More

    ಸ್ಟಾರ್​​ ನಟನ ಪುತ್ರನ ಜೊತೆ ರೋಜಾ ಪುತ್ರಿಯ ರೊಮ್ಯಾನ್ಸ್​: ಕಾಲಿವುಡ್​ ಗಲ್ಲಿಯಲ್ಲಿ ಹೀಗೊಂದು ಸುದ್ದಿ…

    ಚೆನ್ನೈ: 90ರ ಕಾಲಘಟ್ಟದಲ್ಲಿ ಇಡೀ ಸೌತ್​ ಸಿನಿಮಾರಂಗದಲ್ಲಿ ಹೆಸರು ಮಾಡಿದ ನಟಿಯರ ಸಾಲಿನಲ್ಲಿ ರೋಜಾ ಸಹ ಕಾಣಿಸುತ್ತಾರೆ. ಬಹುತೇಕ ಎಲ್ಲ ಸ್ಟಾರ್ ನಟರ ನೆಚ್ಚಿನ ನಾಯಕಿಯಾಗಿ ನಟಿಸಿರುವ ರೋಜಾ, ಕನ್ನಡದಲ್ಲಿಯೂ ಹಲವು ಸಿನಿಮಾ ಮಾಡಿದ್ದಾರೆ. 1993ರಲ್ಲಿ ಗಡಿಬಿಡಿ ಗಂಡ ಚಿತ್ರದಿಂದ ಶುರುವಾದ ಅವರ ಸ್ಯಾಂಡಲ್​ವುಡ್​ ಜರ್ನಿ, ಕಲಾವಿದ, ಪ್ರೇಮೋತ್ಸವ, ಗ್ರಾಮ ದೇವತೆ ಸೇರಿ ಒಟ್ಟು ಎಂಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಅವರ ಕೊನೇ ಸಿನಿಮಾ ಮೌರ್ಯ. ಇದೀಗ ರೋಜಾ ಅವರು ಮಗಳು ಅನ್ಶುಮಲ್ಲಿಕಾ, ಅಮ್ಮನ ಸಿನಿಮಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಸಿದ್ಧತೆ ನಡೆಸಿಕೊಂಡಿದ್ದಾರೆ.

    ರೋಜಾ ಅವರ ನಿಜವಾದ ಹೆಸರು ಶ್ರೀಲತಾ ರೆಡ್ಡಿ. ಇವರು ತಮಿಳು ಸಿನಿಮಾ ರಂಗದ ಖ್ಯಾತ ನಿರ್ದೇಶಕ ಆರ್​.ಕೆ. ಸೆಲ್ವಮಣಿ ಅವರನ್ನು 10 ವರ್ಷಗಳ ಡೇಟಿಂಗ್​ ಬಳಿಕ 2002ರಲ್ಲಿ ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಅನ್ಶುಮಲ್ಲಿಕಾ ಮತ್ತು ಮಗ ಕೃಷ್ಣ ಲೋಹಿತ್​. ಇದೀಗ ರೋಜಾ ಮಗಳು ಅನ್ಶು, ಅಮ್ಮನ ಹಾದಿಯನ್ನು ಹಿಡಿಯಲು ಮುಂದಾಗಿದ್ದಾರೆ. ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದಾರೆ.

    2021 ರ ವರ್ಷದ ಅತ್ಯುತ್ತಮ ಸಮಾಜ ಸೇವಕಿ ಎಂಬ ಪ್ರಶಸ್ತಿಯನ್ನು ಗೆದ್ದಿರುವ ಅನ್ಶು ಈಗಾಗಲೇ ಅನ್ಶು ಕಾಲಿವುಡ್​ ಹಾಗೂ ಟಾಲಿವುಡ್​ನಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಅಲ್ಲದೆ, ‘ದಿ ಫ್ಲೇಮ್​ ಇನ್​ ಮೈ ಹಾರ್ಟ್​’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಅನ್ಶು ಸಿನಿಮಾ ಕ್ಷೇತ್ರಕ್ಕೆ ಕಾಲಿಡುತ್ತಾರೆ ಎಂದು ಹಲವು ದಿನಗಳಿಂದ ಸುದ್ದಿಯಾಗುತ್ತಿತ್ತು. ಇದೀಗ ಆ ಸುದ್ದಿ ನಿಜವಾಗುವ ಕಾಲ ಬಂದಿದೆ. ತಮಿಳಿನ ಸ್ಟಾರ್ ನಟನ ಪುತ್ರನ ಜೊತೆ ರೋಜಾ ಪುತ್ರಿ ಅಭಿನಯಿಸಲಿದ್ದಾರೆ ಎಂದು ತಿಳಿದುಬಂದಿದೆ. ​

    ಹೌದು, ನಟ ಚಿಯಾನ್​ ವಿಕ್ರಮ್​ ಅವರ ಪುತ್ರ ಧ್ರುವ್​ ವಿಕ್ರಮ್​ಗೆ ತೆಲುಗು ಸಿನಿಮಾ ಆಫರ್​ ಒಂದು ಒದಗಿಬಂದಿದ್ದು, ಆ ಸಿನಿಮಾದಲ್ಲಿ ಅನ್ಶುಮಲ್ಲಿಕಾ ನಾಯಕಿಯಾಗಿ ಮೊದಲ ಬಾರಿಗೆ ಬಣ್ಣ ಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಮಾತುಕತೆ ಎಲ್ಲವು ಮುಗಿದಿದ್ದು, ಶೀಘ್ರದಲ್ಲಿ ಚಿತ್ರದ ಅಧಿಕೃತ ಘೋಷಣೆಯಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಅನ್ಶುಮಲ್ಲಿಕಾ ಮೊದಲ ಸಿನಿಮಾದಲ್ಲಿ ಧ್ರುವ್​ ಜೊತೆ ರೊಮ್ಯಾನ್ಸ್​ ಮಾಡಲಿದ್ದಾರೆ.

    ‘ಅರ್ಜುನ್ ರೆಡ್ಡಿ’ ಚಿತ್ರದ ತಮಿಳು ರಿಮೇಕ್ ‘ಆದಿತ್ಯ ವರ್ಮ’ ಸಿನಿಮಾದ ಮೂಲಕ ಧ್ರುವ ವಿಕ್ರಮ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಬಳಿಕ ಸಾಂಕ್ರಾಮಿಕ ಸಮಯದಲ್ಲಿ ಒಟಿಟಿಯಲ್ಲಿ ಬಿಡುಗಡೆಯಾದ ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ‘ಮಹಾನ್’ ಚಿತ್ರದಲ್ಲಿ ತಮ್ಮ ತಂದೆಯ ಜೊತೆಗೆ ನಟಿಸಿದ್ದಾರೆ. ಇದೀಗ ಮೂರನೇ ಸಿನಿಮಾಗೆ ಸಿದ್ಧತೆ ಮಾಡಿಕೊಂಡಿದ್ದು, ಅನ್ಶು ಮಲ್ಲಿಕ್ಕಾ ಜೊತೆ ಧ್ರುವ್​ ನಟಿಸಲಿದ್ದಾರೆ ಎಂದು ಟಾಲಿವುಡ್ ಮತ್ತು ಕಾಲಿವುಡ್​ ಗಲ್ಲಿಯಲ್ಲಿ ಸುದ್ದಿಯಾಗಿದೆ. (ಏಜೆನ್ಸೀಸ್​)

    ಚಂಡೀಗಢ ವಿವಿ ಹಾಸ್ಟೆಲ್ ವಿಡಿಯೋ ಲೀಕ್​​: ಯೋಧ ಅರೆಸ್ಟ್​, ಆರೋಪಿ ವಿದ್ಯಾರ್ಥಿನಿಗೂ ಯೋಧನಿಗಿದ್ದ ಸಂಬಂಧವೇನು?

    ನವರಾತ್ರಿ: ರೈಲ್ವೆ ಪ್ರಯಾಣಿಕರಿಗೆ ವಿಶೇಷ ಮೆನು ನೀಡಿದ ರೈಲ್ವೆ ಸಚಿವಾಲಯ

    ಓಟಿಟಿಗೆ ಅನನ್ಯಾ ಪಾಂಡೆ ಆಗಮನ; ‘ಕಾಲ್ ಮೀ ಬೇ’ ವೆಬ್​ಸರಣಿಯಲ್ಲಿ ನಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts