ಪ್ರೀತಿಸಿ ಮದ್ವೆ ಆಗಿದ್ರೂ ಪತ್ನಿಗೆ ಚಿತ್ರಹಿಂಸೆ ಕೊಡ್ತಿದ್ದ; ದೂರು ದಾಖಲಾಗುತ್ತಿದ್ದಂತೆ ಪರಾರಿ...

crime
ಫೋಟೋ ಸುದ್ದಿಯೊಳಗಿದೆ..
Published on

ಉಡುಪಿ: ಪ್ರೀತಿಸಿ ಮದುವೆಯಾಗಿದ್ದರೂ ಪತ್ನಿಗೆ ಚಿತ್ರಹಿಂಸೆ ನೀಡುವ ವಿಕೃತ ಮನಸ್ಸಿನ ಗಂಡನ ವಿರುದ್ಧ ಹೆಂಡತಿ ಪೊಲೀಸರಿಗೆ ದೂರು ನೀಡಿದ್ದು, ಸದ್ಯಕ್ಕೆ ಆತ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಕೋಟೇಶ್ವರ ನಿವಾಸಿ ಪ್ರದೀಪ್​ ಪೂಜಾರಿ ಆರೋಪಿ. ಈತ ಪತ್ನಿಗೆ ಕಿರುಕುಳ ನೀಡುತ್ತಿದ್ದ ವಿಡಿಯೋ ವೈರಲ್ ಆಗಿದ್ದು, ಕುಂದಾಪುರ ಪೊಲೀಸರು ಈತನ ಪತ್ತೆಗೆ ಬಲೆ ಬೀಸಿದ್ದಾರೆ.

ತಾನು ಪ್ರೀತಿಸುತ್ತಿದ್ದ ಪ್ರಿಯಾಂಕಾ ಎಂಬಾಕೆಯನ್ನು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಮದುವೆಯಾಗಿದ್ದ ಪ್ರದೀಪ್ ಪೂಜಾರಿ, ಮದ್ವೆಯಾದ ನಾಲ್ಕೇ ತಿಂಗಳಲ್ಲಿ ಗರ್ಭಿಣಿ ಪತ್ನಿಗೆ ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದಾನೆ. ಬೆಂಕಿ ಹಚ್ಚಿದ್ದ ಸಿಗರೇಟಿನ ತುಂಡನ್ನು ಹೆಂಡತಿಯ ಮೈಗೆ ಚುಚ್ಚಿ, ವರದಕ್ಷಿಣೆ ಕಿರುಕುಳ ನೀಡಿದ್ದ ವಿಡಿಯೋ ವೈರಲ್​ ಆಗಿದೆ.

ಎರಡು ಲಕ್ಷ ರೂಪಾಯಿ ಹಣ ಮತ್ತು ನಾಲ್ಕು ಪವನ್ ಚಿನ್ನಕ್ಕೆ ಬೇಡಿಕೆ ಇಟ್ಟು ನಿರಂತರವಾಗಿ ನೀಡುತ್ತಿದ್ದ ಕಿರುಕುಳ ತಾಳಲಾರದೆ ಪತ್ನಿ ನೀಡಿದ್ದ ದೂರನ್ನು ಸ್ವೀಕರಿಸಿರುವ ಕುಂದಾಪುರ ಪೊಲೀಸರು, ಇದೀಗ ಅರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net