

ಬೆಂಗಳೂರು: ಇದೀಗ ಕೆಲ ದಿನಗಳಿಂದ ಹಿಂದೆ ನಡೆದಿದ್ದ ಕೆಜಿ ಹಳ್ಳಿ ಡಿಜೆ ಹಳ್ಳಿಯಲ್ಲಿ ನಡೆದಿದ್ದ ದೊಂಬಿ ಪ್ರಕರಣದ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು ನಾನಾ ರೀತಿಯ ಚರ್ಚೆಗಳಾಗುತ್ತಿವೆ.
ಈ ಹಿಂದೆ ಶಾಸಕ ತನ್ವೀರ್ ಸೇಠ್, 'ಅಮಾಯಕರ ಮೇಲಿನ ಪ್ರಕರಣಗಳನ್ನು ಬಿಟ್ಟು ಬಿಡುವಂತೆ' ಕೋರಿ ಪತ್ರ ಬರೆದಿದ್ದರು. ಈ ವಿಚಾರವಾಗಿ ವಿವಾದ ಉಂಟಾಗಿದ್ದು ಇದೀಗ ಬಸನಗೌಡ ಪಾಟೀಲ ಯತ್ನಾಳ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ತನ್ವೀರ್ ಸೇಠ್ ಬರೆದಿದ್ದ ಪತ್ರದ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಕಿಡಿಕಾರಿದ್ದಾರೆ. ಶಾಸಕ ತನ್ವೀರ್ ಸೇಠ್ ಬರೆದ ಪತ್ರವನ್ನು ಟ್ಯಾಗ್ ಮಾಡಿರುವ ಯತ್ನಾಳ್ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಟ್ವೀಟ್ನಲ್ಲಿ, "ಗೃಹ ಮಂತ್ರಿ ಶ್ರೀ ಪರಮೇಶ್ವರ ಹಾಗೂ ಶಾಸಕ ತನ್ವೀರ್ ಸೇಠ್ ಹೇಳಿದ್ದು, ನಾವು ಯಾವ ಒಂದು ಕೋಮಿನ ಪರವೂ ಅಲ್ಲ. ಎಲ್ಲಾ ಅಮಾಯಕರ ಕೇಸುಗಳನ್ನು ಹಿಂಪಡೆಯಲು ಹೇಳಿದ್ದೇವೆ ಎಂದು ಹೇಳಿದ್ದನ್ನು ಗಮನಿಸಿದ್ದೇನೆ. ಸುಳ್ಳು ನೂರು ಬಾರಿ ಹೇಳಿದರೆ ಸತ್ಯವಾಗದು. ಶಾಸಕರ ಪತ್ರದಲ್ಲಿ "ಒಂದು ಕೋಮಿನ ನಿರ್ದಿಷ್ಟ" ಅಮಾಯಕರು ಎಂದು ಬರೆದಿದ್ದೀರಿ,
ಯಾವ ಕೋಮು ಅದು? ಯಾಕೆ ಅದೇ ಕೋಮಿನವರು ಕಲ್ಲು ಹೊಡೆದಿದ್ದಾರೆ? ಅವರೇ ಬಂಧಿಯಾಗಿದ್ದಾರೆ? ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಕೇಸಿನಲ್ಲಿ ಅದೇ ನಿರ್ದಿಷ್ಟ ಕೋಮಿನವರಿದ್ದಾರೆ ಯಾಕೆ? ಒಂದೇ ಕೋಮು ಅದು ಯಾವುದು ಮಾನ್ಯ ಶಾಸಕರೇ?" ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ವಿವಿಧ ಕಾರಣಗಳಿಗಾಗಿ ನಡೆದ ಪ್ರತಿಭಟನೆ ಹಾಗೂ ಗಲಭೆಗಳಲ್ಲಿ ನಿರ್ದಿಷ್ಟ ಕೋಮಿನ ಅಮಾಯಕ ಯುವಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ದೂರನ್ನು ದಾಖಲಿಸಿರುತ್ತಾರೆ. ಅನೇಕ ಅಮಾಯಕ ವಿದ್ಯಾರ್ಥಿಗಳು ಕಾರಾಗೃಹದಲ್ಲಿದ್ದು ಸುಳ್ಳು ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ ಇವರುಗಳ ಜೀವನ ಅಂಧಕಾರದಲ್ಲಿ ಮುಳುಗಿದೆ ಹಾಗೂ ಅನೇಕ ಕುಟಂಬಗಳ ಭವಿಷ್ಯ ಹಾಳಾಗಿದೆ.
ಈ ಅಮಾಯಕ ಯುವಕರ, ವಿದ್ಯಾರ್ಥಿಗಳ ಅವಲಂಬಿತ ಕುಟುಂಬಗಳ ಹಿತದೃಷ್ಟಿಯಿಂದ ಬೆಂಗಳೂರು ನಗರದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಶಿವಮೊಗ್ಗ, ಹುಬ್ಬಳ್ಳಿ ಮತ್ತು ಇತರೆ ಕಡೆಗಳಲ್ಲಿ ನಡೆದ ಗಲಭೆಗಳಲ್ಲಿ ದಾಖಲಿಸಿರುವ ಮೊಕದ್ದಮೆಗಳನ್ನು ಮರು ಪರಿಶೀಲಿಸಿ ಹಿಂಪಡೆಯಲು ಕೋರಿ ಶ್ರೀ ಎ.ಆಲಂಪಾಶಾ, ಸಂಸ್ಥಾಪಕರು, ಡಿ.ಹಿಲ್ಡಿಂಗ್ ಸಿಟಿಟನ್ ಇಂಡ್ ಪೀಪಲ್ಸ್ ಕೋರ್ಟ್ (ರಿ). ಬೆಂಗಳೂರುರವರು ಜೋಶಿ ಮನವಿಯನ್ನು ಸಲ್ಲಿಸಿರುತ್ತಾರೆ. ಸದಲಿ ಮನವಿಯನ್ನು ಈ ಕೂಡ ಲಗತ್ತಿಸಿ. ಕಳುಹಿಸುತ್ತಾ ಸುಳ್ಳು ಮೊಕದ್ದಮೆಗಳಲ್ಲಿ ಬಂಧಿತರಾಗಿರುವ ಅಮಾಯಕ ಯುವಕರ ವಿದ್ಯಾರ್ಥಿಗಳ - ಅವಲಂಬಿತ ಕುಟುಂಬಗಳ ಹಿತದೃಷ್ಟಿಯಿಂದ ಬೆಂಗಳೂರು ನಗರದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಶಿವಮೊಗ್ಗ, ಹುಬ್ಬಳ್ಳಿ ಮತ್ತು ಇತರೆ ಕಡೆಗಳಲ್ಲಿ ನಡೆದ ಗಲಭೆಗಳಲ್ಲಿ ದಾಖಲಿಸಿರುವ ಮೊಕದ್ದಮೆಗಳನ್ನು ಮರು ಪರಿಶೀಲಿಸಿ ನಿಯಮಾನುಸಾರ ಹಿಂಪಡೆಯಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ತಮ್ಮಲ್ಲಿ ಕೋರುತ್ತೇನೆ,
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ
ತನ್ವೀರ್ ಸೇಠ್
ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.