More

  ದಾವಣಗೆರೆ ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆ, ಬೆಳೆ ಹಾನಿ

  ದಾವಣಗೆರೆ : ಜಿಲ್ಲಾದ್ಯಂತ ಸೋಮವಾರ ರಾತ್ರಿಯಿಂದೀಚೆಗೆ ಮಳೆರಾಯ ಅಬ್ಬರಿಸಿದ್ದಾನೆ. ವರ್ಷಧಾರೆಯಲ್ಲಿ ಒಂದು ಜಾನುವಾರು ಮೃತಪಟ್ಟಿದ್ದು 50 ಎಕರೆ ಬಾಳೆ, 2 ಎಕರೆ ಭತ್ತದ ಬೆಳೆಗೆ ಹಾನಿಯಾಗಿದೆ. ಹಲವು ಕೆರೆಗಳಿಗೆ ನೀರು ಹರಿದು ಬಂದಿದೆ.
   ಜಗಳೂರು ತಾಲೂಕಿನಲ್ಲಿ 45 ಎಕರೆ, ದಾವಣಗೆರೆ ತಾಲೂಕಿನಲ್ಲಿ 7.10 ಎಕರೆ ಬೆಳೆ ಹಾನಿಯಾಗಿದೆ. ಮಳೆಯ ಹೊಡೆತಕ್ಕೆ 29 ಮನೆಗಳು ಜಖಂ ಗೊಂಡಿವೆ. ಒಟ್ಟಾರೆ 13.77 ಲಕ್ಷ ರೂ. ನಷ್ಟ ಸಂಭವಿಸಿದೆ.
   ಜಿಲ್ಲೆಯಲ್ಲಿ ಸೋಮವಾರ 23.6 ಮಿ.ಮೀ. ಸರಾಸರಿ ಮಳೆಯಾಗಿದೆ. ಜಗಳೂರು ತಾಲೂಕಿನಲ್ಲಿ ಅತಿಹೆಚ್ಚು 26.8 ಮಿ.ಮೀ. ಮಳೆಯಾಗಿದೆ. ಚನ್ನಗಿರಿ 26 ಮಿ.ಮೀ, ದಾವಣಗೆರೆ 22.8 ಮಿ.ಮೀ, ಹರಿಹರ 22.6 ಮಿ.ಮೀ, ಹೊನ್ನಾಳಿ 16.5 ಮಿ.ಮೀ, ನ್ಯಾಮತಿ ತಾಲೂಕಿನಲ್ಲಿ 20.2 ಮಿ.ಮೀ. ಮಳೆಯಾಗಿದೆ.
   ದಾವಣಗೆರೆ ತಾಲೂಕಿನ ಕಾಡಜ್ಜಿಯಲ್ಲಿ 30 ಮಿ.ಮೀ, ಆನಗೋಡು 58.4 ಮಿ.ಮೀ, ಅಣಜಿ 39.4 ಮಿ.ಮೀ, ಮಾಯಕೊಂಡ ಭಾಗದಲ್ಲಿ 19 ಮಿ.ಮೀ. ಮಳೆ ಸುರಿದಿದೆ.
   ಗೊಲ್ಲರಹಳ್ಳಿಯಲ್ಲಿ 2.20 ಎಕರೆ, ಅಣಜಿಯಲ್ಲಿ 2.30 ಎಕರೆ ಬಾಳೆ ಹಾನಿಗೀಡಾಗಿದ್ದು 1.20 ಲಕ್ಷ ರೂ. ನಷ್ಟವಾಗಿದೆ. ದೊಡ್ಡಬಾತಿಯಲ್ಲಿ 2 ಎಕರೆ ಭತ್ತದ ಬೆಳೆಗೆ ಹಾನಿಯಾಗಿದ್ದು 60 ಸಾವಿರ ರೂ. ನಷ್ಟವಾಗಿದೆ. ಹುಲಿಕಟ್ಟೆಯಲ್ಲಿ 1 ಕಚ್ಚಾ ಮನೆಗೆ ಹಾನಿಯಾಗಿದೆ.
   …
   (ಬಾಕ್ಸ್)
   ಕಾರಿನ ಮೇಲೆ ಬಿದ್ದ ಮರದ ಕೊಂಬೆ
   ನಗರದ ಕೆ.ಆರ್. ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಮರದ ಕೊಂಬೆ ಕಾರಿನ ಮೇಲೆ ಬಿದ್ದಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾನೆ.
   ಹರಪನಹಳ್ಳಿ ತಾಲೂಕಿನ ಕವಲಹಳ್ಳಿ ಗ್ರಾಮದ ಜನಾರ್ದನ್, ಅಶೋಕ ಟಾಕೀಸ್ ಹಿಂಭಾಗದಿಂದ ಹರಪನಹಳ್ಳಿಗೆ ಹೋಗುತ್ತಿದ್ದಾಗ ಮರದ ಕೊಂಬೆಯೊಂದು ಏಕಾಏಕಿ ಕಾರಿನ ಮೇಲೆ ಬಿದ್ದಿದೆ. ಸಾರ್ವಜನಿಕರು ಜನಾರ್ದನ್ ಅವರನ್ನು ಹೊರಗೆ ಕರೆತಂದರು. ಮಹಾನಗರ ಪಾಲಿಕೆ ಸಿಬ್ಬಂದಿ ಮರದ ಕೊಂಬೆಯನ್ನು ಕತ್ತರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts