More

    ಪರೋಟ ತಿಂದ ಮರುದಿನವೇ ಬಾಲಕ ದುರಂತ ಸಾವು: ಮರಣೋತ್ತರ ವರದಿಯಲ್ಲಿತ್ತು ಸ್ಫೋಟಕ ಸಂಗತಿ

    ಕೊಚ್ಚಿ: ಮೂರ್ಛೆ ರೋಗದಿಂದ ಬಳಲುತ್ತಿದ್ದ 9 ವರ್ಷದ ಬಾಲಕ ವಾಂತಿ ಮಾಡುವ ವೇಳೆ ಆಹಾರ ಶ್ವಾಸಕೋಶದಲ್ಲಿ ಸಿಲುಕಿ ಸಾವಿಗೀಡಾಗಿರುವ ಕರುಣಾಜನಕ ಘಟನೆ ಕೇರಳದ ನೆಡುಂಕಂಡಂನಲ್ಲಿ ನಡೆದಿದೆ.

    ಮೃತ ಬಾಲಕನನ್ನು ಸಂತೋಷ್​ ಎಂದು ಗುರುತಿಸಲಾಗಿದೆ. ಈತ ನೆಡುಂಕಂಡಂ ಮೂಲದ ಕಾರ್ತಿಕ್​ ಮತ್ತು ದೇವಿ ದಂಪತಿಯ ಪುತ್ರ. ಶುಕ್ರವಾರ ಪರೋಟ ತಿಂದಿದ್ದ ಸಂತೋಷ್​ ಅನಾರೋಗ್ಯದಿಂದ ಬಳಲುತ್ತಿದ್ದ. ಹೆಚ್ಚು ವಾಂತಿ ಮಾಡಿಕೊಳ್ಳುತ್ತಿದ್ದ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಶನಿವಾರ ದಾಖಲಿಸಲಾಗಿತ್ತು. ಆದರೂ, ವಾಂತಿ ಮಾಡುವುದು ಮಾತ್ರ ನಿಲ್ಲಲಿಲ್ಲ.

    ಆಸ್ಪತ್ರೆಗೆ ಕರೆತಂದಾಗ ಬಾಲಕನ ಹೊಟ್ಟೆ ಊದಿಕೊಂಡಿತ್ತು. ಪ್ರಾಥಮಿಕ ಚಿಕಿತ್ಸೆ ಬಳಿಕ ಹೊಟ್ಟೆ ನೋವು ಕಡಿಮೆ ಆಗಿತ್ತು. ಆದರೆ, ಬೆಳಗ್ಗೆ 10.30ರ ಸುಮಾರಿಗೆ ರಕ್ತದೊತ್ತಡ ತೀವ್ರ ಕುಸಿತಗೊಂಡು ಬಾಲಕ ಮೃತಪಟ್ಟಿದ್ದಾನೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ಶ್ವಾಸಕೋಸದಲ್ಲಿ ಆಹಾರ ಸಿಲುಕಿ ಮೃತಪಟ್ಟಿರುವುದ ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ.

    ಇನ್ನು ಬಾಲಕ ಸಂತೋಷ್​ ಬಹುಕಾಲದಿಂದಲೂ ಮೂರ್ಛೆ ರೋಗದಿಂದ ಬಳಲುತ್ತಿದ್ದ. ಈ ಸಮಸ್ಯೆಗೆ ಆಗಾಗ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಮೇಡಂ ನೀವು ಮುಂದಿನ ಮಹಾರಾಷ್ಟ್ರ ಸಿಎಂ ಈ ರೀತಿ ಡ್ರೆಸ್​ ಹಾಕ್ಬೇಡಿ: ಕಂಗನಾರ ಹಾಟ್​ ಅವತಾರ ಕಂಡು ಬೇಸರ!

    ಭಾರತೀಯ ಹಾಡುಗಳಿಗೆ ಹೆಜ್ಜೆ ಹಾಕುವ ಸೋಶಿಯಲ್​ ಮೀಡಿಯಾ ಸ್ಟಾರ್​ ಕಿಲಿ ಪೌಲ್​ ಮೇಲೆ ದುಷ್ಕರ್ಮಿಗಳ ದಾಳಿ

    ಕೋರ್ಟ್​ಗಳಲ್ಲಿ ಸ್ಥಳೀಯ ಭಾಷೆ; ಸಿಎಂ, ಸಿಜೆಗಳ ಸಮ್ಮೇಳನದಲ್ಲಿ ಪ್ರಧಾನಿ ಅಭಿಮತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts