

ನವದೆಹಲಿ: ದೆಹಲಿ-ಮುಂಬೈ ಇಂಡಿಗೊ ಏರ್ಲೈನ್ಸ್ ವಿಮಾನದಲ್ಲಿ 24 ವರ್ಷದ ವೈದ್ಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ 47 ವರ್ಷದ ಪ್ರಾಧ್ಯಾಪಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಪ್ರಾಧ್ಯಾಪಕ ರೋಹಿತ್ ಶ್ರೀವಾಸ್ತಾವ್ ಎಂಬುವವರನ್ನು ನ್ಯಾಯಾಂಗ ಕಸ್ಟಡಿಯಲ್ಲಿ ರಿಮಾಂಡ್ ಮಾಡಲಾಗಿದ್ದು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸಹರ್ ಪೊಲೀಸರ ಪ್ರಕಾರ, ಪಾಟನಾದಿಂದ ಬಂದ ರೋಹಿತ್ ಮತ್ತು ವೈದ್ಯೆ ದೆಹಲಿ ವಿಮಾನದಲ್ಲಿ ಅಕ್ಕಪಕ್ಕದಲ್ಲಿ ಕುಳಿತಿದ್ದರು. ವಿಮಾನ ದೆಹಲಿಯಿಂದ ಬುಧವಾರ ಬೆಳಿಗ್ಗೆ 5.30 ರ ಸುಮಾರಿಗೆ ಹೊರಟಿದೆ.
“ ಪ್ರಯಾಣದ ಸಮಯದಲ್ಲಿ, ಶ್ರೀವಾಸ್ತಾವ್ ಉದ್ದೇಶಪೂರ್ವಕವಾಗಿ ವೈದ್ಯೆಯನ್ನು ಅನುಚಿತವಾಗಿ ಮುಟ್ಟಿದರು ಎಂದು ದೂರುದಾರರು ಆರೋಪಿಸಿದ್ದಾರೆ, ” ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದು ವಿಮಾನ ಇಳಿಯುವ ಮುನ್ನವೇ ಆಪಾದಿತ ಘಟನೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಇಬ್ಬರು ಸಹ-ಪ್ರಯಾಣಿಕರು ಒಬ್ಬರ ಮೇಲೆ ಇನ್ನೊಬ್ಬರು ವಾಗ್ದಾಳಿ ಮಾಡಲು ಶುರು ಮಾಡಿದ್ದು ಸಿಬ್ಬಂದಿ ಮಧ್ಯಪ್ರವೇಶಿಸಬೇಕಾಗಿ ಬಂದಿತ್ತು ಎಂದು ಅಧಿಕಾರಿ ಹೇಳಿದರು. ವಿಮಾನ ಇಳಿದ ನಂತರ, ಅಧಿಕಾರಿಗಳು ಇಬ್ಬರೂ ಪ್ರಯಾಣಿಕರನ್ನು ಸಹಾರ್ ಪೊಲೀಸ್ ಠಾಣೆಗೆ ಕರೆದೊಯ್ದು ಎಫ್ಐಆರ್ ದಾಖಲಿಸಿಕೊಂಡಿದ್ದು ನಂತರ ವೈದ್ಯೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್)