More

    ಸಂಪಾದಕೀಯ | ಹೆದ್ದಾರಿಗೆ ಬಲ; ನಿರ್ಮಾಣದ ಜತೆಗೆ ನಿರ್ವಹಣೆಯೂ ಮುಖ್ಯ

    ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸೋಮವಾರ ಕರ್ನಾಟಕದಲ್ಲಿ ವಿವಿಧ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ, ಲೋಕಾರ್ಪಣೆ ನೆರವೇರಿಸಿದ್ದಾರೆ. 12,795 ಕೋಟಿ ರೂ. ವೆಚ್ಚದ, 925 ಕಿಮೀ ಉದ್ದದ, 26 ಹೆದ್ದಾರಿಗಳ ಯೋಜನೆ ಮತ್ತು ಶಂಕುಸ್ಥಾಪನೆಯನ್ನು ಹುಬ್ಬಳ್ಳಿಯಲ್ಲಿ ಅವರು ನೆರವೇರಿಸಿದ್ದಾರೆ. ಮಂಗಳೂರು ಮತ್ತು ಬೆಳಗಾವಿಯಲ್ಲೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇದರಿಂದ ರಾಜ್ಯದ ರಸ್ತೆಜಾಲ ವರ್ಧಿಸಲಿದೆ. ಕರ್ನಾಟಕ ಮತ್ತು ಗೋವಾ ನಡುವೆ ರಾಷ್ಟ್ರೀಯ ಹೆದ್ದಾರಿ ನಿರ್ವಣಕ್ಕೆ ಯೋಜನೆ ಸಿದ್ಧಪಡಿಸಲಾಗುತ್ತಿದೆ; ರಾಜ್ಯದಲ್ಲಿನ ಹೆದ್ದಾರಿಗಳ ಎರಡೂ ಬದಿಗಳಲ್ಲಿ ಜಲಶಕ್ತಿ ಯೋಜನೆಗಳನ್ನು ಆರಂಭಿಸಲಾಗುವುದು ಎಂದೂ ಗಡ್ಕರಿ ತಿಳಿಸಿದ್ದಾರೆ. ಕೇಂದ್ರದಲ್ಲಿ ಎನ್​ಡಿಎ ಸರ್ಕಾರ ಬಂದ ನಂತರದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ವಿುಸುವ ವೇಗ ಹೆಚ್ಚಿದೆ; ದಿನಂಪ್ರತಿ ನಿರ್ವಣವಾಗುವ ರಸ್ತೆಗಳ ಉದ್ದ ಹೆಚ್ಚಿದೆ. ಮೂಲಸೌಕರ್ಯ ವೃದ್ಧಿಗೆ ಆದ್ಯತೆ ನೀಡುವುದು ಸರಿಯಾದ ಕ್ರಮವೇ. ಏಕೆಂದರೆ, ಉತ್ತಮ ರಸ್ತೆ ಸಂಪರ್ಕ ಜಾಲವು ದೇಶದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಬಲ್ಲದು. ಅಲ್ಲದೆ, ಅಪಘಾತಗಳನ್ನು ತಗ್ಗಿಸುವಲ್ಲಿ ಸಹ ಗುಣಮಟ್ಟದ ರಸ್ತೆಗಳ ಪಾತ್ರ ಪ್ರಮುಖವಾದುದು. ಅದರಲ್ಲೂ ನಮ್ಮ ದೇಶದಲ್ಲಿ ಸರಕು ಸಾಗಾಣಿಕೆಯು ಹೆಚ್ಚಾಗಿ ರಸ್ತೆ ಮಾರ್ಗವನ್ನು ಅವಲಂಬಿಸಿರುವುದರಿಂದ ರಸ್ತೆಗಳ ಸುಸ್ಥಿತಿ ಅನಿವಾರ್ಯ ಅಗತ್ಯ.

    ರಾಜ್ಯದಲ್ಲಿ ಸದ್ಯ 6,647 ಕಿಮೀ ವ್ಯಾಪ್ತಿಯ 29 ರಾಷ್ಟ್ರೀಯ ಹೆದ್ದಾರಿಗಳಿವೆ. ಇನ್ನು ಈ ವ್ಯಾಪ್ತಿಗೆ ಇನ್ನಷ್ಟು ಸೇರ್ಪಡೆಯಾಗಲಿರುವುದರಿಂದ ಸಂಚಾರ ವ್ಯವಸ್ಥೆ ಸುಧಾರಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಘೋಷಿತ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರೈಸಬೇಕಷ್ಟೆ. ರಸ್ತೆ ನಿರ್ವಣದ ಜತೆಗೆ ಸಮರ್ಪಕವಾಗಿ ನಿರ್ವಹಣೆ ಮಾಡುವುದು ಸಹ ಅಷ್ಟೇ ಮುಖ್ಯ. ರಾಜ್ಯದ ಹೆದ್ದಾರಿಗಳಲ್ಲಿ ಕೆಲವೆಡೆ ಗುಂಡಿ ಮುಚ್ಚದಿರುವುದು, ಕಿತ್ತುಹೋದ ರಸ್ತೆ ಭಾಗವನ್ನು ಸರಿಪಡಿಸದಿರುವುದು, ಸರ್ವಿಸ್ ರಸ್ತೆಗಳನ್ನು ದುರಸ್ತಿ ಮಾಡದಿರುವುದು ಇತ್ಯಾದಿ ಅನೇಕ ಸಮಸ್ಯೆಗಳಿವೆ. ಇದರ ಜತೆಗೆ, ಜನರ ಮತ್ತೊಂದು ಮುಖ್ಯ ತಕರಾರು ಇರುವುದು ಟೋಲ್ ಶುಲ್ಕದ ಬಗ್ಗೆ. ಎಷ್ಟೋ ಕಡೆಗಳಲ್ಲಿ ರಸ್ತೆ ಸರಿ ಇರದಿದ್ದರೂ ಟೋಲ್ ಸಂಗ್ರಹ ಮಾತ್ರ ಯಥಾವತ್ತು ನಡೆಯುತ್ತದೆ. ಇದಲ್ಲದೆ, ವಾಹನಗಳಿಗೆ ಸಂಬಂಧಿಸಿ ರಸ್ತೆ ತೆರಿಗೆ ಪಾವತಿಸಿದ್ದರೂ, ಅವೈಜ್ಞಾನಿಕ ರೀತಿಯಲ್ಲಿ ಟೋಲ್ ಸಂಗ್ರಹಿಸುವ ಬಗ್ಗೆಯೂ ಜನರಲ್ಲಿ ಅಸಮಾಧಾನವಿದೆ. ಹಿಂದೆ ಅನೇಕ ಬಾರಿ ಈ ಕುರಿತು ಗಲಾಟೆಯಾಗಿದ್ದೂ ಇದೆ. ಜನರ ಈ ಭಾವನೆ ಬಗ್ಗೆಯೂ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತುರ್ತಾಗಿ ಗಮನಹರಿಸಬೇಕು. ರಸ್ತೆ ಅಪಘಾತಗಳಲ್ಲಿ ಹೆಚ್ಚು ಜನರು ಸಾವುನೋವಿಗೀಡಾಗುವ ದೇಶಗಳಲ್ಲಿ ಭಾರತ ಸಹ ಮುಂಚೂಣಿಯಲ್ಲಿದೆ. ರಸ್ತೆ ಅಪಘಾತಗಳನ್ನು ತಗ್ಗಿಸುವಲ್ಲಿ ಜಾಗರೂಕತೆಯ ವಾಹನ ಚಾಲನೆ ಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಅದರೊಟ್ಟಿಗೆ, ಉತ್ತಮ ರಸ್ತೆ ಸಹ ಈ ನಿಟ್ಟಿನಲ್ಲಿ ಮುಖ್ಯ ಪಾತ್ರಹೊಂದಿದೆ ಎಂಬುದನ್ನು ಮರೆಯಲಾಗದು. ರಾಜ್ಯ ಸರ್ಕಾರಗಳು ಸಹ ತಮ್ಮ ವ್ಯಾಪ್ತಿಯ ರಾಜ್ಯ ಹೆದ್ದಾರಿಗಳು ಹಾಗೂ ಇತರ ರಸ್ತೆಗಳ ಬಗೆ ಗಮನಹರಿಸಬೇಕು. ಅಂದಾಗ, ಸಂಪರ್ಕ ಜಾಲ ಇನ್ನಷ್ಟು ಬಲವಾಗುತ್ತದೆ.

    70ಕ್ಕೂ ಹೆಚ್ಚು ದಂಪತಿಗಳಿಗೆ ಮೋಸ; ಖತರ್​ನಾಕ್​ ಗಂಡ-ಹೆಂಡ್ತಿಯ ಬಂಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts