ಸಿ.ಪಿ. ಯೋಗೇಶ್ವರ್​ ಪುತ್ರಿಗೆ ಕಾನೂನು ಕಂಟಕ! ನಿಶಾ ಯೋಗೇಶ್ವರ್ ವಿರುದ್ಧ ವಂಚನೆ ಆರೋಪ

Nisha Yogeshwar
Published on

ಮಂಡ್ಯ: ಮಾಜಿ ಸಚಿವ ಹಾಗೂ ಬಿಜೆಪಿ ವಿಧಾನ ಪರಿಷತ್​ ಸದಸ್ಯ ಸಿ.ಪಿ. ಯೋಗೇಶ್ವರ್​ ಪುತ್ರಿ ನಿಶಾ ಯೋಗೇಶ್ವರ್​ಗೆ ಕಾನೂನು ಸಂಕಷ್ಟ ಎದುರಾಗಿದೆ. ಬಾಡಿಗೆ ಹಾಗೂ ಕಂದಾಯ ಪಾವತಿಸದ ಹಿನ್ನೆಲೆಯಲ್ಲಿ ನಿಶಾ ವಿರುದ್ಧ ಕಾನೂನು ಹೋರಾಟಕ್ಕೆ ಮದ್ದೂರು TAPCMS ಆಡಳಿತ ಮಂಡಳಿ ನಿರ್ಧಾರ ಮಾಡಿದೆ.

ನಿಶಾ ಯೋಗೇಶ್ವರ್ ಅವರು ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರೀಸ್​ನ ಮಾಲೀಕರು. 2017ರಲ್ಲಿ ಮದ್ದೂರು TAPCMSಗೆ ಸೇರಿದ ಗೋದಾಮನ್ನು ನಿಶಾ ಅವರ ಕಂಪನಿ ಬಾಡಿಗೆಗೆ ಪಡೆದಿತ್ತು. ಆದರೆ, ಒಪ್ಪಂದದಂತೆ ಬಾಡಿಗೆ ಹಾಗೂ ಕಂದಾಯವನ್ನು ಕಂಪನಿ ಪಾವತಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಏಪ್ರಿಲ್ 2018ರಿಂದಲೂ ಬಾಡಿಗೆ ಹಾಗೂ ಕಂದಾಯವನ್ನು ಬಾಕಿ ಉಳಿಸಿಕೊಂಡಿದೆ. ಗೋದಾಮು ಬಾಡಿಗೆ 42.47 ಲಕ್ಷ, ಖಾಲಿ ಜಾಗದ ನೆಲ ಬಾಡಿಗೆ 1.09 ಲಕ್ಷ ಹಾಗೂ ಪುರಸಭೆಯ ಕಂದಾಯ ಬಾಕಿ 4.78 ಲಕ್ಷ ರೂಪಾಯಿಯನ್ನು ನಿಶಾ ಯೋಗೇಶ್ವರ್ ಅವರ ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರೀಸ್​ ಬಾಕಿ ಉಳಿಸಿಕೊಂಡಿದೆ.

ಇದೀಗ ನಿಶಾ ಅವರ ಕಂಪನಿ ವಿರುದ್ಧ ಮದ್ದೂರು TAPCMS ಆಡಳಿತ ಮಂಡಳಿ ಕಾನೂನು ಕ್ರಮಕ್ಕೆ ನಿರ್ಧಾರ ಮಾಡಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net