ದೇವಸ್ಥಾನದ ಪೌರೋಹಿತ್ಯಕ್ಕಾಗಿ ಗುಂಪು ಘರ್ಷಣೆ; ದೇವಳದ ಆವರಣದಲ್ಲಿ ಉದ್ವಿಗ್ನ ವಾತಾವರಣ..

Temple
ದೇವಸ್ಥಾನದ ದ್ವಾರಕ್ಕೆ ಅಡ್ಡಲಾಗಿ ಜಮಾಯಿಸಿರುವ ಜನರು
Published on

ಚಿಕ್ಕಬಳ್ಳಾಪುರ: ದೇವಸ್ಥಾನವೊಂದರ ಪೌರೋಹಿತ್ಯಕ್ಕೆ ಸಂಬಂಧಿಸಿದಂತೆ ಎರಡು ಪುರೋಹಿತರ ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ದೇವಳದ ಆವರಣದಲ್ಲಿ ಉದ್ವಿಗ್ನ ವಾತಾವರಣ ಉಂಟಾದ ಪರಿಸ್ಥಿತಿಯೂ ಕಂಡುಬಂದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಇತಿಹಾಸ ಪ್ರಸಿದ್ಧ ಆಲಂಬಗಿರಿ ಗ್ರಾಮದ ಶ್ರೀವೆಂಕರವಣಸ್ವಾಮಿ‌ ದೇವಸ್ಥಾನದ ಪೌರೋಹಿತ್ಯಕ್ಕಾಗಿ ಈ ಗಲಾಟೆ ನಡೆದಿದೆ. ಹಳೇ ಪುರೋಹಿತರನ್ನು ವಜಾಗೊಳಿಸಿ ಹೊಸ ಪುರೋಹಿತರಿಗೆ ಅಧಿಕಾರ ಹಸ್ತಾಂತರಿಸಲು ಮುಂದಾಗಿದ್ದಕ್ಕೆ ಘರ್ಷಣೆ ಉಂಟಾಗಿದೆ.

ಪೌರೋಹಿತ್ಯದ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದು, ಹೊಸ ಪುರೋಹಿತರಿಗೆ ಅಧಿಕಾರ ವಹಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಆದೇಶದಂತೆ ಪೌರೋಹಿತ್ಯ ಹಸ್ತಾಂತರಕ್ಕೆ ತಹಶೀಲ್ದಾರ್​ ಮುನಿಸ್ವಾಮಿ ಮುಂದಾಗಿದ್ದರು. ಆದರೆ ಹಳೇ ಪುರೋಹಿತರ ಪರ ಗುಂಪು ತಹಶೀಲ್ದಾರ್​ಗೆ ವಿರೋಧ ವ್ಯಕ್ತಪಡಿಸಿದ್ದು, ಘರ್ಷಣೆ ಉಂಟಾದ್ದರಿಂದ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ದೇವಳದ ಸುತ್ತಮುತ್ತ ಬಿಗುವಿನ ವಾತಾವರಣ ಉಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net