More

    ಸಿಐಡಿಗೆ ಹೊಸದಾಗಿ ಎಡಿಜಿಪಿ ಹುದ್ದೆ; ಹಿರಿಯ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಂತಿ ನಿಯೋಜನೆ

    ಬೆಂಗಳೂರು: ಹೆಚ್ಚುತ್ತಿರುವ ಸೈಬರ್ ಕ್ರೈಂ, ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯ ದಂಧೆ ತಡೆಗಟ್ಟಲು ಅಪರಾಧ ತನಿಖಾ ವಿಭಾಗದಲ್ಲಿ (ಸಿಐಡಿ) ಹೊಸದಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಹುದ್ದೆ ಸೃಜಿಸಿದೆ.

    ಸಿಐಡಿಯಲ್ಲಿ ಸೈಬರ್, ಆರ್ಥಿಕ ಮತ್ತು ನಾರ್ಕೋಟಿಕ್ಸ್ (ಸಿಇಎನ್) ವಿಭಾಗವನ್ನು ಸೃಷ್ಟಿಸಿ ಈ ಹುದ್ದೆಗೆ ಎಡಿಜಿಪಿ ಪ್ರಣಬ್ ಮೊಹಂತಿ ಅವರನ್ನು ನಿಯೋಜನೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

    ಈ ಮೊದಲು ಸಿಐಡಿಯಲ್ಲಿ ಎರಡು ಎಡಿಜಿಪಿ ಹುದ್ದೆಗಳು ಇದ್ದವು. ಇದೀಗ ಹೆಚ್ಚುವರಿಯಾಗಿ ಮತ್ತೊಂದು ಎಡಿಜಿಪಿ ಹುದ್ದೆ ಲಭ್ಯವಾಗಿದೆ. ಸೈಬರ್, ಆರ್ಥಿಕ ಮತ್ತು ಡ್ರಗ್ಸ್ ಪ್ರಕರಣಗಳ ತನಿಖೆ ಮತ್ತಷ್ಟು ಚುರುಕುಗೊಳಿಸಲು ಸಿಐಡಿ ಮುಂದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts