More

    ಪ್ರೀತಿಸಿ ಮದ್ವೆಯಾದ ಸಬ್​ ಇನ್ಸ್​ಪೆಕ್ಟರ್​ ಬಾಳಲ್ಲಿ ದುರಂತ: ಗಂಡನ ಹಿಂದೆಯೇ ಪತ್ನಿಯ ಜೀವನವು ಅಂತ್ಯ

    ಪಟನಾ: ಬಿಹಾರದ ಬರೌನಿ ಪೋಲೀಸ್ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಪ್ರೀತಿ ಶರ್ಮಾ ಎಂಬುವರು ಆತ್ಮಹತ್ಯೆಗೆ ಶರಣಾಗಿರುವುದು ಸ್ಥಳೀಯವಾಗಿ ಭಾರೀ ಚರ್ಚೆಯಾಗುತ್ತಿದೆ.

    ಸಾಕಷ್ಟು ಮಾತ್ರೆ ಸೇವಿಸಿ ನಿತ್ರಾಣ ಸ್ಥಿತಿಯಲ್ಲಿದ್ದ ಪ್ರೀತಿ ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆಗೆ ಸ್ಪಂದಿಸಿದೇ ಪ್ರೀತಿ ಕೊನೆಯುಸಿರೆಳೆದಿದ್ದಾರೆ. ಪ್ರೀತಿ 2018ನೇ ಬ್ಯಾಚ್​ನ ಬಿಹಾರ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​. ಪ್ರಸ್ತುತ ಬರೌನಿ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಕಳೆದ 1 ತಿಂಗಳಿಂದ ಕೆಲಸಕ್ಕೆ ಬಂದಿರಲಿಲ್ಲ. ನಿರಂತರ ರಜೆಯಲ್ಲಿದ್ದರು. ಗಂಡನ ಸಾವಿನ ಆಘಾತದಲ್ಲಿದ್ದ ಪ್ರೀತಿ ತವರು ಮನೆಯಲ್ಲೇ ವಾಸವಿದ್ದರು ಎಂದು ತಿಳಿದುಬಂದಿದೆ.

    ಒಂದು ತಿಂಗಳ ಹಿಂದಷ್ಟೇ ಗಂಡನ ಸಾವು
    ಎಸ್​ಐ ಪ್ರೀತಿ, ರೋಶನ್​ ಕುಮಾರ್​ ಎಂಬುವರನ್ನು ಪ್ರೀತಿಸಿ ಮದುವೆ ಆಗಿದ್ದರು. ರೋಶನ್ ಜಾರ್ಖಂಡ್​ನ​ ಬಕಾರೋ ಜಿಲ್ಲೆಯ ನಿವಾಸಿ. ಪಟನಾದ ಶೂ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಮೌರ್ಯ ದಾರಿಯಲ್ಲಿರುವ ಅಮರ್ ಅಪಾರ್ಟ್​ಮೆಂಟ್​ನ ಫ್ಲ್ಯಾಟ್​ ನಂ 404ರಲ್ಲಿ ವಾಸವಿದ್ದನು. ಡಿಸೆಂಬರ್​ 9ರಂದು ರೋಶನ್​ ಫ್ಲ್ಯಾಟ್​ನ ಕೋಣೆಯೊಳಗಡೆ ನೇಣಿಗೆ ಶರಣಾಗಿದ್ದರು.

    ಗಂಡನ ಸಾವಿನಿಂದ ಪ್ರೀತಿ ಖಿನ್ನತೆಗೆ ಜಾರಿದ್ದರು. ರೋಶನ್​ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೀತಿ ಪ್ರಚೋದನೆ ನೀಡಿದ್ದಾರೆ ಎಂದು ಆಕೆಯ ಅತ್ತೆ ಮನೆಯವರು ಆರೋಪ ಮಾಡಿದ್ದಾರೆ. ಕೆಲವೊಂದು ಕಾರಣಗಳಿಂದ ಇಬ್ಬರ ನಡುವಿನ ಸಂಬಂಧ ಸರಿಯಿರಲಿಲ್ಲ ಎಂಬ ಮಾತುಗಳಿವೆ. ಬಹು ದಿನಗಳಿಂದ ಇಬ್ಬರು ಮಾತನಾಡುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಇದೇ ಕಾರಣದಿಂದ ಬೇಸತ್ತು ರೋಶನ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

    ಇತ್ತ ಗಂಡನ ಆತ್ಮಹತ್ಯೆಯಿಂದ ಪ್ರೀತಿ ಆಘಾತಕ್ಕೆ ಒಳಗಾಗಿದ್ದರು. ಇದೇ ನೋವಿನಲ್ಲಿ ಪ್ರೀತಿಯು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

    ವೈವಾಹಿಕ ಜೀವನಕ್ಕೆ ಕಾಲಿಟ್ಟ ರತ್ನನ್​ ಬೆಡಗಿ: ಬೆಂಗಳೂರಿನಲ್ಲಿ ನಡೆಯಿತು ರೆಬಾ ಮೊನಿಕಾ ವಿವಾಹ

    ನೀವು ಯಾವಾಗಲೂ ನಮ್ಮ ಚಾಂಪಿಯನ್​: ಸೈನಾ ನೆಹ್ವಾಲ್​ ಎದುರು ಮಂಡಿಯೂರಿದ ನಟ ಸಿದ್ಧಾರ್ಥ್!​

    ಆರ್​ಆರ್​ಆರ್​​ನಲ್ಲಿ ಆಲಿಯಾ ಭಟ್​; 5 ನಿಮಿಷಕ್ಕೆ 9 ಕೋಟಿ ರೂಪಾಯಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts