ವಿಷ್ಣುವರ್ಧನ್​ ಜನ್ಮದಿನಂದು ‘ಯಜಮಾನೋತ್ಸವ’; ನಡೆಯಲಿದೆ ದಾಖಲೆಯ ಕಟೌಟ್​​ ಜಾತ್ರೆ..

1345643
Published on

ಬೆಂಗಳೂರು: ಸಾಹಸಿ ಸಿಂಹ ಡಾ.ವಿಷ್ಣುವರ್ಧನ್ 72ನೇ ಜಯಂತ್ಯುತ್ಸವಕ್ಕೆ ದಾದಾ ಅಭಿಮಾನಿಗಳು ಸಜ್ಜಾಗುತ್ತಿದ್ದಾರೆ. ಮಾತ್ರವಲ್ಲ, ಯಜಮಾನೋತ್ಸವಕ್ಕೂ ತಯಾರಿ ಮಾಡಿಕೊಳ್ಳುತ್ತಿದ್ದು, ಕಟೌಟ್ ಜಾತ್ರೆ ಮೂಲಕ ದಾಖಲೆಯ ಗುರಿ ಕೂಡ ಇರಿಸಿಕೊಂಡಿದ್ದಾರೆ.

ಇದೇ ಸೆಪ್ಟಂಬರ್ 18ರಂದು ವಿಷ್ಣುವರ್ಧನ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಲಿವೆ. ಅದೇ ರೀತಿ ಬರುವ ಡಿಸೆಂಬರ್ 29ಕ್ಕೆ ವಿಷ್ಣುವರ್ಧನ್​ ಚಿತ್ರರಂಗಕ್ಕೆ ಬಂದು 50 ವರ್ಷಗಳು ಪೂರೈಸಲಿವೆ. ಈ ಹಿನ್ನೆಲೆಯಲ್ಲಿ ಡಾ.ವಿಷ್ಣುವರ್ಧನ್ ಸೇನಾ ಸಮಿತಿ ವಿಷ್ಣು ಪುಣ್ಯಭೂಮಿಯಲ್ಲಿ ಅವರ ಪ್ರಮುಖ ಸಿನಿಮಾಗಳ ಐವತ್ತು ಕಟೌಟ್​​ಗಳನ್ನು ನಿಲ್ಲಿಸಿ ದಾಖಲೆ ಬರೆಯಲು ಸಜ್ಜಾಗಿದೆ.

ಇದೇ ಡಿಸೆಂಬರ್ 29ಕ್ಕೆ ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಬಂದು 50 ವರ್ಷಗಳು ಪೂರ್ಣಗೊಳ್ಳುತ್ತದೆ. ಈ ಸಲುವಾಗಿ ವಿಷ್ಣು ಪುಣ್ಯಭೂಮಿಯಲ್ಲಿ ವಿಷ್ಣುವರ್ಧನ್ ಸೇನಾನಿ ಮತ್ತು ಹಲವು ಸಂಘ ಸಂಸ್ಥೆಗಳು ಅಧ್ಯಕ್ಷರು ಸೇರಿ ಒಂದೇ ಜಾಗದಲ್ಲಿ ಐವತ್ತು ಕಟೌಟ್ ನಿಲ್ಲಿಸಲಿದ್ದಾರೆ. ವಿಷ್ಣುವರ್ಧನ್ ಅವರ ಯಶಸ್ಸಿ ಚಿತ್ರಗಳ ಕಟೌಟ್ ನಿಲ್ಲಿಸಿ ದಾಖಲೆ ಬರೆಯಲು ಮುಂದಾಗಿದ್ದೇವೆ. ಒಂದು ಕಟೌಟ್ 40 ಅಡಿ ಇರಲಿದೆ. ಇಲ್ಲಿವರೆಗೆ ಭಾರತೀಯ ಚಿತ್ರರಂಗದಲ್ಲಿ ಏಕಸ್ಥಳದಲ್ಲಿ ಯಾವುದೇ ಸ್ಟಾರ್​​ಗೆ ಈ ರೀತಿ ಕಟೌಟ್ ನಿಲ್ಲಿಸಿಲ್ಲ ಎಂದು ವಿಷ್ಣುಸೇನಾ ಸಮಿತಿಯ ಆನಂದ್ ಮಾಹಿತಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net