ವೈವಾಹಿಕ ಜೀವನಕ್ಕೆ ಕಾಲಿಟ್ಟ ರತ್ನನ್​ ಬೆಡಗಿ: ಬೆಂಗಳೂರಿನಲ್ಲಿ ನಡೆಯಿತು ರೆಬಾ ಮೊನಿಕಾ ವಿವಾಹ

1217362
Published on

ಬೆಂಗಳೂರು: ನಟ ಡಾಲಿ ಧನಂಜಯ್​ ಅಭಿನಯದ "ರತ್ನನ್​ ಪ್ರಪಂಚ" ಚಿತ್ರದಲ್ಲಿ ನಾಯಕಿ ಪಾತ್ರ ನಿರ್ವಹಿಸಿದ್ದ ನಟಿ ರೆಬಾ ಮೊನಿಕಾ ಜಾನ್​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಮ್ಮ ಬಾಯ್​ಫ್ರೆಂಡ್​ ಜೊಮನ್​ ಜೋಸೆಫ್​ ಜತೆ ಹೊಸ ಬಾಳ ಪಯಣವನ್ನು ರೆಬಾ ಆರಂಭಿಸಿದ್ದಾರೆ. ಇಬ್ಬರ ಮದುವೆ ಕ್ರಿಶ್ಚಿಯನ್​ ಸಂಪ್ರದಾಯದಂತೆ ಕುಟುಂಬ, ಸ್ನೇಹಿತರು ಹಾಗೂ ಬಂಧುಬಳಗದವರ ಸಮ್ಮುಖದಲ್ಲಿ ಬೆಂಗಳೂರಿನ ಚರ್ಚ್​ ಒಂದರಲ್ಲಿ ಸರಳವಾಗಿ ನೆರವೇರಿದೆ.

ಜೋಮನ್​ ಜೋಸೆಫ್​ ಪ್ರೀತಿಯ ಬಲೆಯಲ್ಲಿ ಬಿದ್ದಿರುವ ವಿಚಾರವನ್ನು ಕಳೆದ ವರ್ಷ ರೆಬಾ ಘೋಷಿಸಿದ್ದರು. ಸುಮಾರು ಒಂದು ವರ್ಷಗಳ ಕಾಲ ಡೇಟಿಂಗ್​-ಮೀಟಿಂಗ್​ ನಡೆಸಿದ್ದ ಜೋಡಿ, ಇದೀಗ ವೈವಾಹಿಕ ಬಂಧನದ ಮೂಲಕ ಜೀವನದ ಹೊಸ ಇನ್ನಿಂಗ್ಸ್​ ಅನ್ನು ಒಟ್ಟಿಗೆ ಪ್ರಾರಂಭಿಸಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ, ರೆಬಾ ನಿವಿನ್​ ಪೌಲಿ ಅಭಿನಯದ "ಜಾಕೊಬಿಂಟೆ ಸ್ವರ್ಗರಾಜ್ಯಂ" ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಸೂಪರ್​ ಸ್ಟಾರ್​ ವಿಜಯ್​ ಅಭಿನಯದ ಬಿಗಿಲ್​ ಚಿತ್ರದಲ್ಲಿ ನಟಿಸುವ ಮೂಲಕ ಸಾಕಷ್ಟು ಖ್ಯಾತಿ ಪಡೆದುಕೊಂಡರು. ಕೊನೆಯದಾಗಿ ಥೊವಿನೋ ಅಭಿನಯದ ಫಾರೆನ್ಸಿಕ್​ ಮತ್ತು ಧನಂಜಯ್​ ಅಭಿನಯದ ರತ್ನನ್​ ಪ್ರಪಂಚ ಚಿತ್ರದಲ್ಲಿ ರೆಬಾ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net