More

  ಯಾರೂ ಇಲ್ಲದ ಸಮಯದಲ್ಲಿ ಅವನು ಬಂದು ಅಂಗಿ ಬಿಚ್ಚಿದ ..ಭಯವಾಯ್ತು! ಖ್ಯಾತ ನಟಿ ಬಿಚ್ಚಿಟ್ಟ ಸತ್ಯ!

  ಮುಂಬೈ: ತಮ್ಮ ನೆಚ್ಚಿನ ತಾರೆಯರು ಕಾಣಿಸಿಕೊಂಡಾಗ ಅಭಿಮಾನಿಗಳು ತಮ್ಮ ಪ್ರೀತಿಯನ್ನು ಹಲವು ರೀತಿಯಲ್ಲಿ ತೋರಿಸುತ್ತಾರೆ. ಆದರೆ ಕೆಲವರ ಅತಿರೇಕದ ನಡವಳಿಕೆಗೆ ನಟರಿಗಿಂತ ನಟಿಯರು ಸಾಕಷ್ಟು ಮುಜುಗರ ಮತ್ತು ತೊಂದರೆ ಅನುಭವಿಸುವುದುಂಟು.

  ಇದನ್ನೂ ಓದಿ: ಇದು ಅತ್ಯುತ್ತಮ ಫೋಟೋ..ಪ್ರಜಾಪ್ರಭುತ್ವಕ್ಕೆ ಬಲ! ಹೀಗೆಂದಿದ್ದೇಕೆ ಆನಂದ್ ಮಹೀಂದ್ರಾ?

  ಕಾಜಲ್ ಅಗರ್ವಾಲ್ ಇತ್ತೀಚೆಗೆ ಇಂತಹುದೇ ಒಂದು ಘಟನೆಯ ಬಗ್ಗೆ ಹೇಳಿದರು. ‘ಸತ್ಯಭಾಮ’ ಚಿತ್ರದ ಪ್ರಚಾರದ ಅಂಗವಾಗಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಅವರು, ಈ ಹಿಂದೆ ತಾವು ನಟಿಸಿದ್ದ ಸಿನಿಮಾವೊಂದರ ಶೂಟಿಂಗ್ ವೇಳೆ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

  ”ಕೆಲವು ವರ್ಷಗಳ ಹಿಂದೆ ನಾನು ಸಿನಿಮಾ ಶೂಟಿಂಗ್‌ನಲ್ಲಿದ್ದೆ. ಮೊದಲ ದಿನದ ಚಿತ್ರೀಕರಣದ ನಂತರ, ಚಿತ್ರದ ಸಹಾಯಕ ನಿರ್ದೇಶಕರು ಅನುಮತಿಯಿಲ್ಲದೆ ನನ್ನ ವ್ಯಾನಿಟಿ ವ್ಯಾನ್‌ ಗೆ ಬಂದರು. ಅವನು ತನ್ನ ಅಂಗಿಯನ್ನು ತೆಗೆದು ತನ್ನ ಎದೆಯ ಮೇಲೆ ನನ್ನ ಹೆಸರಿನ ಹಚ್ಚೆ ಹಾಕಿಸಿಕೊಂಡಿರುದನ್ನು ತೋರಿಸಿದನು. ಯಾರೂ ಇಲ್ಲದ ಸಮಯದಲ್ಲಿ ಅವನು ಹಾಗೆ ಮಾಡಿದ್ದರಿಂದ ನನಗೆ ಭಯವಾಯಿತು.

  ಟ್ಯಾಟೂ ರೂಪದಲ್ಲಿ ನನ್ನ ಮೇಲಿನ ನಿಮ್ಮ ಪ್ರೀತಿಯನ್ನು ತೋರಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ. ಆದರೆ, ಈ ರೀತಿ ಮಾಡುವುದು ಸರಿಯಲ್ಲ ಎಂದು ಮೃದುವಾಗಿ ಎಚ್ಚರಿಸಿದೆ ಎಂದು ಹೇಳಿದರು.

  ಸುಮನ್ ಚಿಕ್ಕಾಲ ನಿರ್ದೇಶನದ ‘ಸತ್ಯಭಾಮ’ ಚಿತ್ರದಲ್ಲಿ ಕಾಜಲ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ನವೀನ್ ಚಂದ್ರ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಕ್ರೈಂ ಥ್ರಿಲ್ಲರ್ ಹಿನ್ನೆಲೆಯಲ್ಲಿ ತಯಾರಾಗಿರುವ ಈ ಸಿನಿಮಾ ಇದೇ ತಿಂಗಳ 31ರಂದು ಬಿಡುಗಡೆಯಾಗಲಿದೆ.

  ‘ರೇವ್​ಪಾರ್ಟಿ’ ಮರೆಮಾಚಲು ಹೇಮಾ ‘ಬಿರಿಯಾನಿ’ ತಯಾರಿ! ಹಿಂದೆಂದೂ ಇಲ್ಲದ ರೆಸಿಪಿ ಈಗ್ಯಾಕೆ ಎಂದ ನೆಟ್ಟಿಗರು..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts