More

    ಅಪ್ರಾಪ್ತೆ ಮೇಲೆ ಅತ್ಯಾಚಾರ​ ಪ್ರಕರಣ: ಶಾಕಿಂಗ್​ ಹೇಳಿಕೆ ಕೊಟ್ಟ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

    ಕೋಲ್ಕತ: ಹದಿನಾಲ್ಕು ವರ್ಷದ ಅಪ್ರಾಪ್ತೆ ಮೇಲೆ ಗ್ಯಾಂಗ್​ರೇಪ್​ ಮಾಡಿ ಕೊಲೆ ಮಾಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಒತ್ತಡ ಸಿಲುಕಿರುವಂತೆ ಕಾಣುತ್ತಿದೆ.

    ಈ ಪ್ರಕರಣದಲ್ಲಿ ಟೀಕಾಕಾರರ ಪ್ರಶ್ನೆಗೆ ಸೋಮವಾರ ಉತ್ತರ ನೀಡಿರುವ ಮಮತಾ, ಮರಣೋತ್ತರ ಪರೀಕ್ಷೆಗೂ ಮುನ್ನವೇ ಶವವನ್ನು ಸುಟ್ಟು ಹಾಕಿದ್ದೇಕೆ? ಮತ್ತು ಐದು ದಿನಗಳ ನಂತರ ದೂರು ನೀಡಿದ್ದೇಕೆ? ಎಂಬ ಪ್ರಶ್ನೆಯನ್ನು ಕೇಳುವ ಮೂಲಕ ತಿರುಗೇಟು ನೀಡಿದರು. ಅಲ್ಲದೆ, ಈ ಪ್ರಕರಣದಲ್ಲಿ ಪೊಲೀಸರು ಕ್ರಮಕೈಗೊಂಡಿದ್ದು, ಯಾವುದನ್ನೂ ಲೆಕ್ಕಿಸದೇ ಆರೋಪಿಯನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶ, ದೆಹಲಿ ಮತ್ತು ರಾಜಸ್ಥಾನದಲ್ಲಿ ನಡೆದಂತೆ ನಮ್ಮಲ್ಲಿ ನಡೆಯುವುದಿಲ್ಲ ಎಂದು ಹೇಳಿದ್ದಾರೆ.

    ಅಂದಹಾಗೆ ಏನಿದು ಘಟನೆ ಎಂದು ನೋಡುವುದಾದರೆ, ಬಂಗಾಳದ ನಾದಿಯ ಜಿಲ್ಲೆಯಲ್ಲಿ ಬರ್ತಡೇ ಪಾರ್ಟಿಯೊಂದರಲ್ಲಿ ಕುಟುಂಬದ ಜತೆಗೆ ಭಾಗವಹಿಸಿದ ಕೆಲವೇ ಕ್ಷಣಗಳಲ್ಲಿ 14 ವರ್ಷದ ಬಾಲಕಿ ಮೃತಟ್ಟಿದ್ದಾಳೆ. ಆಕೆಯನ್ನು ಗ್ಯಾಂಗ್​ರೇಪ್​ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸ್ಥಳೀಯ ಆಡಳಿತಾರೂಢ ತೃಣಮೂಲ ಕಾಂಗ್ರೆಸ್​ ನಾಯಕನ 20 ವರ್ಷದ ಮಗನೇ ಪ್ರಮುಖ ಆರೋಪಿ ಎಂಬ ಆರೋಪವೂ ಇದೆ.

    ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಮಮತಾ, ಬಾಲಕಿ ಮತ್ತು ತೃಣಮೂಲಕ ನಾಯಕನ ಮಗನ ನಡುವೆ ಲವ್​ ಅಫೇರ್​ ಇದ್ದಿದ್ದು ಕುಟುಂಬ ಮತ್ತು ಎಲ್ಲರಿಗೂ ತಿಳಿದಿದೆ. ಹುಡುಗ-ಹುಡುಗಿ ಪ್ರೀತಿಸುತ್ತಿದ್ದರೆ ಅದನ್ನು ತಡೆಯುವುದು ನನ್ನ ಕೆಲಸವಲ್ಲ. ಇದು ಯುಪಿ ಅಲ್ಲ, ನಾವು ಲವ್ ಜಿಹಾದ್​ ಆಚೆಗೆ ಮುಂದುವರಿಯುತ್ತೇವೆ. ಪ್ರೀತಿ ಎಂಬುದು ಒಂದು ಸ್ವಾತಂತ್ರ್ಯ. ಅದನ್ನು ನಾವು ಪ್ರಶ್ನಿಸಲಾಗದು. ಒಂದು ವೇಳೆ ಅಪರಾಧ ನಡೆದರೆ ಕ್ರಮ ಕೈಗೊಳ್ಳುವುದನ್ನು ನಾವು ಖಚಿತಪಡಿಸುತ್ತೇವೆ. ಅದರಂತೆ ಪ್ರಸ್ತುತ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.

    ಮಮತಾ ಹೇಳಿಕೆಯನ್ನು ಪ್ರತಿಪಕ್ಷದ ಬಿಜೆಪಿ ನಾಯಕ ಸುವೆಂಧು ಅಧಿಕಾರಿ ಖಂಡಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರಿಗೆ ಮತ ಹಾಕಿದವರು ತಮ್ಮ ನಿರ್ಧಾರವನ್ನು ಮರು ಪರಿಶೀಲಿಸಬೇಕಿದೆ. ಆಕೆ ಯಾವ ಭಾಷೆ ಬಳಸುತ್ತಾಳೆ ನೋಡಿ. ಮುಖ್ಯಮಂತ್ರಿ ಅವರು ತಮ್ಮ ಬಾಯಿಯನ್ನು ಫಿನೈಲ್ ಮತ್ತು ಬ್ಲೀಚಿಂಗ್ ಪೌಡರ್​ನಿಂದ ತೊಳೆದುಕೊಳ್ಳಬೇಕು ಎಂದು ಟೀಕಿಸಿದ್ದಾರೆ. ಅಲ್ಲದೆ, ಸಂತ್ರಸ್ತೆಯ ಕುಟುಂಬದವರು ಸಿಬಿಐ ತನಿಖೆ ಬಯಸಿದರೆ, ನಾವು ನೀಡುತ್ತೇವೆ. ಸಾಧ್ಯವಿರುವ ಎಲ್ಲ ಬೆಂಬಲ ಕೊಡಲು ನಾವು ಸಿದ್ಧವಾಗಿದ್ದೇವೆ ಎಂದು ಹೇಳಿದರು.

    ಮಮತಾ ಬ್ಯಾನರ್ಜಿ ಅವರು ಪ್ರಕರಣದ ಬಗ್ಗೆ ಇತರ ಪ್ರಶ್ನೆಗಳನ್ನು ಇದೇ ಸಂದರ್ಭದಲ್ಲಿ ಎತ್ತಿದ್ದರು. ನೀವೇ ಹೇಳಿ. ಯಾರಾದರೂ 5ನೇ ತಾರೀಖಿನಂದು ಸತ್ತರೆ, ಅದರ ಬಗ್ಗೆ ವಿಚಾರಣೆ ಮತ್ತು ದೂರುಗಳು ಇರುತ್ತವೆ. ಹಾಗದರೆ 5ನೇ ತಾರೀಖಿನಂದು ಏಕೆ ದೂರು ನೀಡಲಿಲ್ಲ? ಯಾಕೆ ಶವಸಂಸ್ಕಾರ ಮಾಡಿದಿರಿ? ಒಂದು ವೇಳೆ ಅತ್ಯಾಚಾರ, ಅಥವಾ ಗರ್ಭಧಾರಣೆ ಅಥವಾ ಯಾವುದೇ ಕಾರಣವಿದ್ದರೆ ಪೊಲೀಸರು ಹೇಗೆ ತಾನೇ ಸಾಕ್ಷಿಗಳನ್ನು ಪಡೆಯಲು ಸಾಧ್ಯ ಎಂದು ಸಿಎಂ ಮಮತಾ ಪ್ರಶ್ನೆ ಮಾಡಿದರು.

    ಆದರೆ, ವರದಿಗಳ ಪ್ರಕಾರ ತೃಣಮೂಲ ನಾಯಕರ ಮಗ ಶವವನ್ನು ಅಂತ್ಯಸಂಸ್ಕಾರ ಮಾಡುವಂತೆ ಒತ್ತಾಯಿಸಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನೊಂದೆಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲು ಯಾಕೆ ವಿಳಂಬವಾಯಿತು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

    ಈ ಪ್ರಕರಣದಲ್ಲಿ ಬಂಧನವಾಗಿದೆ ಮತ್ತು ನಾವು ಇಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ. ದಯವಿಟ್ಟು ಒಂದನ್ನು ನೆನಪಿಡಿ, ಮಧ್ಯಪ್ರದೇಶ, ಯುಪಿ, ರಾಜಸ್ಥಾನ ಹಾಗೂ ದೆಹಲಿಯಂತೆ ಇಲ್ಲಿ ನಡೆಯುವುದಿಲ್ಲ ಎಂದು ವಿರೋಧಿಗಳಿಗೆ ಮಮತಾ ತಿರುಗೇಟು ನೀಡಿದರು. (ಏಜೆನ್ಸೀಸ್​)

    ರಕ್ಷಣಾ ಕಾರ್ಯಾಚರಣೆ ವೇಳೆ ಹೆಲಿಕಾಪ್ಟರ್​ನಿಂದ ಕೆಳಗೆ ಬಿದ್ದು ವ್ಯಕ್ತಿ ದುರಂತ ಸಾವು: ಭಯಾನಕ ದೃಶ್ಯ ಸೆರೆ

    ಅಲ್ಲು ಅರ್ಜುನ್​, ಮಂಚು ಮನೋಜ್ ಬಳಿಕ​ ನಟ ನಾಗಚೈತನ್ಯಗೂ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು!

    ಮೈಸೂರು-ನಂ.ಗೂಡು ಹೆದ್ದಾರೀಲಿ ಹಾಡಹಗಲೇ ಕಾರು ಅಡ್ಡಗಟ್ಟಿ ದುಷ್ಕರ್ಮಿಗಳಿಂದ ದಾಳಿ: ಬೆಚ್ಚಿಬಿದ್ದ ಸ್ಥಳೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts