More

    ಕೇಂದ್ರ ಗೃಹಸಚಿವ ಅಮಿತ್​ ಷಾ ಬರ್ತಡೇಗೆ ಶುಭಕೋರಿ ಸಿಕ್ಕಾಪಟ್ಟೆ ಟ್ರೋಲ್​ ಆದ ಸಾರಾ ಅಲಿ ಖಾನ್..!​

    ಮುಂಬೈ: ಕಳೆದ 12 ತಿಂಗಳಿಂದ ಬಾಲಿವುಡ್​ ಇಂಡಸ್ಟ್ರಿ ಮಾದಕದ್ರವ್ಯ ನಿಯಂತ್ರಣ ಸಂಸ್ಥೆ (ಎನ್​ಸಿಬಿ) ಹಾಗೂ ಜಾರಿ ನಿರ್ದೇಶನಾಲಯ (ಇಡಿ)ದ ಕಣ್ಗಾವಲಿನಲ್ಲಿದೆ. ಬಾಲಿವುಡ್​ ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ಮಾದಕ ಜಾಲದ ನಂಟು ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಎರಡು ಸಂಸ್ಥೆಗಳು ತನಿಖೆ ನಡೆಸುತ್ತಿವೆ.

    ಈ ಎಲ್ಲ ಬೆಳವಣಿಗೆಯಿಂದ ಬಾಲಿವುಡ್​ ಸೆಲೆಬ್ರಿಟಿಗಳಲ್ಲಿ ಭಯ ಶುರುವಾಗಿದೆ. ಯಾವಾಗ? ಯಾರು? ದಾಳಿ ಮಾಡುತ್ತಾರೆಂಬ ಆತಂಕವಿದೆ. ಅದರಲ್ಲೂ ಇತ್ತೀಚೆಗೆ ಮಾದಕ ಜಾಲ ನಂಟು ಬಾಲಿವುಡ್​ಗೂ ಬೆಸೆದುಕೊಂಡಿರುವುದರಿಂದ ಯುವ ಕಲಾವಿದರಲ್ಲಿ ಆತಂಕ ಆವರಿಸಿದೆ. ಶಾರುಖ್​ ಪುತ್ರ ಆರ್ಯನ್​ ಖಾನ್ ಬಂಧನವಾದ ಬಳಿಕ ಬಾಲಿವುಡ್​ ಬೆದರಿ ಹೋಗಿದೆ. ನಿನ್ನೆಯಷ್ಟೇ ಶಾರುಖ್​ ಮನೆ ಮೇಲೂ ದಾಳಿಯಾಗಿದೆ. ಇದರಿಂದಾಗಿ ಬಾಲಿವುಡ್​ ಮಂದಿ ತುಂಬಾ ಹೆದರಿದ್ದಾರೆ. ಸಾರಾ ಅಲಿ ಖಾನ್​ಗೂ ಇದೇ ಭಯ ಕಾಡುತ್ತಿರಬಹುದು. ಹೀಗಂತ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ​

    ನಿನ್ನೆಯಷ್ಟೇ (ಅ.22) ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರಾ ಅವರು ಟ್ವೀಟ್​ ಮಾಡುವ ಮೂಲಕ ಅಮಿತ್​ ಷಾ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಆದರೆ, ಇದು ನೆಟ್ಟಿಗರ ಟ್ರೋಲ್​ಗೆ ಗುರಿಯಾಗಿದೆ.

    ಎನ್​ಸಿಬಿ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ ಯೋಚನೆ ಮಾಡಬೇಡಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇದೊಂದು ಹೊಸ ದಾರಿ ಎಂದು ಸಮಾಜವಾದಿ ಪಕ್ಷದ ನಾಯಕ ಅಲಿ ಖಾನ್​ ಮಹ್ಮೂದಬಾದ್​ ವ್ಯಂಗ್ಯವಾಡಿದ್ದಾರೆ. ಹೀಗೇ ಅನೇಕರು ಸಾರಾ ಅಲಿಖಾನ್​ ಅವರನ್ನು ಟ್ರೋಲ್​ ಮಾಡಿದ್ದಾರೆ. (ಏಜೆನ್ಸೀಸ್​)

    ಹೊಟ್ಟೆ ಬಿಟ್ಕೊಂಡು ಕೆಲಸ ಮಾಡೋ ಪೊಲೀಸರಿಗೆ ಶಾಕಿಂಗ್​ ನ್ಯೂಸ್ ಕೊಟ್ಟ​ ಎಡಿಜಿಪಿ ಅಲೋಕ್​ ಕುಮಾರ್..!​

    ಶಾಲಾಧ್ಯಕ್ಷನನ್ನು ನಂಬಿ ಕಾರಿನಲ್ಲಿ ಹೋದ ಶಿಕ್ಷಕಿಗೆ ಕಾದಿತ್ತು ಶಾಕ್​! ಮೊದಲೇ ಹಳ್ಳ ತೋಡಿದ್ದ ಕಿರಾತಕ

    ಯುವತಿಗೆ ಲೈಂಗಿಕ ಕಿರುಕುಳ: ವಕೀಲ ಕೆ.ಎಸ್​.ಎನ್​. ರಾಜೇಶ್​ ಸನ್ನದು ಅಮಾನತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts