ಭಾರತೀಯ ಹಾಡುಗಳಿಗೆ ಹೆಜ್ಜೆ ಹಾಕುವ ಸೋಶಿಯಲ್​ ಮೀಡಿಯಾ ಸ್ಟಾರ್​ ಕಿಲಿ ಪೌಲ್​ ಮೇಲೆ ದುಷ್ಕರ್ಮಿಗಳ ದಾಳಿ

Kili Paul
Published on

ನವದೆಹಲಿ: ತಾಂಜಾನಿಯ ಮೂಲದ ಪ್ರಖ್ಯಾತ ಸೋಶಿಯಲ್​ ಮೀಡಿಯಾ ಸ್ಟಾರ್​ ಕಿಲಿ ಪೌಲ್​ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಅಪರಿಚಿತ ಗುಂಪೊಂದು ಚಾಕು ಮತ್ತು ದೊಣ್ಣೆಯಿಂದ ದಾಳಿ ಮಾಡಿದ್ದು, ಹೇಗೋ ದುಷ್ಕರ್ಮಿಗಳಿಂದ ಬಚಾವ್​ ಆಗಿರುವ ಕಿಲಿ ಪೌಲ್​ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಾಯಗೊಂಡಿರುವ ಫೋಟೋ ಜತೆ ದಾಳಿಗೆ ಸಂಬಂಧಿಸಿದ ಮಾಹಿತಿಯನ್ನು ಕಿಲಿ ಪೌಲ್​ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್​ ಮಾಡಿದ್ದಾರೆ. ಐದು ಮಂದಿಯ ಗುಂಪು ನನ್ನ ಮೇಲೆ ದಾಳೆ ಮಾಡಿತು. ಈ ಸಮಯದಲ್ಲಿ ನನಗೆ ನಾನೇ ರಕ್ಷಿಸಿಕೊಂಡೆ. ಆದರೂ ನನ್ನ ಬಲಗೈನ ಹೆಬ್ಬೆರಳಿಗೆ ಚಾಕುವಿನಿಂದ ಗಾಯವಾಗಿದ್ದು, 5 ಹೊಲಿಗೆಯನ್ನು ಹಾಕಿಸಿಕೊಂಡಿದ್ದೇನೆ. ನನ್ನ ಮೇಲೆ ದೊಣ್ಣೆಯಿಂದ ಥಳಿಸಲಾಯಿತು. ಹೇಗೋ ಅವರಿಂದ ತಪ್ಪಿಸಿಕೊಂಡು ಓಡಿಬಂದೆ. ಗಾಯಗೊಂಡಿರುವ ನನಗಾಗಿ ನೀವೆಲ್ಲರೂ ಪ್ರಾರ್ಥಿಸಿ ಎಂದು ಕಿಲಿ ಪೌಲ್​ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಕಿಲಿ ಪೌಲ್​ ಅವರಿಗೆ ಇತ್ತೀಚೆಗಷ್ಟೇ ತಾಂಜಾನಿಯದ ಭಾರತೀಯ ಹೈ ಕಮಿಷನ್​ ಸನ್ಮಾನ ಮಾಡಿತ್ತು. ಭಾಷೆಯ ಗಡಿಯನ್ನು ಮೀರಿ ಜಾಗತಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಖ್ಯಾತಿಯಾಗಿರುವ ಕಿಲಿ ಪೌಲ್​ ಸಾಧನೆ ಪರಿಗಣಿಸಿ ಭಾರತೀಯ ಹೈಕಮಿಷನ್​ ಗೌರವಿಸಿದೆ.

ಅಂದಹಾಗೆ ಕಿಲಿ ಪೌಲ್​ ಅವರು ಇನ್​ಸ್ಟಾಗ್ರಾಂನಲ್ಲಿ 3.6 ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್​ ಹೊಂದಿದ್ದಾರೆ. ಕಿಲಿ ಪೌಲ್​ ಅವರು ಭಾರತೀಯ ಹಾಡುಗಳಿಗೆ ಡಾನ್ಸ್​ ಮಾಡುತ್ತಿರುತ್ತಾರೆ ಮತ್ತು ಕೆಲವೊಂದು ದೃಶ್ಯಗಳಿಗೆ ತಮ್ಮದೇ ರೀತಿಯಲ್ಲಿ ಅಭಿನಯಿಸುವಾಗ ಭಾರತೀಯ ಮನ ಗೆದ್ದಿದ್ದಾರೆ. ಇತ್ತೀಚೆಗೆ ಕೆಜಿಎಫ್​ 2 ಚಿತ್ರದ ವೈಲೆನ್ಸ್​ ಡೈಲಾಗ್​ಗೆ ತಮ್ಮದೇ ರೀತಿಯಲ್ಲಿ ನಟಿಸಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net