More

    ಆರ್​ಆರ್​ಆರ್​​ನಲ್ಲಿ ಆಲಿಯಾ ಭಟ್​; 5 ನಿಮಿಷಕ್ಕೆ 9 ಕೋಟಿ ರೂಪಾಯಿ..

    ‘ಆರ್​ಆರ್​ಆರ್’ ಚಿತ್ರದಲ್ಲಿ ನಟಿಸುವುದಕ್ಕೆ ಆಲಿಯಾ ಭಟ್ ಎಷ್ಟು ಪಡೆದಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇತ್ತು. ಅದಕ್ಕೆ ಕಾರಣ, ಚಿತ್ರದ ಹೀರೋಗಳಾದ ಜ್ಯೂ.ಎನ್.ಟಿ. ಆರ್ ಮತ್ತು ರಾಮ್ರಣ್ ತೇಜಗೆ ಚಿತ್ರತಂಡದವರು ತಲಾ 40 ಕೋಟಿ ರೂ.ಗಳನ್ನು ಸಂಭಾವನೆಯನ್ನಾಗಿ ನೀಡಿದ್ದರಂತೆ. ಚಿತ್ರದ ನಾಯಕರಿಗೆ ಅಷ್ಟೊಂದು ಸಂಭಾವನೆ ಕೊಟ್ಟಿರುವಾಗ, ನಾಯಕಿಗೆ ಎಷ್ಟು ಕೊಟ್ಟಿರಬಹುದು ಎಂಬ ಪ್ರಶ್ನೆ ಸಹಜ ಮತ್ತು ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

    ಐದು ನಿಮಿಷಗಳ ಪಾತ್ರಕ್ಕೆ ಆಲಿಯಾಗೆ ಒಂಬತ್ತು ಕೋಟಿ ರೂ.ಗಳನ್ನು ಸಂಭಾವನೆಯಾಗಿ ನೀಡಲಾಗಿದೆಯಂತೆ. ಕೇವಲ ಐದು ನಿಮಿಷಕ್ಕೆ ಅಷ್ಟೊಂದು ಸಂಭಾವನೆಯಾ ಎಂದು ಆಶ್ಚರ್ಯವಾಗಬಹುದು. ಅದಕ್ಕೆ ಕಾರಣವೂ ಇದೆ. ‘ಆರ್​ಆರ್​ಆರ್’ ಹೇಳಿಕೇಳಿ ಪ್ಯಾನ್ ಇಂಡಿಯಾ ಚಿತ್ರ.

    ಆದರೆ, ಎನ್.ಟಿ.ಆರ್ ಮತ್ತು ರಾಮ್ರಣ್ ದಕ್ಷಿಣ ಭಾರತದಲ್ಲಿ ಮಾತ್ರ ಜನಪ್ರಿಯರು. ಉತ್ತರ ಭಾರತದಲ್ಲಿ ಜನರಿಗೆ ಅವರ ಪರಿಚಯ ಇದೆಯಾದರೂ, ಚಿತ್ರವನ್ನು ಮುನ್ನಡೆಸುವುದಕ್ಕೆ ಇನ್ನೊಂದು ಜನಪ್ರಿಯ ಮುಖ ಚಿತ್ರತಂಡಕ್ಕೆ ಬೇಕಾಗಿತ್ತಂತೆ. ಅದೇ ಕಾರಣಕ್ಕೆ, ಚಿತ್ರದಲ್ಲಿನ ಇನ್ನೆರಡು ಪ್ರಮುಖ ಪಾತ್ರಗಳಿಗೆ ಆಲಿಯಾ ಮತ್ತು ಅಜಯ್ ದೇವಗನ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಆಲಿಯಾಗೆ 9 ಕೋಟಿ ರೂ ಸಂಭಾವನೆ ನೀಡಿದರೆ, ಅಜಯ್ ದೇವಗನ್​ಗೆ 35 ಕೋಟಿ ರೂ ಸಂಭಾವನೆ ನೀಡಲಾಗಿದೆಯಂತೆ – ಏಜೆನ್ಸೀಸ್

    ಎಲ್ಲ ಮುನ್ನೆಚ್ಚರಿಕೆ ವಹಿಸಿದ್ರೂ ಹೀಗಾಯ್ತು ಎಂದ ಮಹಾನಟಿ; ಕೀರ್ತಿ ಸುರೇಶ್​​ಗೂ ಕೋವಿಡ್ ಪಾಸಿಟಿವ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts