VIDEO| ಫೋಟೋ ತೆಗೆಸುವ ವಿಚಾರವಾಗಿ ತಗಾದೆ; ನೋಡ ನೋಡುತ್ತಿದ್ದಂತೆ ಬಡಿದಾಡಿಕೊಂಡ ಕುಟುಂಬಸ್ಥರು

Fight
Published on

ಕ್ಯಾಲಿರ್ಪೋನಿಯಾ: ಕೆಲವೊಮ್ಮೆ ಸಾರ್ವಜಕನಿಕ ಪ್ರದೇಶಗಳಲ್ಲಿ ಇಲ್ಲ ಸಲ್ಲದ ವಿಚಾರಕ್ಕೆ ಜನ ಜಗಳವಾಡುವುದು ಮತ್ತು ಕೆಲವೊಮ್ಮೆ ಪರಿಸ್ಥಿತಿ ವೀಕೋಪಕ್ಕೆ ತಿರುಗಿ ಕೈ-ಕೈ ಮಿಲಾಯಿಸುವುದನ್ನು ನಾವು ನೋಡಿದ್ದೇವೆ.

ಇದೀಗ ಇದೇ ರೀತಿಯ ಘಟನೆಯೊಂದರಲ್ಲಿ ಎರಡು ಕುಟುಂಬಗಳ ನಡುವೆ ಜಗಳವಾಗಿದ್ದು ದೊಡ್ಡ ಹೊಡೆದಾಟಕ್ಕೆ ಕಾರಣವಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವಿಚಾರ ಇಷ್ಟೇ

ವಾಪ್ಟ್​ ಡಿಸ್ನಿ ನೂರನೇ ವಾರರ್ಷಿಕೋತ್ಸವದ ಪ್ರಯುಕ್ತ ಸ್ಟುಡಿಯೋದಲ್ಲಿ ಸ್ಥಾಪಿಸಲಾಗಿರುವ ಐಕಾನಿಕ್​-100 ಫಲಕದ ಮುಂಭಾಗ ಫೋಟೋ ತೆಗೆಸಿಕೊಳ್ಳಲು ಒಂದು ಕುಟುಂಬದ ಸದಸ್ಯರು ಮತ್ತೊಬ್ಬರಿಗೆ ಜಾಗ ಬಿಡುವಂತೆ ಹೇಳಿದ್ದಾರೆ.

ಈ ವೇಳೆ ಫೋಟೋ ತೆಗೆಸಿಕೊಳ್ಳುವ ವಿಚಾರವಾಗಿ ಉಭಯ ಕುಟುಂಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಬಡೆದಾಡಿಕೊಂಡಿದ್ದಾರೆ.

ಮುಂದೆ ಹೋಗಿ ಎಂದಿದ್ದಕ್ಕೆ ಸಿಟ್ಟು

ಕುಟುಂಬವೊಂದು ಫಲಕದ ಮುಂದೆ ನಿಂತುಕೊಂಡು ಚಿತ್ರವನ್ನು ತೆಗೆಸಿಕೊಳ್ಳುತ್ತಿದ್ದ ಸಮಯದಲ್ಲಿ ಬೇರೆ ಕುಟುಂಬದವರು ಮುಂದೆ ಹೋಗಿ ನಾವು ಫೋಟೋ ತೆಗೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಈ ವೇಳೆ ಸಿಟ್ಟಿಗೆದ್ದ ವ್ಯಕ್ತಿಯೋರ್ವ ಮುಂದೆ ಹೋಗಲು ಹೇಳಿದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದಾನೆ ಮತ್ತು ಇದು ಉಭಯ ಕುಟುಂಬಗಳ ನಡುವಿನ ಹೊಡೆದಾಟಕ್ಕೆ ಕಾರಣವಾಯಿತು ಎಂದು ಅಲ್ಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net