More

    ಹೊಟ್ಟೆ ಬಿಟ್ಕೊಂಡು ಕೆಲಸ ಮಾಡೋ ಪೊಲೀಸರಿಗೆ ಶಾಕಿಂಗ್​ ನ್ಯೂಸ್ ಕೊಟ್ಟ​ ಎಡಿಜಿಪಿ ಅಲೋಕ್​ ಕುಮಾರ್..!​

    ಬೆಂಗಳೂರು: ಪೊಲೀಸರೆಂದರೆ ನೋಡಲು ಫಿಟ್​ ಆಗಿರಬೇಕು. ಕೆಲಸಕ್ಕೆ ಸೇರಲು ಸಾಕಷ್ಟು ವರ್ಕೌಟ್​ ಮಾಡುವ ಪೊಲೀಸರು ಕೆಲಸ ಸಿಕ್ಕಿದ ಬಳಿಕ ಬಹುತೇಕರು ಹೊಟ್ಟೆ ಬೆಳೆಸಿಕೊಳ್ಳುತ್ತಾರೆ. ಅಂತಹ ಪೊಲೀಸರಿಗೆ ಖಡಕ್​ ಐಪಿಎಸ್​ ಅಧಿಕಾರಿ ಎಂದೇ ಹೆಸರಾಗಿರುವ ಕೆಎಸ್​ಆರ್​ಪಿ ಎಡಿಜಿಪಿ ಅಲೋಕ್​ ಕುಮಾರ್​ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

    ಹೊಟ್ಟೆ ಮುಂದಕ್ಕೆ ಬಿಟ್ಟುಕೊಂಡಿದ್ರೆ ಅತ್ಯುನ್ನತ ಪದಕಗಳಿಗೆ ಶಿಫಾರಸ್ಸು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇನ್ಮೇಲೆ ಮುಖ್ಯಮಂತ್ರಿ ಪದಕ ಅಥವಾ ರಾಷ್ಟ್ರಪತಿ ಪದಕವಾಗಲಿ ಹೊಟ್ಟೆ ಇರುವವರಿಗೆ ಸಿಗುವುದಿಲ್ಲ ಎಂದು ಎಚ್ಚರಿಸಿರುವ ಅಲೋಕ್​ ಕುಮಾರ್​ ಎರಡು ತಿಂಗಳಲ್ಲಿ ಹೊಟ್ಟೆ ಕರಿಗಿಸಿಲ್ಲ ಅಂದ್ರೆ ಶಿಸ್ತು ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ.

    ಬೆಂಗಳೂರು ಕೆಎಸ್​ಆರ್​ಪಿಯಲ್ಲಿ 1010 ಜನ‌ ಸಿಬ್ಬಂದಿ ಇದ್ದಾರೆ. ಅದರಲ್ಲಿ 162 ಸಿಬ್ಬಂದಿಗೆ ಭಾರೀ ಹೊಟ್ಟೆ ಇದೆ. ಹೀಗಾಗಿ ಅವರನ್ನು ಗ್ರೌಂಡ್​ನಲ್ಲಿ ನಿಲ್ಲಿಸಿ ವಾರ್ನ್ ಮಾಡಿದ್ದಾರೆ. ಏನ್ ಮಾಡ್ತಿರೋ ಗೊತ್ತಿಲ್ಲ, ಇನ್ನು ಎರಡು ತಿಂಗಳಲ್ಲಿ ಹೊಟ್ಟೆ ಕರಿಗಿಸಲೇಬೇಕು ಎಂದು ಅಲೋಕ್ ಕುಮಾರ್ ಗಡುವು ನೀಡಿದ್ದಾರೆ.

    ಹೊಟ್ಟೆ ಬಿಟ್ಟಿಕೊಂಡಿರುವುದನ್ನು ಕರಗಿಸುವ ಜತೆಗೆ ತೂಕದ ಮಿತಿಯನ್ನು ಅಲೋಕ್​ ಕುಮಾರ್​ ನೀಡಿದ್ದಾರೆ. 175 ಸೆ.ಮೀ ಉದ್ದ ಇದ್ರೆ ಅವರು 75 KG ತೂಕದ ಜತೆಗೆ 10 ಕೆಜಿ ವಿನಾಯತಿ ಅಂದ್ರೆ 85 ಕೆ.ಜಿ ಇರಬಹುದು. 185 ಸೆ.ಮೀ ಉದ್ದ ಇದ್ರೆ 10 ಕೆ.ಜಿ ವಿನಾಯತಿ ಸೇರಿ 95 ಕೆ.ಜಿ ಇರಬಹುದು. ರಾಜ್ಯಾಂದ್ಯಂತ ಇರೋ ಕೆಎಸ್​ಆರ್​ಪಿ ಸಿಬ್ಬಂದಿಯಲ್ಲಿ ಹೆಚ್ಚು ತೂಕ ಇರೋರು ತೂಕ ಇಳಿಸುವಂತೆ ಅಲೋಕ್​ ಕುಮಾರ್​ ಸೂಚನೆ ನೀಡಿದ್ದಾರೆ.

