More

    ಎತ್ತಿನಗಾಡಿಯ ರೀತಿ ತಡವಾಗಿ ಚಾಲನೆ ಹಾಗೂ ಬೇಗ ಟ್ರಿಪ್ ಮುಗಿಸಿದ ಚಾಲಕರಿಗೆ BMTC ಮಾಡಿದ್ದೇನು?

    ಬೆಂಗಳೂರು: ಬಸ್ ನಿಧಾನವಾಗಿ ಚಾಲನೆ ಮಾಡಿದ್ದಕ್ಕೆ ಹಾಗೂ ನಿಗದಿತ ಅವಧಿಗಿಂತ ಮುಂಚಿತವಾಗಿ ಆಗಮಿಸಿ ನಿಗಮಕ್ಕೆ ನಷ್ಟ ಮಾಡಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಬಿಎಂಟಿಸಿ ಚಾಲಕರಿಗೆ ತಿಳುವಳಿಕೆ ಮತ್ತು ಪಾಲನಾ ಪತ್ರಗಳನ್ನು ನೀಡುವ ಮೂಲಕ ನಿಗಮ ಎಚ್ಚರಿಕೆ ನೀಡಿದೆ.

    ಬಿಎಂಟಿಸಿ ಬಸ್ ಮಾರ್ಗಸಂಖ್ಯೆ ‘410ಕೆ’ ಅನ್ನು ಚಾಲಕ ಎತ್ತಿನಗಾಡಿಯ ರೀತಿಯಲ್ಲಿ ತುಂಬಾ ವಿಳಂಬವಾಗಿ ಚಾಲನೆ ಮಾಡಿದ್ದರಿಂದ ಕೆಲಸಕ್ಕೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗಿಲ್ಲವೆಂದು ಪ್ರಯಾಣಿಕರೊಬ್ಬರು ನಿಗಮಕ್ಕೆ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸಲು ಚಾಲಕರಿಗೆ ನಿಗಮವು ತಿಳುವಳಿಕೆ ಪತ್ರ ನೀಡಿದೆ.

    ಇನ್ನೂ ಮಾರ್ಗಸಂಖ್ಯೆ ‘25ಬಿ’ಯಲ್ಲಿ ಕರ್ತವ್ಯ ನಿರ್ವಹಿಸಿ ಹಿಂತಿರುಗುವಾಗ ಜಯನಗರಕ್ಕೆ 30 ನಿಮಿಷ ಮುಂಚಿತವಾಗಿ ಬಂದು ಕಾಲಹರಣ ಮಾಡಿ ಸಾರಿಗೆ ಆದಾಯ ತಪ್ಪಿಸಿದ್ದೀರಿ. ನಿಗದಿತ ಆದಾಯ 3 ಸಾವಿರ ಇದರ ಬದಲು 2,740 ರೂ. ತಂದಿದ್ದೀರಿ, ಕೊನೆಯ ಸುತ್ತುವಳಿಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೇ ಖಾಲಿ ಸುತ್ತುಗಳಿಯ ಕಾರ್ಯಚರಣೆ ಮಾಡೀರುತ್ತೀರಿ. ಇದರಿಂದ ಸಂಸ್ಥೆಯ ಆದಾಯಕ್ಕೆ ನಷ್ಟವಾಗಿದೆ. ಆ ಮೂಲಕ ನಿಗಮದ ನಿಯಮಗಳನ್ನು ಉಲ್ಲಂಸಿದ್ದೀರಿ ಎಂದು ಅಪಾದನಾ ಪತ್ರ ನೀಡಿ ನಿಗಮ ಎಚ್ಚರಿಕೆ ನೀಡಿದೆ.

    ಬಾಲಯ್ಯ ಜತೆ ನಟಿಸಲ್ಲ!; ವಯಸ್ಸಿನ ಅಂತರಕ್ಕೆ ಹೆದರಿದ್ರಾ ಕೃತಿ?

    ಜೋಗದ ಗುಂಡಿಯಲ್ಲಿ ವಿಜಯ್ ತೇಜಸ್ವಿನಿ; ಥ್ರಿಲ್ಲರ್ ಜೋಗ 101 ಚಿತ್ರದಲ್ಲಿ ನಟನೆ

    ಗೋರಖ್​ಪುರದ ಚಹರೆ ಬದಲಿಸುತ್ತಿರುವ ಬಾಬಾ ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts