More

    ಲಂಕಾ ಟಿ20 ಸರಣಿಯಿಂದ ಕೊಹ್ಲಿಗೆ ವಿಶ್ರಾಂತಿ ಸಾಧ್ಯತೆ, ಮರಳುವರೇ ಜಡೇಜಾ?

    ನವದೆಹಲಿ: ಪ್ರವಾಸಿ ಶ್ರೀಲಂಕಾ ವಿರುದ್ಧ ೆಬ್ರವರಿ 24ರಿಂದ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿಯಿಂದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ. ಇದೇ ವೇಳೆ, ಗಾಯದಿಂದ ಚೇತರಿಸಿಕೊಂಡಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಭಾರತ ತಂಡಕ್ಕೆ ಮರಳುವ ನಿರೀಕ್ಷೆ ಇದೆ.

    ಸದ್ಯ ದೊಡ್ಡ ಇನಿಂಗ್ಸ್ ಆಡಲು ಪರದಾಡುತ್ತಿರುವ ವಿರಾಟ್ ಕೊಹ್ಲಿ, ಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 100ನೇ ಪಂದ್ಯ ಆಡುವ ಮುನ್ನ ಕೆಲ ಸಮಯ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ. ಮಾಚ್ 4ರಿಂದ ಮೊಹಾಲಿಯಲ್ಲಿ ನಡೆಯಲಿರುವ ಪಂದ್ಯ, ಕೊಹ್ಲಿ ಪಾಲಿಗೆ ವೃತ್ತಿಜೀವನದ 100ನೇ ಟೆಸ್ಟ್ ಆಗಿರಲಿದೆ. ದಕ್ಷಿಣ ಆಫ್ರಿಕಾ ಪ್ರವಾಸದ ಸರಣಿ ಸೋಲಿನ ಬಳಿಕ ನಾಯಕತ್ವ ತೊರೆದಿರುವ ಕೊಹ್ಲಿ, ಸಾರಥ್ಯ ತ್ಯಜಿಸಿದ ಬಳಿಕ ಆಡಲಿರುವ ಮೊದಲ ಟೆಸ್ಟ್ ಪಂದ್ಯವೂ ಇದಾಗಿರಲಿದೆ. ಒಂದು ವೇಳೆ ಅವರು ಮೊದಲ ಟೆಸ್ಟ್‌ನಿಂದಲೂ ವಿಶ್ರಾಂತಿ ಪಡೆದರೆ, ಮಾರ್ಚ್ 12ರಿಂದ ಬೆಂಗಳೂರಿನಲ್ಲಿ ನಡೆಯಲಿರುವ ಅಹರ್ನಿಶಿಯಾಗಿ ನಡೆಯಲಿರುವ ಪಂದ್ಯವೇ ಅವರ 100ನೇ ಟೆಸ್ಟ್ ಆಗಿರಲಿದೆ. ಈ ಮೂಲಕ, ಆರ್‌ಸಿಬಿ ತಂಡದ ಮಾಜಿ ನಾಯಕನಿಗೆ ತನ್ನ ನೆಚ್ಚಿನ ಮೈದಾನದಲ್ಲೇ ವೃತ್ತಿಜೀವನದ ವಿಶೇಷ ಪಂದ್ಯ ಆಡುವ ಅವಕಾಶ ಒಲಿಯಲಿದೆ.

    ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಬಳಿಕ ಕಣದಿಂದ ಹೊರಗಿರುವ ಜಡೇಜಾ, ಬೆಂಗಳೂರಿನ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲೂ ಪಾಲ್ಗೊಂಡಿದ್ದರು. ವಿಂಡೀಸ್ ವಿರುದ್ಧ ಸೀಮಿತ ಓವರ್ ಸರಣಿಯಿಂದ ವಿಶ್ರಾಂತಿ ಪಡೆದಿರುವ ವೇಗಿ ಜಸ್‌ಪ್ರೀತ್ ಬುಮ್ರಾ ಕೂಡ ಲಂಕಾ ಟಿ20 ಸರಣಿಯಲ್ಲಿ ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಗಾಯದಿಂದಾಗಿ ವಿಂಡೀಸ್ ವಿರುದ್ಧ ಟಿ20 ಸರಣಿ ತಪ್ಪಿಸಿಕೊಂಡಿರುವ ಕನ್ನಡಿಗ ಕೆಎಲ್ ರಾಹುಲ್ ಲಂಕಾ ವಿರುದ್ಧದ ಟಿ20 ಸರಣಿಗೂ ಫಿಟ್ ಆಗುವುದು ಅನುಮಾನವೆನಿಸಿದೆ.

    ಐಪಿಎಲ್ ಹರಾಜುಗಾರ ಕುಸಿದುಬಿದ್ದಾಗ ಚಾರು ಶರ್ಮಗೆ ಅವಕಾಶ ಒಲಿದುಬಂದಿದ್ದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts