More

    ವುಹಾನಲ್ಲೇ ಕರೊನಾ ಜನನ; ಅಮೆರಿಕದ 2 ಪ್ರತ್ಯೇಕ ಅಧ್ಯಯನ ವರದಿಗಳಿಂದ ಬಹಿರಂಗ..

    ವಾಷಿಂಗ್ಟನ್: ಎರಡು ವರ್ಷಗಳಿಂದ ಜಗತ್ತನ್ನು ತಲ್ಲಣಗೊಳಿಸಿದ ಕರೊನಾ ಸಾಂಕ್ರಾಮಿಕತೆಗೆ ಕಾರಣವಾದ ಸಾರ್ಸ್-ಸಿಒವಿ-2 ವೈರಸ್ 2019ರ ಕೊನೆಯಲ್ಲಿ ಚೀನಾದ ವುಹಾನ್​ನ ಹುನಾನ್ ಮಾಂಸ ಮಾರುಕಟ್ಟೆಯಲ್ಲಿ ಹುಟ್ಟಿಕೊಂಡು ನಂತರ ಮಾನವರಿಗೆ ಹರಡಿದೆ ಎಂದು ಎರಡು ಅಧ್ಯಯನಗಳು ಹೇಳಿವೆ.

    2019ರ ಡಿಸೆಂಬರ್​ನಲ್ಲಿ ಕಾಣಿಸಿಕೊಂಡ ಕೋವಿಡ್-19 ಕೇಸ್​ಗಳು ವುಹಾನ್ ಮಾರುಕಟ್ಟೆಯ ಸುತ್ತ ವರದಿಯಾಗಿವೆ ಎನ್ನುವ ಪ್ರಾದೇಶಿಕ ವಿಶ್ಲೇಷಣೆಯನ್ನು ಆಧರಿಸಿ ಮೊದಲ ಅಧ್ಯಯನ ನಡೆಸಲಾಗಿದೆ. ಟೆಸ್ಟ್​ಗಳಲ್ಲಿ ಪಾಸಿಟಿವ್ ಕಂಡು ಬಂದ ಸ್ಯಾಂಪಲ್​ಗಳಿಗೂ ಜೀವಂತ ಪ್ರಾಣಿಗಳನ್ನು ಮಾರಾಟ ಮಾಡುವವರಿಗೂ ಬಲವಾದ ಸಂಬಂಧವಿರುವುದನ್ನು ಅಧ್ಯಯನ ಕಂಡುಕೊಂಡಿದೆ ಎಂದು ಅರಿಜೋನಾ ವಿಶ್ವವಿದ್ಯಾಲಯದ ಪ್ರೊಫೆಸರ್ ಮೈಕೆಲ್ ವೊರೊಬೆ ಟ್ವೀಟ್ ಮಾಡಿದ್ದಾರೆ. ಮಾಂಸ ಮಾರುಕಟ್ಟೆಯಿಂದ ವೈರಸ್ ಹರಡಿತ್ತೆಂಬ ವಾದವನ್ನು ಚೀನಾ ನಿರಾಕರಿಸುತ್ತಲೇ ಬಂದಿದೆ. 2019ರ ನವೆಂಬರ್ ಕೊನೆ ಅಥವಾ ಡಿಸೆಂಬರ್ ಆರಂಭದಲ್ಲಿ ವೈರಾಣು ಮಾನವರಿಗೆ ಹರಡಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.

