ನಿಮ್ಮ ಮನೆಯ ವಿಳಾಸ ಕೊಡಿ ನನ್ನ ಬಿಕಿನಿ ಫೋಟೋ ಕಳುಹಿಸುವೆ! ಅನುಪಮಾ ಪರಮೇಶ್ವರನ್ ಗರಂ​

Anupama
Published on

ಹೈದರಾಬಾದ್​: ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ನಟ ಸಾರ್ವಭೌಮ ಚಿತ್ರದ ಮೂಲಕ ಕನ್ನಡಿಗರಿಗೂ ಪರಿಚಿತರಾಗಿರುವ ಸೌತ್​ ಬ್ಯೂಟಿ ಅನುಪಮಾ ಪರಮೇಶ್ವರನ್, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬಹಳ ಹೆಸರು ಮಾಡಿದ್ದಾರೆ.​ ಮೂಲತಃ ಮಲಯಾಳಿಯಾಗಿರುವ ಅನುಪಮಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ.

ಇತ್ತೀಚೆಗಷ್ಟೇ ಇನ್​ಸ್ಟಾಗ್ರಾಂನಲ್ಲಿ ಅನುಪಮಾ ತಮ್ಮ ಅಭಿಮಾನಿಗಳೊಂದಿಗೆ ಸಂಭಾಷಣೆ ನಡೆಸಿದರು. ಈ ಸಂದರ್ಭದಲ್ಲಿ ನೆಟ್ಟಿಗನೊಬ್ಬ ಕೇಳಿದ ಪ್ರಶ್ನೆಗೆ ಸಿಟ್ಟಾಗದೇ ತಾಳ್ಮೆಯಿಂದಲೇ ಉತ್ತಿರಿಸುವ ಮೂಲಕ ತಿರುಗೇಟು ನೀಡಿದ್ದು, ನೆಟ್ಟಿಗರ ಪ್ರಶಂಸೆಗೆ ಗುರಿಯಾಗಿದೆ. ನೆಟ್ಟಿಗ ಕೇಳಿದ ಪ್ರಶ್ನೆಯ ಸ್ಕ್ರೀನ್​ಶಾಟ್​ ಅನ್ನು ಅನುಪಮಾ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಅಭಿಮಾನಿ ಕೇಳಿದೆ ಪ್ರಶ್ನೆ ಹೀಗಿದೆ... ನಿಮ್ಮ ಬಿಕಿನಿ ಫೋಟೋವನ್ನು ಕಳುಹಿಸುವಿರಾ? ಎಂದು ಕೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿರುವ ಅನುಪಮಾ, ನಿಮ್ಮ ಮನೆಯ ವಿಳಾಸ ತಿಳಿಸಿ, ನಾನು ನನ್ನ ಬಿಕಿನಿ ಫೋಟೋವನ್ನು ನಿಮ್ಮ ಮನೆಯ ವಿಳಾಸಕ್ಕೆ ಕಳುಸುತ್ತೇನೆ. ಅದನ್ನು ಫ್ರೇಮ್​ ಮಾಡಿ ನಿಮ್ಮ ಮನೆಯ ಮೇಲೆ ಗೋಡೆಯ ಮೇಲೆ ಹಾಕಿಕೊಳ್ಳಿ ಎಂದು ತಾಳ್ಮೆಯಿಂದಲೇ ನೆಟ್ಟಿಗನಿಗೆ ತಿರುಗೇಟು ನೀಡಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಅನುಪಮಾ ಅವರ 18 ಪೇಜಸ್​ ಹೆಸರಿನ ನಿಖಿಲ್​ ಅಭಿನಯದ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net