More

    ಯುವತಿಗೆ ಲೈಂಗಿಕ ಕಿರುಕುಳ: ವಕೀಲ ಕೆ.ಎಸ್​.ಎನ್​. ರಾಜೇಶ್​ ಸನ್ನದು ಅಮಾನತು

    ಬೆಂಗಳೂರು: ಇಂರ್ಟನ್​ಶಿಪ್​ಗೆಂದು ಬಂದಿದ್ದ ಕಾನೂನು ಪದವಿ ವಿದ್ಯಾರ್ಥಿನಿಯೊಬ್ಬರ ಮೇಲೆ ತನ್ನ ಕಚೇರಿಯಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಹೊತ್ತಿರುವ ಮಂಗಳೂರು ಮೂಲದ ವಕೀಲ ಕೆ.ಎಸ್​.ಎನ್​. ರಾಜೇಶ್​ ಭಟ್​ ಅವರ ಸನ್ನದು ಅಮಾನತುಗೊಳಿಸಲಾಗಿದೆ.

    ಕರ್ನಾಟಕ ರಾಜ್ಯ ವಕೀಲರ ಪರಿಷತ್​ ಅಧ್ಯಕ್ಷ ಎಲ್​. ಶ್ರೀನಿವಾಸಬಾಬು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಸ್ವಯಂಪ್ರೇರಿತ ಕ್ರಮ ಕೈಗೊಳ್ಳಲಾಗಿದೆ. ಮಂಗಳೂರಿನ ಮಹಿಳಾ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ 2 ಪ್ರತ್ಯೇಕ ದೂರುಗಳು ಹಾಗೂ ಎಫ್​ಐಆರ್​ಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಂಡಿರುವ ಪರಿಷತ್​, ಆರೋಪಿ ವಕೀಲ ರಾಜೇಶ್​ ವಿರುದ್ಧ ಶಿಸ್ತು ಸಮಿತಿಯಿಂದ ವಿಚಾರಣೆ ನಡೆಸಲು ಹಾಗೂ ಮುಂದಿನ ಆದೇಶದವರೆಗೆ ರಾಜೇಶ್​ ಅವರ ಸನ್ನದು ಅಮಾನತುಗೊಳಿಸಿ ಸಭೆಯಲ್ಲಿ ರ್ನಿಣಯ ಕೈಗೊಂಡಿದೆ.

    ಕೆ.ಎಸ್​.ಎನ್​. ರಾಜೇಶ್ ಭಟ್​ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಉತ್ತರ ಪ್ರದೇಶ ಮೂಲದ ವಿದ್ಯಾರ್ಥಿನಿ ಇತ್ತೀಚಿಗೆ ದೂರು ದಾಖಲಿಸಿದ್ದರು. ರಾಜೇಶ್​ರ ಕಚೇರಿಯಲ್ಲಿ ಇಂಟರ್ನ್​ಶಿಪ್ ಮಾಡಲು ಬಂದಿದ್ದ ವಿದ್ಯಾರ್ಥಿನಿಗೆ ಕಚೇರಿಯಲ್ಲೇ ಲೈಂಗಿಕ ಕಿರುಕುಳ ನೀಡಿದ್ದರು. ಖಾಸಗಿ ಅಂಗಗಳನ್ನು ಮುಟ್ಟಿ ಅಸಭ್ಯವಾಗಿದ ವರ್ತಿಸಿದರು ಎಂದು ಎಂದು ರಾಜೇಶ್​ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದಾರೆ.

    ಯುವತಿ ದೂರು ನೀಡುವ ಮುನ್ನ, ಸಂತ್ರಸ್ತೆಗೆ ಕರೆ ಮಾಡಿದ್ದ ರಾಜೇಶ್​, ಕೆಲಸಕ್ಕೆ ಬರುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದರು. ಗೊತ್ತಿಲ್ಲದೆ ತಪ್ಪು ಮಾಡಿದೆ. ಇನ್ನು ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ. ದಯವಿಟ್ಟು ಕಚೇರಿಗೆ ಬಾ ಎಂದು ಕಣ್ಣೀರಿಟ್ಟಿದ್ದ ಆಡಿಯೋ ವೈರಲ್​ ಆಗಿತ್ತು. ಇದೇ ಪ್ರಕರಣ ಸಂಬಂಧ ಮೊದಲ ಆರೋಪಿ ವಕೀಲ ಕೆ.ಎಸ್.ಎನ್.ರಾಜೇಶ್, ಎರಡನೇ ಆರೋಪಿ ಧ್ರುವ, ಮೂರನೇ ಆರೋಪಿ ಮಹಾಲಕ್ಷ್ಮಿ ಹೆಗ್ಡೆ ಹಾಗೂ ಇನ್ನೊಂದು ಪ್ರಕರಣದಲ್ಲಿ ಪವಿತ್ರಾ ಆಚಾರ್ಯ ಎಂಬುವರ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜೇಶ್​ ತಲೆಮರೆಸಿಕೊಂಡಿದ್ದು, ಶುಕ್ರವಾರ ಪವಿತ್ರಾ ಆಚಾರ್ಯ ಅವರನ್ನ ಬಂಧಿಸಲಾಗಿದೆ.

    ಇಂಟರ್ನ್​ಶಿಪ್​ ವಿದ್ಯಾರ್ಥಿನಿಗೆ ಹಿರಿಯ ವಕೀಲನಿಂದ ಲೈಂಗಿಕ ಕಿರುಕುಳ: ಪ್ರಕರಣ ತಿರುಚಲು ಹೋಗಿ ಸಿಕ್ಕಿಬಿದ್ದ ಮಹಿಳೆ

    ನಿನ್ನೆ ತಡರಾತ್ರಿ ಮಗನಿಂದಲೇ ನಡೆಯಿತು ಘೋರ ದುರಂತ: ಪ್ರೇಯಸಿ ಜತೆಗಿದ್ದ ತಂದೆ ಸೇರಿ ಇಬ್ಬರ ಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts