More

    ಹೋಟೆಲ್​ಗೆ ಬಾ ಅಂತ ಸೌತ್​ ನಿರ್ದೇಶಕರೊಬ್ಬರು ರಾತ್ರಿ ಕಾರು ಕಳುಹಿಸಿದ್ದರು! ಸ್ಟಾರ್​ ನಟಿಯ ಸ್ಫೋಟಕ ಹೇಳಿಕೆ

    ಮುಂಬೈ: ಚಿತ್ರರಂಗದಲ್ಲಿ ಒಂದು ಸಮಯದಲ್ಲಿ ಮೀಟೂ ಅಭಿಯಾನ ಭಾರಿ ಸಂಚಲನವನ್ನೇ ಸೃಷ್ಟಿಸಿತು. ಈ ಅಭಿಯಾನದಿಂದಾಗಿ ಅನೇಕ ನಟಿಯರು ತಾವು ಎದುರಿಸಿದ ದೈಹಿಕ ಕಿರುಕುಳದ ಬಗ್ಗೆ ಮುಕ್ತವಾಗಿ ಮಾತನಾಡಿದರು. ಇದರಿಂದಾಗಿ ಅನೇಕ ನಿರ್ಮಾಪಕರು ಮತ್ತು ನಿರ್ದೇಶಕರ ಕರಾಳ ಮುಖವಾಡ ಬಯಲಿಗೆ ಬಂದಿತು. ಆದರೆ ಆ ನಂತರದಲ್ಲಿ ಕಾರಣಾಂತರಗಳಿಂದ ಮೀಟೂ ಅಭಿಯಾನ ತಣ್ಣಗಾಯಿತು. ಆದರೂ ಒಂದಿಲ್ಲೊಬ್ಬರು ತಮಗಾದ ಕಹಿ ಅನುಭವಗಳನ್ನು ಹೇಳಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಸ್ಟಾರ್ ನಟಿಯೊಬ್ಬರು ತಮ್ಮ ವೃತ್ತಿಜೀವನದ ಆರಂಭದಲ್ಲಿ ನಡೆದ ಘಟನೆಯ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರೊಬ್ಬರಿಂದ ತಾವು ಎದುರಿಸಿದ ತೊಂದರೆಯ ಬಗ್ಗೆ ಹಂಚಿಕೊಂಡಿದ್ದಾರೆ.

    ಮೂರೂವರೆ ದಶಕಗಳ ಹಿಂದೆಯೇ ಚಿತ್ರರಂಗ ಪ್ರವೇಶಿಸಿದ ಹಿರಿಯ ನಟಿ ಅವರು. ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಹಾಗೂ ಟಿವಿ ಶೋಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಆದರೆ ಅವರ ವೃತ್ತಿಜೀವನದ ಆರಂಭದಲ್ಲಿ ನಿರ್ದೇಶಕರಿಂದ ತೊಂದರೆ ಅನುಭವಿಸಬೇಕಾಯಿತು. ಆ ನಟಿ ಬೇರೆ ಯಾರೂ ಅಲ್ಲ ಉಪಾಸನಾ ಸಿಂಗ್. ಹಿಂದಿ ಸಿನಿಮಾ ವೀಕ್ಷಕರಿಗೆ ಇವರ ಪರಿಚಯವೇ ಬೇಡ. 1988ರಲ್ಲಿ ಬಿಡುಗಡೆಯಾದ ರಾಜಸ್ಥಾನಿ ಚಲನಚಿತ್ರ ‘ಬಾಯಿ ಚಾಲಿ ಸಸುರೈ’ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಹಿಂದಿ ಮತ್ತು ಪಂಜಾಬಿ ಸಿನಿಮಾಗಳಲ್ಲಿ ತೊಡಗಿಸಿಕೊಂಡರು. ನಾಯಕಿಯಾಗಿ ಕೆಲವು ಸಿನಿಮಾಗಳನ್ನು ಮಾಡಿದರೂ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಒಳ್ಳೆಯ ಹೆಸರು ಗಳಿಸಿದ್ದರು. 1997ರಲ್ಲಿ ಬಿಡುಗಡೆಯಾದ ‘ಜುದಾಯಿ’ ಚಿತ್ರದೊಂದಿಗೆ ಉಪಾಸನಾ ಅವರ ಕ್ರೇಜ್ ತುಂಬಾ ಹೆಚ್ಚಾಯಿತು.

    Upasana Singh 2

    ಇತ್ತೀಚೆಗೆ ಸಂದರ್ಶನವೊಂದರಲ್ಲಿ, ಉಪಾಸನಾ ಸಿಂಗ್ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳ ಬಗ್ಗೆ ಆಸಕ್ತಿದಾಯಕ ಕಾಮೆಂಟ್​ಗಳನ್ನು ಮಾಡಿದ್ದಾರೆ. ಸೌತ್ ಇಂಡಸ್ಟ್ರಿಯಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ. ದಕ್ಷಿಣ ಭಾರತ ಸಿನಿರಂಗದ ನಿರ್ದೇಶಕರೊಬ್ಬರು ಅನಿಲ್ ಕಪೂರ್ ಎದುರು ನಟಿಸುವುದಾಗಿ ಹೇಳಿದ್ದರು. ನಾನು ನಟಿಸಲು ಒಪ್ಪಿಕೊಂಡೆ. ಆದರೆ, ರಾತ್ರಿ ಹೋಟೆಲ್‌ ಬರುವಂತೆ ನನಗೆ ಕಾರು ಕಳುಹಿಸಿದ್ದರು. ಆಗ ನನಗೆ ಕೇವಲ 17 ವರ್ಷ ವಯಸ್ಸಾಗಿತ್ತು. ಏನು ಹೇಳಬೇಕೆಂದು ಅರ್ಥವಾಗದೆ ಮರುದಿನ ಬರುತ್ತೇನೆ ಎಂದು ಹೇಳಿದೆ ಎಂದು ಉಪಾಸನಾ ಕಹಿ ಕ್ಷಣಗಳನ್ನು ಮೆಲುಕು ಹಾಕಿದರು.

    ನಿರ್ದೇಶಕರ ನಡೆಯಿಂದ ಘಾಸಿಗೊಳಗಾದ ಉಪಾಸನಾ ಏಳು ದಿನಗಳ ಕಾಲ ಮನೆಯಿಂದ ಹೊರಗೆ ಬಂದಿರಲಿಲ್ಲವಂತೆ. ಅಳುತ್ತಲೇ ಇದ್ದೆ ಎಂದು ಉಪಾಸನಾ ತಿಳಿಸಿದ್ದಾರೆ. (ಏಜೆನ್ಸೀಸ್​)

    ನನಗೆ ಮೂರೇ ನಿಮಿಷ ಸಾಕು! ಕಾಸ್ಟಿಂಗ್​ ಕೌಚ್​ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ ನಟಿ ಅನಸೂಯ

    ಮದ್ವೆಯಾದ ಒಂದೇ ತಿಂಗಳಲ್ಲಿ ಡಿವೋರ್ಸ್​!? ಮನಸ್ಸಿಗೆ ನೋವಾಗಿದೆ ಎಂದು ಕಣ್ಣೀರಿಟ್ಟ ಬಿಗಿಲ್​ ಪಾಂಡಿಯಮ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts