More

    ಸಿನಿ ಮಂದಿಯ ಹುಬ್ಬೇರಿಸಿದ ಸಮಂತಾ: ಸೌತ್​ ಬ್ಯೂಟಿಯ ಇನ್​ಸ್ಟಾಗ್ರಾಂ ಆದಾಯ ಕೇಳಿದ್ರೆ ಬೆರಗಾಗ್ತೀರಾ?

    ಹೈದರಾಬಾದ್​: ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ಡಿವೋರ್ಸ್​ ಹಂತಕ್ಕೆ ತಲುಪಿದೆ ಎಂಬ ವಿಚಾರ ಬೆಳಕಿಗೆ ಬಂದಾಗಿನಿಂದ ಸಮಂತಾ ಟಾಕ್​ ಆಫ್​ ದಿ ಟೌನ್​ ಆಗಿದ್ದಾರೆ. ಅಕ್ಕಿನೇನಿ ಕುಟುಂಬದಿಂದ ಸಮಂತಾ ಅಂತರ ಕಾಯ್ದುಕೊಂಡಿದ್ದು, ಇಬ್ಬರ ನಡುವೆ ಏನೂ ಸರಿಯಿಲ್ಲ ಎಂಬುದು ಬಹುತೇಕ ಖಚಿವಾದಂತಿದೆ.

    ಸಮಂತಾ ವೈವಾಹಿಕ ಜೀವನವನ್ನು ಹೊರತುಪಡಿಸಿದರೆ, ಇನ್ನೊಂದು ವಿಚಾರದಲ್ಲಿ ಸಮಂತಾ ಸದ್ಯ ಭಾರಿ ಸುದ್ದಿಯಾಗಿದ್ದಾರೆ. ಹೌದು, ಸಮಂತಾ ಅವರು ತಮ್ಮ ಸೈಡ್​ ಇನ್​ಕಮ್​ನಿಂದ ಎಲ್ಲರ ಹುಬ್ಬೇರಿಸಿದ್ದಾರೆ. ಸಿನಿಮಾದಿಂದಾಚೆಗೆ ಸಮಂತಾ ಭಾರಿ ಹಣವನ್ನು ಸಂಪಾದಿಸುತ್ತಾರೆ. ಜಾಲತಾಣದಲ್ಲಿ ಸದಾ ತಮ್ಮ ಮಾದಕ ಫೋಟೋಗಳನ್ನು ಹರಿಬಿಡುವ ಸಮಂತಾ, ಇನ್​ಸ್ಟಾಗ್ರಾಂನಲ್ಲಿ 15 ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್​ ಹೊಂದಿದ್ದಾರೆ.

    ತಮ್ಮ ಜಾಲತಾಣ ಖಾತೆ ಮೂಲಕ ಸಮಂತಾ ಲೂಯಿಸ್ ವಿಟಾನ್ ಬಟ್ಟೆ ಮತ್ತು ಬ್ಯಾಗ್‌ಗಳು ಸೇರಿದಂತೆ ಅನೇಕ ಬ್ರ್ಯಾಂಡ್​ಗಳನ್ನು ಪ್ರಚಾರ ಮಾಡುತ್ತಾರೆ. ಪ್ರತಿಯೊಂದು ಬ್ರ್ಯಾಂಡ್​ ಪ್ರಚಾರಕ್ಕೂ ಸಮಂತಾ ಪೊಸ್ಟ್​ ಆಧಾರದ ಮೇಲೆ ಬೆಲೆ ನಿಗದಿ ಮಾಡುತ್ತಾರೆ. ಒಂದು ಮೂಲಗಳ ಪ್ರಕಾರ ಇನ್​ಸ್ಟಾಗ್ರಾಂನ ಪ್ರತಿ ಪೋಸ್ಟ್​ಗೆ 7 ರಿಂದ 13 ಲಕ್ಷವನ್ನು ಸಮಂತಾ ಚಾರ್ಜ್​ ಮಾಡುತ್ತಾರಂತೆ. ಪ್ರತಿ ಇನ್​ಸ್ಟಾಗ್ರಾಂ ಸ್ಟೋರಿಗೆ ಶೇ. 70 ರಷ್ಟು ಚಾರ್ಜ್​ ಮಾಡುತ್ತಾರಂತೆ.

    ಕಳೆದ 30 ದಿನಗಳಲ್ಲಿ ಲೂಯಿಸ್ ವಿಟಾನ್, ನೀಮನ್, ನೀತಾ ಲುಲ್ಲಾ, ಮೈ ಫಿಟ್ನೆಸ್, ಮಿಂತ್ರ, ಡ್ರೂಲ್ಸ್ ಸೇರಿದಂತೆ ಅನೇಕ ಉತ್ಪನ್ನಗಳ ಬಗ್ಗೆ ಸಮಂತಾ ಪಾವತಿಸಿದ ಪೋಸ್ಟ್​ಗಳನ್ನು ಮಾಡಿದ್ದಾರೆ. ಇದಿಷ್ಟು ಬ್ರ್ಯಾಂಡ್​ಗಳಿಗೆ ಸಮಂತಾ ಹಣ ಪಡೆದಿದ್ದು, ಒಂದು ಅಂದಾಜಿನ ಪ್ರಕಾರ ಒಟ್ಟು 1.5 ಕೋಟಿ ರೂ. ಇನ್​ಸ್ಟಾಗ್ರಾಂನಿಂದಲೇ ಸಂಪಾದನೆ ಮಾಡಿದ್ದಾರೆಂದು ತಿಳಿದುಬಂದಿದೆ.

    ಸದಾ ಮಾದಕ ಪೋಟೋಗಳನ್ನು ಸಮಂತಾ ಹರಿಬಿಡುವುದರಿಂದ ಅನೇಕ ಯುವಕರು ಸಮಂತಾ ಇನ್​ಸ್ಟಾಗ್ರಾಂಗೆ ಆಕರ್ಷಿತರಾಗಿದ್ದಾರೆ. ಇದರಿಂದಾಗಿ ಹೆಚ್ಚು ಬ್ರ್ಯಾಂಡ್​ಗಳು ಸಮಂತಾರನ್ನು ಹುಡುಕಿಕೊಂಡು ಬರುತ್ತಿವೆ. ಹೀಗಾಗಿ ಸಮಂತಾ ದುಬಾರಿ ಸೋಶಿಯಲ್​ ಮೀಡಿಯಾ ಇನ್ಫ್ಲ್ಯುಯೆನ್ಸರ್​ ಆಗಿದ್ದಾರೆ. (ಏಜೆನ್ಸೀಸ್​)

    ರಾಮ್ ಚರಣ್​ ಬೇಡ ಅಂದಿದ್ರೂ ಸಮಂತಾ ಲಿಪ್​ಲಾಕ್: ರಂಗಸ್ಥಳಂ ಚಿತ್ರದ ಹಿಂದಿನ ಸೀಕ್ರೆಟ್​ ಬಿಚ್ಚಿಟ್ಟ ನಿರ್ದೇಶಕ!

    ಲ್ಯಾಗ್​ ಮಂಜು-ದಿವ್ಯಾ ಸುರೇಶ್​ ಬಗ್ಗೆ ಹರಿದಾಡ್ತಿರೋ ಸುದ್ದಿ ನಿಜನಾ? ಹೌದು ಅನ್ನುವಂತಿದೆ ಈ ವೈರಲ್​ ಫೋಟೋ!

    ಅನುಶ್ರೀಗೆ ಮಂಗ್ಳೂರಿನ 14 ಕೋಟಿ, ಬೆಂಗ್ಳೂರಿನ 4 ಕೋಟಿಯ ಮನೆ ಹೇಗೆ ಬಂತು? ಸಂಬರಗಿ ಸ್ಫೋಟಕ ಹೇಳಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts