ಅನುಶ್ರೀಗೆ ಮಂಗ್ಳೂರಿನ 14 ಕೋಟಿ, ಬೆಂಗ್ಳೂರಿನ 4 ಕೋಟಿಯ ಮನೆ ಹೇಗೆ ಬಂತು? ಸಂಬರಗಿ ಸ್ಫೋಟಕ ಹೇಳಿಕೆ!

Sambaragi
Published on

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಕೇಸ್​ ಸಂಬಂಧ ಮಂಗಳೂರು ಪೊಲೀಸರು ಸಲ್ಲಿರುವ ಚಾರ್ಜ್​ಶೀಟ್​ನಲ್ಲಿ ಅನುಶ್ರೀ ಹೆಸರು ಕೈಬಿಟ್ಟ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಇಡೀ ಪ್ರಕರಣದಲ್ಲಿ ಅನುಶ್ರೀ ಅವರನ್ನು ಬಚಾವ್​ ಮಾಡುವ ಕೆಲಸ ನಡೆದಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂಬರಗಿ, ಸೆಪ್ಟೆಂಬರ್‌ 2020ರಲ್ಲಿ ನಾನು ಶುಗರ್ ಡ್ಯಾಡಿ ಅಂತ ಟ್ವೀಟ್ ಮಾಡಿದ್ದೆ. ಇದಾದ ಬಳಿಕ ಮಾಜಿ ಮುಖ್ಯಮಂತ್ರಿಯೊಬ್ಬರು ಊಹಾಪೋಹಕ್ಕೆ ನಾಂದಿ ಹಾಡಿದ್ದರು. ಈ ಪ್ರಕರಣದಲ್ಲಿ ಅನುಶ್ರೀ ಅವರನ್ನು ನಿರ್ಲಕ್ಷಿಸಲಾಗಿದೆ. ಈ ಪ್ರಕರಣದ ತನಿಖೆ ಮಾಡ್ತಿದ್ದ ಶಿವಪ್ರಕಾಶ್​ರನ್ನು ವರ್ಗಾವಣೆ ಮಾಡಿದರು. ಪೊಲೀಸ್ ವಿಚಾರಣೆಗೆ ಬರುವುದಕ್ಕೆ ಅನುಶ್ರೀ ನಾಟಕ ಆಡಿದರು. ವಿಚಾರಣೆ ಬಳಿಕ ಫೇಸ್​ಬುಕ್ ಲೈವ್​ ಬಂದು ನಾಟಕ ಮಾಡಿ, ನನ್ನ ಸ್ತ್ರೀವಿರೋಧಿ ಅನ್ನೋತರ ಮಾಡಿದರು ಎಂದು ಸಂಬರಗಿ ಹೇಳಿದರು.

ಈ ಪ್ರಕರಣದಲ್ಲಿ ಮಂಗಳೂರು ಪೊಲೀಸ್ ವೀಕ್ ಆಗಿದ್ದು ಏಕೆ? ಶಿವಪ್ರಕಾಶ್ ನಾಯಕ್ ಅವರನ್ನು ಎತ್ತಂಗಡಿ ಮಾಡಿದ್ದೇಕೆ? ಎಸಿಪಿ ಗಾವ್ಕಂಕರ್ ಸರಿಯಾದ ತನಿಖೆ ಮಾಡಿಲ್ಲ. ತರುಣ್ ಹೇಳಿಕೆಯಲ್ಲೆ ಅನುಶ್ರೀ ಹೆಸರು ಕೂಡ ಇದೆ. ಆದರೆ, ಚಾರ್ಜ್​ಶೀಟ್​ನಲ್ಲಿ ತರುಣ್ ಹೆಸರನ್ನು ಕೈ ಬಿಟ್ಟಿದ್ದು ಯಾಕೆ? ಅಪ್ರಭಾವಿ ವ್ಯಕ್ತಿ ಮುಖ್ಯಮಂತ್ರಿ ಭೇಟಿಯಿಂದ ಈ ಪ್ರಕರಣ ವೀಕ್ ಆಗಿದೆ. ಮಂಗಳೂರಿನ ಸಿಸಿಬಿಯಲ್ಲಿ ಲೋಪದೋಷ ಕಾಣ್ತಿದೆ. ಅನುಶ್ರೀ ಬಚಾವ್ ಮಾಡುವ ಸಲುವಾಗಿ ತರುಣ್ ಅವರನ್ನು ಬಿಟ್ಟು ಕಳಿಸಲಾಗಿದೆ. ಅಲ್ಲೇನು ಫ್ಯಾಷನ್ ಶೋ ನಡೀತಿತ್ತಾ? ಎಂದು ಪ್ರಶ್ನಿಸಿದ್ದಾರೆ.

ಮಂಗಳೂರಿನ ಸಿಸಿಬಿ ಕೇಸ್ ಯಾಕೆ ವೀಕ್ ಆಯ್ತು? ಇನ್ಸ್​ಪೆಕ್ಟರ್​ ಶಿವ ಪ್ರಕಾಶ್ ನಾಯಕ್‌ರನ್ನು ಯಾಕೆ ಎತ್ತಂಗಡಿ ಮಾಡಿದ್ರು? ಡಿಸಿಪಿ ಗಾವ್ಕಕರ್ ಯಾಕೆ ಸರಿಯಾಗಿ ತನಿಖೆ ಮಾಡಲಿಲ್ಲ? ಯಾಕೆ ತರುಣ್‌ನನ್ನು ಚಾರ್ಜ್ ಶೀಟ್‌ಗೆ ಉಲ್ಲೇಖ ಮಾಡಿಲಿಲ್ಲ? ಇದಕೆಲ್ಲ ಗಾಂವ್ಕರ್ ಅವರು ಉತ್ತರ ಕೊಡ್ಬೇಕೆಂದು ಸಂಬರಗಿ ಒತ್ತಾಯಿಸಿದರು.

ಈ ಪ್ರಕರಣದಲ್ಲಿ ತುಂಬಾ ಲೋಪದೋಷ ಎದ್ದು ಕಾಣ್ತಿದೆ. ಆಗಿನ‌ ಡಿಸಿಪಿ ಹಾಗೂ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯತನ ಕಾಣ್ತಿದೆ. ಸಂಪೂರ್ಣ ಅನುಶ್ರೀ ಬಚಾವ್ ಮಾಡೋಕೆ ಅವ್ರನ್ನು ಬಿಟ್ಟುಕೊಡ್ತಾರೆ. ಈಗಿನ ಸಿಎಂ ಬೊಮ್ಮಾಯಿವರು ಇದಕ್ಕೆ ಸರಿಯಾದ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿಯವರಿಗೆ ಮನವಿ ಮಾಡ್ತೇನೆ. ಈ ಪ್ರಕರಣವನ್ನು ಮರುತನಿಖೆ ನಡೆಸಬೇಕು. ಅನುಶ್ರೀಯನ್ನು ಕರೆಸಿ ಮತ್ತೆ ವಿಚಾರಣೆ ಮಾಡಬೇಕು. ಪ್ರಕರಣದಲ್ಲಿ ಅನುಶ್ರೀ ಹೆಸರನ್ನು ಸೇರಿಸಬೇಕು. ಅನುಶ್ರೀ ಡ್ರಗ್ ಕನ್ಸೂಮರ್ ಅಲ್ಲ, ಸಪ್ಲೈಯರ್. ಅನುಶ್ರೀಗೆ ಕಂಬಿ ಹಿಂದೆ ಹೋಗೋ ಎಲ್ಲಾ ಲಕ್ಷಣಗಳು ಕಂಡಬರ್ತಿದೆ. ಕಿಶೋರ್ ಹೇಳಿಕೆಯಲ್ಲಿ ಎಲ್ಲ ಸ್ಪಷ್ಟವಾಗಿದೆ ಎಂದು ಸಂಬರಗಿ ಹೇಳಿದರು.

ಅನುಶ್ರೀಗೆ 14 ಕೋಟಿ ರೂಪಾಯಿಯ ಮಂಗಳೂರಿನ ಮನೆ ಹಾಗೂ 4 ಕೋಟಿ ರೂಪಾಯಿಯ ಬೆಂಗಳೂರಿನ ಮನೆ ಟಿವಿ ಶೋನಿಂದ ಬಂದಿದೆ ಅಂದ್ರೆ ನಾನು ಅವರನ್ನು ಮೆಚ್ಚುತ್ತೇನೆ. ಶುಗರ್ ಡ್ಯಾಡಿ ವಿಷಯದಲ್ಲಿ ಆಗಿನ ಮುಖ್ಯಮಂತ್ರಿಗಳು ಅಂತ ಹೇಳಿದ್ದೆ. ಕಿಶೋರ್​ಗಿಂತ ಹೆಚ್ಚಾಗಿ ತರುಣ್ ಬಳಿ ಹೆಚ್ಚು ಆಸಕ್ತಿ‌ ಇದೆ. ಅಕಿಲ್ ನವೀಶಿಲ್, ಕಿಶೋರ್ ಅಮನ್ ಶೆಟ್ಟಿ, ಮಹಮದ್ ಶಕೀದ್, ಫ್ರಾಂಕ್ ಸಂಡೆ ಇಬ್ಬಚ್ಚು, ಶಮೀನ್ ಫರ್ನಂಢೀಶ್ ಆಲಿಸ್ ಶಾಮ್ ಇವರೆಲ್ಲಾ ಮಂಗಳೂರಿನ ಇನ್ವೆಸ್ಟಿಗೇಷನ್ ನಲ್ಲಿ ಬಂದಿರೋ ಹೆಸರು ಆದರೆ ತರುಣ್ ಹೆಸರಿಲ್ಲ. ತರುಣ್ ಹೇಳಿಕೆ ಚಾರ್ಜ್ ಶೀಟ್ ನಲ್ಲಿ ಯಾಕಿಲ್ಲ. ಈಗಲೂ ತರುಣ್ ಹೆಸರನ್ನು ಸೇರಿಸಬಹುದು. ನಿವೃತ್ತ ಅಧಿಕಾರಿಯಿಂದ ಈ ಪ್ರಕರಣವನ್ನು ಹಳ್ಳ ಹಿಡಿಸಲಾಗಿದೆ ಎಂದು ನಾನು ನೇರವಾಗಿ ಆಪಾದನೆ ಮಾಡ್ತೇನೆ. ಸರ್ಕಾರ ಕರ್ನಾಟಕ ಡ್ರಗ್ ಮುಕ್ತ ಅಂತ ಹೇಳೋದಾದ್ರೆ ಮತ್ತೆ ಅನುಶ್ರೀ ಅವರನ್ನ ತನಿಖೆಗೆ ಕರೆಯಬೇಕು. ಉತ್ತರ ಪ್ರದೇಶ್, ಬಿಹಾರ್, ವೆಸ್ಟ್ ಬೆಂಗಾಲ್​ನಿಂದ ನನಗೆ ಬೆದರಿಕೆ ಕರೆ ಬರುತ್ತದೆ. ಈ ವಿಚಾರವಾಗಿ ನಾನು ಪೊಲೀಸ್ ಕಂಪ್ಲೈಂಟ್ ನೀಡಿದ್ದೆ. ಅವರು ನನಗೆ ಮೊಬೈಲ್ ನಂಬರ್​, ಮನೆ, ಕಾರ್ ಚೇಂಜ್ ಮಾಡುವಂತೆ ಹೇಳಿದ್ದಾರೆಂದರು.

ಸ್ಯಾಂಡಲ್​ವುಡ್ ಸ್ಟಾರ್ ನಟ, ನಟಿ ಇಬ್ಬರು ಡ್ರಗ್ ಒವರ್ ಡೋಸ್​ನಿಂದ ಸಾವಿಗೀಡಾಗಿದ್ದಾರೆ. ನಾನು 'ಶುಗುರ್ ಡ್ಯಾಡಿ' ಅನ್ನೊ ಪುಸ್ತಕ ಬರಿತಿದ್ದೀನಿ, ಶೀಘ್ರದಲ್ಲೇ ಆ ಬುಕ್ ಹೊರ ಬರಲಿದೆ. ಅನುಶ್ರೀ ಹೆಸರು ಸಹ ಅದರಲ್ಲಿದೆ. ಈಗ ಆ ಪುಸ್ತಕಕ್ಕೆ ಮರುಜೀವ ಬಂದಂತಾಗಿದೆ. ಕರೊನದಿಂದ ಉಡ್ತಾ ಕರ್ನಾಟಕ ಆಗೋದು ತಪ್ಪಿದೆ. ಲಾಕ್​ಡೌನ್ ಇದ್ದಿದ್ದರಿಂದ ಶಾಲಾ ಕಾಲೇಜ್ ರಜೆ ಇದ್ದ ಕಾರಣ ಡ್ರಗ್ ದಂಧೆ ಕಡಿಮೆ ಆಗಿದೆ. ನವಂಬರ್ 1ಕ್ಕೆ ನಶೆ ಎಂದರೆ ಅಂತ ನಾಗೇಂದ್ರ ಪ್ರಸಾದ್ ಬರೆದಿರುವ ಹಾಡು ಹಾಗೂ ನನ್ನ 'ಶುಗರ್ ಡ್ಯಾಡಿ' ಪುಸ್ತಕ ರಿಲೀಸ್ ಆಗಲಿದೆ ಎಂದು ಬೆಂಗಳೂರಿನಲ್ಲಿ ಪ್ರಶಾಂತ್ ಸಂಬರಗಿ ಸ್ಫೋಟಕ ಹೇಳಿಕೆ ನೀಡಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net