    ಹಾಂಕಾಂಗ್ ಲಾಕ್?: ದೈನಿಕ ಸೋಂಕಿನ ಪ್ರಕರಣ 34,000ಕ್ಕಿಂತ ಹೆಚ್ಚಾಗಿದ್ದು ಲಾಕ್​ಡೌನ್ ಹೇರಲು ಹಾಂಕಾಂಗ್ ಆಡಳಿತ ಚಿಂತನೆ ನಡೆಸುತ್ತಿದೆ. ಸೋಮವಾರ 34,466 ಹೊಸ ಕೇಸ್​ಗಳು ದೃಢಪಟ್ಟಿದ್ದು 87 ಜನರು ಮೃತಪಟ್ಟಿದ್ದಾರೆ. ಹೀಗಾಗಿ ಲಾಕ್​ಡೌನ್ ಹೇರಿಕೆ ಸಾಧ್ಯತೆ ತಳ್ಳಿ ಹಾಕಲಾಗದು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಹಾಂಕಾಂಗ್​ನಲ್ಲಿ ಪ್ರಸ್ತುತ ಒಮಿಕ್ರಾನ್ ವೈರಸ್​ನಿಂದಾಗಿ ಐದನೇ ಅಲೆ ಹಾವಳಿ ನಡೆಸುತ್ತಿದೆ. ಸೋಮವಾರ ಒಂದು ವಾರದ ಹಿಂದೆ ದಾಖಲಾದ ಪ್ರಕರಣಕ್ಕಿಂತ ನಾಲ್ಕು ಪಟ್ಟು ಜಾಸ್ತಿ ಕೇಸ್​ಗಳು ವರದಿಯಾಗಿ ಆತಂಕ ಸೃಷ್ಟಿಯಾಗಿದೆ. ವಾರದ ಹಿಂದೆ ಸುಮಾರು 7,500 ಪ್ರಕರಣಗಳು ದಾಖಲಾಗಿದ್ದವು.

    ನಾಲ್ಕಂಕಿಗೆ ಇಳಿದ ಕರೊನಾ ಕೇಸ್: ಭಾರತದಲ್ಲಿ ಕರೊನಾ ಸೋಂಕಿನ ದೈನಿಕ ಪ್ರಕರಣಗಳು ಕಳೆದ ಎರಡು ತಿಂಗಳಲ್ಲಿ ಇದೇ ಮೊದಲ ಬಾರಿಗೆ 10,000ಕ್ಕಿಂತ ಕಡಿಮೆಯಾಗಿದೆ. ಸೋಮವಾರ ಸೋಂಕಿನ 8,013 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆ 4,29,24,130ಕ್ಕೆ ಏರಿದೆ. 119 ಜನರು ಮೃತಪಟ್ಟಿದ್ದು ಸಾವಿನ ಒಟ್ಟು ಸಂಖ್ಯೆ 5,13,843ಕ್ಕೆ ತಲುಪಿದೆ. ಕಳೆದ ವರ್ಷ ಡಿಸೆಂಬರ್ 28ರಂದು 9,195 ಮಂದಿ ಸೋಂಕಿಗೆ ಒಳಗಾಗಿದ್ದರು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,02,601ಕ್ಕೆ ಇಳಿದಿದ್ದು ರಾಷ್ಟ್ರೀಯ ಚೇತರಿಕೆ ದರ ಶೇಕಡ 98.56 ಆಗಿದೆ. ದೇಶದ ದೈನಿಕ ಪಾಸಿಟಿವಿಟಿ ದರ ಶೇ. 1.11 ಹಾಗೂ ಸಾಪ್ತಾಹಿಕ ದರ ಶೇ. 1.17 ಆಗಿದೆ ಎಂದು ಸಚಿವಾಲಯ ಇಳಿಸಿದೆ.

    ವಿಮಾನ ಸಂಚಾರ ನಿರ್ಬಂಧ ವಿಸ್ತರಣೆ: ಕರೊನಾ ಸಂಕಟದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರದ ಮೇಲೆ ಫೆಬ್ರವರಿ 28ರ ವರೆಗೆ ಹೇರಲಾಗಿದ್ದ ನಿರ್ಬಂಧವನ್ನು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಮುಂದಿನ ಆದೇಶದ ವರೆಗೆ ವಿಸ್ತರಿಸಿದೆ. 2020 ಮಾರ್ಚ್ 23ರಂದು ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದ್ದು ಆಗಾಗ ಅದನ್ನು ವಿಸ್ತರಿಸಲಾಗುತ್ತಿದೆ. ಆದರೆ, 2020 ಜುಲೈನಿಂದ ಭಾರತ ಮತ್ತು 45 ದೇಶಗಳ ನಡುವೆ ಬಯೋಬಬಲ್ ವ್ಯವಸ್ಥೆಯಡಿ ವಿಶೇಷ ವಿಮಾನಗಳ ಕಾರ್ಯಾಚರಣೆ ನಡೆಯುತ್ತಿದೆ.

    70ಕ್ಕೂ ಹೆಚ್ಚು ದಂಪತಿಗಳಿಗೆ ಮೋಸ; ಖತರ್​ನಾಕ್​ ಗಂಡ-ಹೆಂಡ್ತಿಯ ಬಂಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts