ಅಲ್ಲು ಅರ್ಜುನ್​, ಮಂಚು ಮನೋಜ್ ಬಳಿಕ​ ನಟ ನಾಗಚೈತನ್ಯಗೂ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು!

HYD Police
Published on

ಹೈದರಾಬಾದ್​: ಸರ್ಕಾರದಿಂದ ಭದ್ರತಾ ಪಡೆದವರನ್ನು ಹೊರತುಪಡಿಸಿ ಯಾರೊಬ್ಬರು ಕಾರಿನ ಗಾಜಿನ ಮೇಲೆ ಕಪ್ಪು ಸ್ಕ್ರೀನ್​ ಅಳವಡಿಸಿರಬಾರದು ಎಂದು ಸುಪ್ರೀಂಕೋರ್ಟ್​ ಇತ್ತೀಚೆಗೆ ಆದೇಶ ಹೊರಡಿಸಿದ ಬೆನ್ನಲ್ಲೇ ಹೈದರಾಬಾದ್​ ಸಂಚಾರಿ ಪೊಲೀಸರು ಕಾರ್ಯಪ್ರವೃತರಾಗಿದ್ದಾರೆ. ವಿವಿಐಪಿ, ಸೆಲೆಬ್ರಿಟಿಗಳೆನ್ನದೆ ಕಪ್ಪು ಸ್ಕ್ರೀನ್​ ಅಳವಡಿಸಿದವರನ್ನು ತಡೆದು ದಂಡ ವಿಧಿಸುತ್ತಿದ್ದಾರೆ.

ಪೊಲೀಸರ ತಪಾಸಣೆ ವೇಳೆ ಈಗಾಗಲೇ ಅಲ್ಲು ಅರ್ಜುನ್​, ಕಲ್ಯಾಣ್​ ರಾಮ್​, ಮಂಚು ಮನೋಜ್​ ಹಾಗೂ ತ್ರಿವಿಕ್ರಮ ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಗೆ ದಂಡದ ಬಿಸಿ ತಟ್ಟಿದೆ. ಅಲ್ಲದೆ, ಕಪ್ಪು ಸ್ಕ್ರೀನ್​ಗಳನ್ನು ಕಳಚಿದ್ದಾರೆ. ಇದೀಗ ಆ ಸಾಲಿಗೆ ಸಮಂತಾ ಮಾಜಿ ಪತಿ ಹಾಗೂ ನಟ ನಾಗಚೈತನ್ಯ ಸೇರಿಕೊಂಡಿದ್ದಾರೆ.

ಇತ್ತೀಚೆಗೆ ಪೊಲೀಸ್​ ತಪಾಸಣೆ ವೇಳೆ ನಾಗಚೈತನ್ಯ ಅವರು ಕಾರು ಸಿಕ್ಕಿಬಿದ್ದಿತು. ಈ ವೇಳೆ ಕಾರಿನ ಗಾಜಿನಲ್ಲಿದ್ದ ಕಪ್ಪು ಸ್ಕ್ರೀನ್​ ಅನ್ನು ತೆಗೆಸಿದ ಪೊಲೀಸರು 700 ರೂಪಾಯಿ ದಂಡವನ್ನು ವಿಧಿಸಿದರು. ಈ ಸಂದರ್ಭದಲ್ಲಿ ನಾಗಚೈತನ್ಯ ಕಾರಿನಲ್ಲೇ ಇದ್ದರು. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪೊಲೀಸರ ಕರ್ತವ್ಯಕ್ಕೆ ನೆಟ್ಟಿಗರು ಸಲಾಂ ಹೊಡೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net