    ಇಡೀ‌ ರಾಜ್ಯಾದ್ಯಂತ 10 ಸಾವಿರಕ್ಕೂ ಅಧಿಕ ಕೆಎಸ್​ಆರ್​ಪಿ ಸಿಬ್ಬಂದಿ ಇದ್ದಾರೆ. ನಿಗದಿ ತೂಕಕ್ಕಿಂತ 3 ಸಾವಿರ ಸಿಬ್ಬಂದಿ ಹೆಚ್ಚು ತೂಕವನ್ನು ಹೊಂದಿದ್ದಾರೆ. ಸದ್ಯ ದಿನ‌ಕಳೆದಂತೆ ಸಿಬ್ಬಂದಿ ತೂಕವನ್ನು ಇಳಿಸಿಕೊಳ್ಳುತ್ತಿದ್ದಾರೆ. ಆರೋಗ್ಯದ ಹಿತದೃಷ್ಟಿಯಿಂದ ಈ ರೀತಿ ನಿರ್ಧಾರ ಮಾಡಿರುವುದಾಗಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

    ಇನ್ನು ಡೊಳ್ಳು ಹೊಟ್ಟೆ ಕರಗಿಸದಿದ್ದರೆ ಅಂತಹ ಪೊಲೀಸರಿಗೆ ರಾಷ್ಟಪತಿ ಪದಕ ಸಿಗುವುದಿಲ್ಲ. ರಾಷ್ಟ್ರಪತಿ ಪದಕ ಶಿಫಾರಸ್ಸಿಗೆ ಫಿಟ್ ಅಂಡ್ ಫೈನ್ ಆಗಿರಲೇಬೇಕು. ಉತ್ತಮ ಸೇವೆ ಜತೆಗೆ ಸದೃಢ ಆರೋಗ್ಯ ಹೊಂದಿರಲೇಬೇಕು. ಇದಕ್ಕೆ ಪೂರಕವೆಂಬಂತೆ ಮೂರು ವರ್ಷಗಳ ಹಿಂದೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿತ್ತು. ಪದಕಕ್ಕಾಗಿ ತಮ್ಮ ಸಾಧನೆ ಜತೆಗೆ ವೈದ್ಯಕೀಯ, ಮಾನಸಿಕ ಹಾಗೂ ದೈಹಿಕ ಕ್ಷಮತೆ ಪ್ರಮಾಣಪತ್ರ ಸಲ್ಲಿಸಬೇಕು. ಮುಖ್ಯಮಂತ್ರಿಗಳ ಪೊಲೀಸ್‌ ಪದಕಕ್ಕೂ ಮುಂದಿನ ದಿನಗಳಲ್ಲಿ ಪ್ರಮುಖ ಮಾನದಂಡವಾಗಲಿದೆ. ಕೆಎಸ್​ಆರ್​ಪಿ 12 ಪ್ಲಾಟೂನ್​ಗಳಲ್ಲಿ ನಿಗದಿತ ಅವಧಿಯಲ್ಲಿ ಡೊಳ್ಳು ಹೊಟ್ಟೆ ಕರಗಿಸಲು ಸಿಬ್ಬಂದಿಗೆ ತಾಕೀತು ಮಾಡಲಾಗಿದೆ.

    ಡೊಳ್ಳು ಹೊಟ್ಟೆ ಕರಗಿಸದವರಿಗೆ ನಿತ್ಯ ವ್ಯಾಯಾಮ, ಪರೇಡ್ ಸೇರಿದಂತೆ ದೈಹಿಕ ವ್ಯಾಯಾಮ ಜತೆಗೆ ಜಾಗಿಂಗ್ ಹಾಗೂ ಈಜು ಕಡ್ಡಾಯಪಡಿಸಲಾಗಿದೆ. ಈ ಬಾರಿ ಐದು ಸಿಬ್ಬಂದಿಗೆ ಮಾತ್ರ ರಾಷ್ಟ್ರಪತಿ ಪದಕಕ್ಕೆ ಶಿಫಾರಸ್ಸು ಮಾಡಲಾಗಿದೆ. ಡೊಳ್ಳು ಹೊಟ್ಟೆ ಕರಗಿಸಿ ಸದೃಢ ಆರೋಗ್ಯ ಹೊಂದಿದವರಿಗೆ ಮಾತ್ರ ರಾಷ್ಟ್ರಪತಿ ಪದಕ ಸಿಗಲಿದೆ ಎಂದು ಅಲೋಕ್​ ಕುಮಾರ್​ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

    ಶಾಲಾಧ್ಯಕ್ಷನನ್ನು ನಂಬಿ ಕಾರಿನಲ್ಲಿ ಹೋದ ಶಿಕ್ಷಕಿಗೆ ಕಾದಿತ್ತು ಶಾಕ್​! ಮೊದಲೇ ಹಳ್ಳ ತೋಡಿದ್ದ ಕಿರಾತಕ

    ಯುವತಿಗೆ ಲೈಂಗಿಕ ಕಿರುಕುಳ: ವಕೀಲ ಕೆ.ಎಸ್​.ಎನ್​. ರಾಜೇಶ್​ ಸನ್ನದು ಅಮಾನತು

    ಜಾಸ್ತಿ ಹಣ ಕೊಟ್ಟರೆ ಓಕೆ! ಸೌತ್​ ಬ್ಯೂಟಿ ಅಮಲಾ ಪೌಲ್ ಕುರಿತ ಬಿಸಿ ಬಿಸಿ ಸುದ್ದಿ ಇದು​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts