More

    ಕೆಜಿಎಫ್​-2 ಯಶಸ್ಸಿನ ಬೆನ್ನಲ್ಲೇ ಈ ಒಂದು ಸಂಗತಿ ಮೇಲೆ ಹೆಚ್ಚು ಗಮನ ಹರಿಸಿದ ಪುಷ್ಪ ಚಿತ್ರತಂಡ!

    ಹೈದರಾಬಾದ್​: ಕೆಜಿಎಫ್​ ಚಾಪ್ಟರ್​ 2 ಚಿತ್ರ ಯಶಸ್ವಿಯಾಗಲು ಅದರಲ್ಲಿರುವ ಮಾಸ್​​ ಡೈಲಾಗ್​ಗಳು ಕೂಡ ಒಂದು ಕಾರಣ. ಆದರೆ, ಕೆಜಿಎಫ್​ 1 ಗಿಂತ ಚಾಪ್ಟರ್​ ಎರಡರಲ್ಲಿ ಅಬ್ಬರದ ಡೈಲಾಗ್​ಗಳಿವೆ. ಇದೀಗ ಅಲ್ಲು ಅರ್ಜನ್​ ನಟನೆಯ ಪುಷ್ಪ 2ನಲ್ಲೂ ಇದೇ ನಿಯಮವನ್ನು ಅಳವಡಿಸಿಕೊಳ್ಳಲು ಚಿತ್ರತಂಡ ಮುಂದಾಗಿದೆ.

    ಪುಷ್ಪ 1 ಕೂಡ ಮಾಸ್​ ಡೈಲಾಗ್​ನಿಂದಲೇ ಹೆಚ್ಚು ಸದ್ದು ಮಾಡಿತು. ತಗ್ಗೆದೆಲೆ, ಪುಷ್ಪ ಅಂತೆ ಫ್ಲವರ್​ ಅಂಕುನ್ನವಾ ಫೈಯರ್ರು ಮತ್ತು ಪಾರ್ಟಿ ಲೇದಾ ಪುಷ್ಪ ಡೈಲಾಗ್​ ಜನರ ಮನಸ್ಸಿನಲ್ಲಿ ಈಗಲೂ ಉಳಿದಿದೆ. ಮೊದಲ ಭಾಗದ ಯಶಸ್ಸು ಎರಡನೇ ಭಾಗದ ಮೇಲೆ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ. ಚಿತ್ರ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಮೂಡಿದೆ.

    ಇತ್ತ ಕೆಜಿಎಫ್​ ಚಾಪ್ಟರ್​ 2 ಅದ್ಭುತ ಯಶಸ್ಸು ಗಳಿಸಿದ್ದು, ಪುಷ್ಪ 2 ಚಿತ್ರತಂಡದ ಮೇಲೆ ಜವಬ್ದಾರಿ ಜಾಸ್ತಿಯಾಗಿದೆಯಂತೆ. ಹೀಗಾಗಿ ಚಿತ್ರದ ನಿರ್ದೇಶಕ ಸುಕುಮಾರ್​ ಸ್ಕ್ರಿಪ್ಟ್​ ಬರೆಯಲು ಅಮೆರಿಕಕ್ಕೆ ಹಾರಿದ್ದಾರೆ. ಇನ್ನು ಪುಷ್ಪ ಚಿತ್ರತಂಡವೂ ಕೂಡ ಎರಡನೇ ಭಾಗದಲ್ಲಿ ಹೆಚ್ಚು ಡೈಲಾಗ್​​ಗಳನ್ನು ಸೇರಿಸಲು ಮುಂದಾಗಿದೆಯಂತೆ.

    ಹೆಚ್ಚೆಚ್ಚು ಮಾಸ್​ ಡೈಲಾಗ್​ಗಳ ಎರಡನೇ ಭಾಗದಲ್ಲಿ ಇರಲಿವೆಯಂತೆ. ಅದರಲ್ಲೂ ಹೆಚ್ಚಾಗಿ ಕ್ಯಾಚಿ ಲೈನ್ಸ್​ ಇರಲಿವೆಯಂತೆ. ಸಂಭಾಷಣೆಗಾಗ ಇದರ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

    ಸದ್ಯ ಪುಷ್ಪ 2 ಚಿತ್ರ ಪೂರ್ವ ನಿರ್ಮಾಣ ಹಂತದಲ್ಲಿದೆ. ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ. ಇದರಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಫಹದ್ ಫಾಸಿಲ್, ಸುನೀಲ್ ಮತ್ತು ಅನಸೂಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

    ‘ನಮ್ಮ ಸಾವಿನ ರಹಸ್ಯ ಈ ಟೇಬಲ್​ ಮೇಲಿದೆ… ಡಾಕ್ಟರ್​ ಕೊಟ್ಟಿರೋ ರಿಪೋರ್ಟ್​ ಇಲ್ಲಿದೆ…’

    ಪರೋಟ ತಿಂದ ಮರುದಿನವೇ ಬಾಲಕ ದುರಂತ ಸಾವು: ಮರಣೋತ್ತರ ವರದಿಯಲ್ಲಿತ್ತು ಸ್ಫೋಟಕ ಸಂಗತಿ

    PSI ನೇಮಕಾತಿ ಹಗರಣ: ಕಾಂಗ್ರೆಸ್​ ಜತೆಗಿನ ನಂಟಿನ ಬಗ್ಗೆ ಸಿಐಡಿ ಎದುರು ತಿಳಿಸಿದ ದಿವ್ಯಾ ಹಾಗರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts