವ ಪ್ರವಾಸೋದ್ಯಮಕ್ಕೆ ಗಣ್ಯರು ಶುಭಾಶಯಗಳನ್ನು ತಿಳಿಸಿದ್ದು, ನಮ್ಮ ಪರಿಸರವನ್ನು ಉಳಿಸಿ ಬೆಳೆಸೋಣ, ಎಲೆಮರೆ ಕಾಯಿಯಂತೆ ಇರುವ ಪ್ರವಾಸಿತಾಣಗಳನ್ನು ಅಭಿವೃದ್ಧಿ ಪಡಿಸೋಣ ಎಂದು ಕರೆ ನೀಡಿದ್ದಾರೆ.

ಭಾರತದ ನಯಾಗಾರವೆಂದೇ ಕರೆಯಲಾಗುವ ಗೋಕಾಕ್ ಜಲಪಾತವು ಕರ್ನಾಟಕದ ಎರಡನೇ ದೊಡ್ಡ ಜಲಪಾತ. ಬೆಳಗಾವಿಯ ಗೋಕಾಕ್ ನಿಂದ 6 ಕಿ. ಮೀ ದೂರದಲ್ಲಿರುವ ಈ ಜಲಪಾತವು ಘಟಪ್ರಭ ನದಿಯಿಂದ ಉಂಟಾಗುತ್ತದೆ. ಈ ವಿಶ್ವ ಪ್ರವಾಸೋದ್ಯಮ ದಿನದಂದು ನಮ್ಮ ಹಿರಿಯರು ಹಾಗೂ ಪ್ರಕೃತಿಯು ನೀಡಿದ ಪರಿಸರವನ್ನು ಉಳಿಸಿ ಬೆಳೆಸೋಣ ಎಂದು ಕೈಗಾರಿಕ ಸಚಿವ ಮುರುಗೇಶ್​ ನಿರಾಣಿ ಕೂ ಮಾಡಿದ್ದಾರೆ.

Koo App
ಭಾರತದ ನಯಾಗಾರವೆಂದೇ ಕರೆಯಲಾಗುವ ಗೋಕಾಕ್ ಜಲಪಾತವು ಕರ್ನಾಟಕದ ಎರಡನೇ ದೊಡ್ಡ ಜಲಪಾತ. ಬೆಳಗಾವಿಯ ಗೋಕಾಕ್ ನಿಂದ 6 ಕಿ. ಮೀ ದೂರದಲ್ಲಿರುವ ಈ ಜಲಪಾತವು ಘಟಪ್ರಭ ನದಿಯಿಂದ ಉಂಟಾಗುತ್ತದೆ. ಈ ವಿಶ್ವ ಪ್ರವಾಸೋದ್ಯಮ ದಿನದಂದು ನಮ್ಮ ಹಿರಿಯರು ಹಾಗೂ ಪ್ರಕೃತಿಯು ನೀಡಿದ ಪರಿಸರವನ್ನು ಉಳಿಸಿ ಬೆಳೆಸೋಣ. @BJP4Karnataka @bsbommai
View attached media content
-Dr. Murugesh R Nirani (@murugesh_nirani)27 Sep 2022

ಉಡುಪಿ ಮತ್ತು ಚಿಕ್ಕಮಗಳೂರು ಸುಂದರವಾದ ತಾಣಗಳಾಗಿದೆ, ಧಾರ್ಮಿಕ ಸ್ಥಳಗಳನ್ನೊಳಗೊಂಡ ಉಡುಪಿ ದೇವತೆಗಳ ನೆಲೆಯಾಗಿದ್ದು, ರಾಜ್ಯಕ್ಕೆ ಉಡುಗೊರೆಯಾಗಿದೆ. ತೀರ್ಥಯಾತ್ರೆಗಳು ಮತ್ತು ವಿಹಾರಗಳಿಗೆ ಅವು ಸರ್ವೋತ್ಕೃಷ್ಟ ತಾಣಗಳಾಗಿವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂ ಮಾಡಿದ್ದಾರೆ.

Koo App
Udupi & Chikmagalur are blessedly rich with picturesque landscapes, gifted with religious whereabouts, home to deities, have celebrated history, culture & many more. They are quintessential destinations for pilgrimages and vacations. #WorldTourismDay
View attached media content
-Shobha Karandlaje (@shobhabjp)27 Sep 2022

ಸುದೀರ್ಘ ಪರಂಪರೆ, ಇತಿಹಾಸ ಹೊಂದಿರುವ ಕನ್ನಡನಾಡು ಪ್ರವಾಸಿಗರ ಸ್ವರ್ಗ. ನಮ್ಮ ನಾಡಿನಲ್ಲಿರುವ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಪ್ರವಾಸಿ ತಾಣಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯ ಆಗಬೇಕಿದೆ. ಈ ಕುರಿತು ಅರಿವು ಮೂಡಿಸೋಣ ಎನ್ನುವ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೂ ಮೂಲಕ ಎಲ್ಲರಿಗೂ ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

Koo App
ಸುದೀರ್ಘ ಪರಂಪರೆ, ಇತಿಹಾಸ ಹೊಂದಿರುವ ಕನ್ನಡನಾಡು ಪ್ರವಾಸಿಗರ ಸ್ವರ್ಗ. ನಮ್ಮ ನಾಡಿನಲ್ಲಿರುವ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಪ್ರವಾಸಿ ತಾಣಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯ ಆಗಬೇಕಿದೆ. ಈ ಕುರಿತು ಅರಿವು ಮೂಡಿಸೋಣ. ಎಲ್ಲರಿಗೂ ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು. #WorldTourismDay2022
View attached media content
-Araga Jnanendra (@aragajnanendra)27 Sep 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net