ಕನ್ನಡ ಚಿತ್ರರಂಗದ ಹಿರಿಯ ನಟ ‘ಕಲಾತಪಸ್ವಿ’ ರಾಜೇಶ್ ವಿಧಿವಶ

Rajesh
Published on

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ, ‘ಕಲಾತಪಸ್ವಿ’ ರಾಜೇಶ್​ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು (ಫೆ.19) ಕೊನೆಯುಸಿರೆಳೆದಿದ್ದಾರೆ.

ರಾಜೇಶ್​ ಅವರನ್ನು ತೀವ್ರ ನಿಗಾ ಘಟಕ ಇರಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. 84 ವರ್ಷದ ರಾಜೇಶ್​ ಅವರು ಕಿಡ್ನಿ ಸಮಸ್ಯೆ ಮತ್ತು ವಯೋಸಹಜ ಕಾಯಿಲೆಗಳಿಂದ ಬಳತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಇಂದು ಇಹಲೋಕವನ್ನು ತ್ಯಜಿಸಿದ್ದಾರೆ.

ನಾಟಕ ಮಂಡಳಿ ಸೇರಿದ ಮುನಿ ಚೌಡಪ್ಪ ರಂಗಭೂಮಿಯಲ್ಲಿ ‘ವಿದ್ಯಾಸಾಗರ್’ ಹೆಸರಿನಿಂದ ಗುರುತಿಸಿಕೊಂಡರು. ಬಳಿಕ ತಮ್ಮದೇ ಆದ ‘ಶಕ್ತಿ ನಾಟಕ ಮಂಡಳಿ’ಯನ್ನ ವಿದ್ಯಾಸಾಗರ ಅಂತಾ ಬದಲಾಯಿಸಿಕೊಂಡರು. 1964ರಲ್ಲಿ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ‘ವೀರ ಸಂಕಲ್ಪ’ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದ ಅವರು ರಾಜೇಶ್ ಎಂದೇ ಗುರುತಿಸಿಕೊಂಡರು.

ಸೊಸೆ ತಂದ ಸೌಭಾಗ್ಯ, ಬಿಡುಗಡೆ, ಕ್ರಾಂತಿವೀರ, ವಿಷಕನ್ಯೆ, ದೇವರ ದುಡ್ಡು, ಕಲಿಯುಗ, ವಸಂತ ನಿಲಯ, ದೇವರ ಮನೆ, ತವರು ಮನೆ, ಭಲೇ ಭಾಸ್ಕರ, ನಮ್ಮ ಬದುಕು, ದೇವರ ಮಕ್ಕಳು, ಕಾಣಿಕೆ, ಎರಡು ಮುಖ, ಕಪ್ಪು ಬಿಳುಪು, ಸುಖ ಸಂಸಾರ, ಪೂರ್ಣಿಮಾ, ಪಿತಾಮಹ, ಶ್ರೀರಾಮಾಂಜನೇಯ ಯುದ್ದ, ಪ್ರತಿಧ್ವನಿ… ಹೀಗೆ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಾಜೇಶ್​ ಅಭಿನಯಿಸಿದ್ದಾರೆ. ಕಲಾತಪಸ್ವಿ ಎಂದೇ ಖ್ಯಾತಿ ಪಡೆದಿದ್ದಾರೆ. ಇವರ ಮಗಳು-ಅಳಿಯ, ಮೊಮ್ಮಗಳೂ ಕೂಡ ಚಿತ್ರರಂಗದಲ್ಲಿ ಮಿಂಚಿದ್ದಾರೆ.

ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮಾವ ರಾಜೇಶ್. ನಟ ಶಿವರಾಜ್​ಕುಮಾರ್​ ಅಭಿನಯದ ರಥಸಪ್ತಮಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಆಶಾರಾಣಿ ಅವರು ರಾಜೇಶ್​ರ ಮಗಳು. ಆಶಾರಾಣಿಯ ಪತಿ ಅರ್ಜುನ್​ ಸರ್ಜಾ. ಕಲಾತಪಸ್ವಿ ರಾಜೇಶ್​ರ ಆರೋಗ್ಯ ಚೇತರಿಕೆಗಾಗಿ ಅಭಿಮಾನಿಗಳು ಮತ್ತು ಕುಟುಂಬಸ್ಥರು ಪ್ರಾರ್ಥನೆ ಕೊನೆಗೂ ಈಡೇರಲಿಲ್ಲ.

ರಾಜೇಶ್​ ಅವರ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜಕೀಯ ಮತ್ತು ಸಿನಿಮಾ ಕ್ಷೇತ್ರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Koo App
ಕನ್ನಡ ಚಿತ್ರರಂಗದ ಹಿರಿಯ ನಟರಾದ ಶ್ರೀ ರಾಜೇಶ್ ಅವರು ನಿಧನರಾದ ವಿಷಯ ತುಂಬಾ ನೋವುಂಟುಮಾಡಿದೆ. ಅಗಲಿದ ಹಿರಿಯ ಕಲಾ ಚೇತನದ ಆತ್ಮಕ್ಕೆ ಶಾಂತಿ ನೀಡಿ ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
View attached media content
-Basavaraj Bommai (@bsbommai)19 Feb 2022
Koo App
ಕನ್ನಡ ಚಿತ್ರರಂಗದ ಕಲಾ ತಪಸ್ವಿ ಎಂದೇ ಖ್ಯಾತರಾಗಿದ್ದ ಹಿರಿಯ ನಟ ಶ್ರೀ ರಾಜೇಶ್ ಅವರು ನಿಧನರಾದ ಸುದ್ದಿ ತೀವ್ರ ಆಘಾತ ತಂದಿದೆ. 150 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದ ರಾಜೇಶ್ ಅವರ ನಿಧನ ಕನ್ನಡ ಕಲಾ ರಂಗಕ್ಕೆ ತುಂಬಲಾರದ ನಷ್ಟ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ 🙏
View attached media content
-Araga Jnanendra (@aragajnanendra)19 Feb 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net