More

    ಇನ್​​ಸ್ಟಾಗ್ರಾಂ ಮೂಲಕ ಭಾರತೀಯ ಮಹಿಳೆಗೆ ವಂಚನೆ; ನೈಜೀರಿಯನ್​ ಪ್ರಜೆಗಳ ಬಂಧನ

    ಗುರುಗ್ರಾಮ: ಇನ್​​ಸ್ಟಾಗ್ರಾಂ ಮೂಲಕ ಪರಿಚಯವಾದ ಮಹಿಳೆಗೆ 1.80 ಕೋಟಿ ರೂ ವಂಚಿಸಿ ನೈಜೀರಿಯನ್​ ಪ್ರಜೆಗಳಿಬ್ಬರು ಪೊಲೀಸರ ಅತಿಥಿಯಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

    ಬಂಧಿತರನ್ನು ಎಬುಕಾ ಫೆಲಿಕ್ಸಿ ಮತ್ತು ಚುಕ್ವಾಕಾ ಟೇಕನ್​ ಎಂದು ತಿಳಿದು ಬಂದಿದ್ದು ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

    ಇನ್​​ಸ್ಟಾಗ್ರಾಂ ಮೂಲಕ ಗಾಳ

    ಈ ಕುರಿತು ಪ್ರತಿಕ್ರಿಯಿಸಿರುವ ಕ್ರೈಂ ಬ್ರ್ಯಾಂಚ್​ ಎಸಿಪಿ ವರುಣ್​​ ದಹಿಯಾ ಕಳೆದ ವರ್ಷ(2022ರಲ್ಲಿ) ಇನ್​​ಸ್ಟಾಗ್ರಾಂ ಮೂಲಕ ಪರಿಚಯಾವದ ನೈಜೀರಿಯಾ ಮೂಲದ ವ್ಯಕ್ತಿ ಒಬ್ಬ ತನ್ನನ್ನು ಬ್ರಿಟಷ್​ ಏರ್​​ಲೈನ್ಸ್​ನಲ್ಲಿ ಪೈಲಟ್​ ಎಂದು ಮಹಿಳೆ ಬಳಿ ಪರಿಚಯಿಸಿಕೊಂಡಿದ್ದಾರೆ.

    ಆರೋಪಿ ಮಹಿಳೆ ಜೊತೆ ನಿರಂತರವಾಗಿ ಚಾಟಿಂಗ್​ ಮಾಡುವ ಮೂಲಕ ಆಕೆಯ ನಂಬಿಕೆ ಗಳಿಸಿದ್ದ. ಆ ಬಳಿಕ ಒಂದು ದಿನ ಐಫೋನ್, ಆಭರಣ ಸೇರಿದಂತೆ ವಸ್ತುಗಳನ್ನು ತನ್ನ ಹೆಸರಿಗೆ ಕೊರಿಯರ್​ ಮೂಲಕ ಉಡುಗೊರೆ ಮೂಲಕ ಕಳುಹಿಸುತ್ತಿರುವುದಾಗಿ ಹೇಳಿದ್ದಾನೆ.

    Arrested Accused
    ಬಂಧಿತ ಆರೋಪಿ

    ಬಳಿಕ ಮಹಿಳೆಗೆ ವ್ಯಕ್ತಿ ಒಬ್ಬ ಕರೆ ಮಾಡಿದ್ದು ತನ್ನ ಹೆಸರಿಗೆ ಕೊರಿಯರ್​ ಮೂಲಕ ಕೆಲವು ವಸ್ತುಗಳು ಬಂದಿದ್ದು ಅದನ್ನು ಪಡೆಯಲು 35,000 ಸಾವಿರ ರೂಪಾಯಿ ತೆರಿಗೆ ಪಾವತಿಸುವಂತೆ ಸೂಚಿಸಿ ಬ್ಯಾಂಕ್​ ಖಾತೆಯ ವಿವರವನ್ನು ಕಳುಹಿಸಿದ್ದಾನೆ. ವಂಚಕನ ಮಾತಿನ ಪ್ರಕಾರ ಮಹಿಳೆ ಹಣವನ್ನು ಆತ ಹೇಳಿದ ಬ್ಯಾಂಕ್​ ಖಾತೆಗೆ ಜಮೆ ಮಾಡಿದ್ದಾರೆ.

    ಇದನ್ನೂ ಓದಿ: ನನ್ನ ಮೇಲಿನ ಆರೋಪಗಳು ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ: ಬ್ರಿಜ್​ ಭೂಷಣ್​ ಸಿಂಗ್​

    ಕೋಟಿ ಹೋದ ಮೇಲೆ ಎಚ್ಚೆತ್ತ ಮಹಿಳೆ

    ಮೊದಲಿಗೆ ಮಹಿಳೆ ಹಣ ಜಮೆ ಮಾಡಿದ ಬಳಿಕ ಎಚ್ಚೆತ್ತ ಆರೋಪಿಗಳು ಬಳಿಕ ಆಕೆಯಿಂದ ವಿವಿಧ ರೀತಿಯ ಶುಲ್ಕ ಹಾಗೂ ತೆರಿಗೆ ಕಟ್ಟುವಂತೆ ಸೂಚಿಸಿದ್ಧಾರೆ. ತಾನು ವಂಚನೆಗೆ ಒಳಗಾಗಿದ್ದೇನೆ ಎಂದು ತಿಳಿಯುಷ್ಟರಲ್ಲೇ ಮಹಿಳೆ ಆರೋಪಿಗಳಿಗೆ 1.80 ಕೋಟಿ ರೂಪಾಯಿ ಹಣ ಪಾವತಿಸಿದ್ದಳು.

    ಈ ಬಗ್ಗೆ ಸೈಬರ್​ ಕ್ರೈಂ ಪೊಲೀಸರಿಗೆ ಮಹಿಳೆ ದೂರು ನೀಡಿದ್ದು ಇದರ ಆಧಾರದ ಮೇಲೆ ಆರೋಪಿಗಳನ್ನು ದೆಹಲಿಯ ನಿಹಾಲ್​ ವಿಹಾರ್​ ಪೇಸ್​-2ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳಿಂದ 16 ಬ್ಯಾಂಕ್​ ಪಾಸ್​ಬುಕ್​, 25 ಎಟಿಎಂ ಕಾರ್ಡ್​, ವಿವಿಧ ಕಂಪನಿಯ ಸಿಮ್​ ಕಾರ್ಡುಗಳು, 10,000 ಸಾವಿರ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ.

    ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗಹ ಬಂಧನಕ್ಕೆ ಒಪ್ಪಿಸಲಾಗಿದ್ದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಕ್ರೈಂ ಬ್ರ್ಯಾಂಚ್​ ಎಸಿಪಿ ವರುಣ್​​ ದಹಿಯಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts