ಮೀನುಗಾರರ ಬಲೆಗೆ ಬಿದ್ದ 800 ಕೆಜಿ ತೂಕದ ಈ ದೈತ್ಯ ಮೀನಿನ ಬೆಲೆ ಕೇಳಿದ್ರೆ ನಿಜಕ್ಕೂ ದಂಗಾಗ್ತೀರಾ!

Fish
Published on

ಬಾಲಾಸೋರ್​: ಬರೋಬ್ಬರಿ 800 ಕೆಜಿ ಗಾತ್ರ ಅಪರೂಪದ ದೈತ್ಯ ಮೀನು ಕಳೆದ ಶುಕ್ರವಾರ ಪಶ್ಚಿಮ ಬಂಗಾಳದ ದಿಘಾ ಕರಾವಳಿ ಪ್ರದೇಶದಲ್ಲಿ ಮೀನುಗಾರರ ಬಲೆಗೆ ಬಿದ್ದಿದೆ.

ಸಮುದ್ರ ದದಡದಿಂದ ಸುಮಾರು 175 ಕಿ.ಮೀ ದೂರದಲ್ಲಿ ಆಳಸಮುದ್ರದಲ್ಲಿ ಮೀನುಗಾರಿಕಾ ದೋಣಿ (ಟ್ರಾಲರ್) ಈ ಮೀನನ್ನು ಸರೆಹಿಡಿದಿದೆ.

ವರದಿಗಳ ಪ್ರಕಾರ 11 ಅಡಿ ಉದ್ದ, 9 ಅಡಿ ಅಗಲ ಇರುವ ಈ ಮೀನು 800 ಕೆಜಿ ತೂಕವಿದೆ. ಅಪರೂಪದ ಮೀನು ಬಲೆಗೆ ಬಿದ್ದಿರುವ ಸುದ್ದಿ ಕೇಳಿದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಣ್ತುಂಬಿಕೊಂಡಿದ್ದಾರೆ.

ಈ ದೈತ್ಯ ಮೀನನ್ನು ಮೇದಿನಿಪುರದ ದಿಘಾದ ಮೊಹ್ನಾ ಪ್ರದೇಶದಲ್ಲಿ ಹರಾಜಿನಲ್ಲಿ ಮಾರಾಟ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬರೋಬ್ಬರಿ 50 ಲಕ್ಷಕ್ಕೆ ಮಾರಾಟವಾಗಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net