More

  ಪುಷ್ಟ-2 ಚಿತ್ರತಂಡ ಪ್ರಯಾಣಿಸುತ್ತಿದ್ದ ಬಸ್​ ಅಪಘಾತ; ಹಲವರಿಗೆ ಗಂಭೀರ ಗಾಯ

  ಹೈದರಾಬಾದ್​: ಇತ್ತೀಚಿಗೆ ನಟ ಪವನ್​ ಕಲ್ಯಾಣ ಅಭಿನಯದ ಹರಿಹರ ವೀರ ಮಲ್ಲು ಚಿತ್ರದ ಶೂಟಿಂಗ್​ ಸೆಟ್​ಗೆ ಬೆಂಕಿ ಬಿದ್ದಿತ್ತು. ಈ ಪ್ರಕರಣ ಮಾಸುವ ಮುನ್ನವೇ ಇದೀಗ ಅದೇ ರೀತಿಯ ಅಹಿತಕರ ಘಟನೆಯೊಂದು ಟಾಲಿವುಡ್​ನಲ್ಲಿ ನಡೆದಿದೆ.

  ಅಲ್ಲು ಅರ್ಜುನ್​ ನಟನೆಯ ಪುಷ್ಟ-2 ದಿ ರೂಲ್ ಚಿತ್ರ ತಂಡದ ಸದಸ್ಯರನ್ನು ಹೊತ್ತು ಸಾಗುತ್ತಿದ್ದ ಬಸ್​ ಅಪಘಾತಕ್ಕೀಡಾಗಿರುವ ಘಟನೆ ತೆಲಂಗಾಣದ ನಲ್ಗೊಂಡದ ನಾರ್ಕೆಟ್‌ಪಲ್ಲಿಯಲ್ಲಿ ನಡೆದಿದೆ.

  Bus Accident
  ಅಪಘಾತಕ್ಕೀಡಾದ ಬಸ್​

  ಇದನ್ನೂ ಓದಿ: ರಾಷ್ಟ್ರಮಟ್ಟದ ವಾಲಿಬಾಲ್​ ಆಟಗಾರ್ತಿ ಹೃದಯಾಘಾತದಿಂದ ನಿಧನ

  ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಹಲವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ವರದಿಯಾಗಿದೆ.

  ಘಟನೆಯ ಕುರಿತು ಚಿತ್ರದ ನಿರ್ಮಾಪಕರು ಹಾಗೂ ತಂಡದ ಸದಸ್ಯರು ಯಾವುದೇ ಪ್ರೆತಿಕ್ರಿಯೆಯನ್ನು ನೀಡಿಲ್ಲ. ಈ ಕುರಿತು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts