More

    ‘ಓಂ’ ಇದ್ದ ಹಾಳೆಯಲ್ಲಿ ಶುಭಾಶಯ ಬರೆಯಲು ಒಪ್ಪದ ತನ್ವೀರ್ ಸೇಠ್!; ಕನ್ನಡ ಮತ್ತು ಸಂಸ್ಕೃತಿ ಸಚಿವರ ಎದುರೇ ತಕರಾರು

    ಮೈಸೂರು: ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿದ್ದ ವೇದಿಕೆಯೊಂದರಲ್ಲಿ ಸಿದ್ದರಾಮಯ್ಯ ‘ವಂದೇ ಮಾತರಂ’ ಹಾಡುವುದು ಬೇಡ ಎಂದಿರುವ ವಿಡಿಯೋ ಕೆಲವು ದಿನಗಳಿಂದ ವೈರಲ್ ಆಗುತ್ತಿರುವ ಬೆನ್ನಿಗೇ ಇನ್ನೊಂದು ವಿವಾದಾತ್ಮಕ ಪ್ರಕರಣ ನಡೆದಿದೆ.

    ಮೈಸೂರಿನ ಸಿದ್ಧಾರ್ಥನಗರದ ಕಾವಾ ಕಾಲೇಜಿನಲ್ಲಿ ಇಂದು ಈ ಪ್ರಕರಣ ನಡೆದಿದೆ. ಇಲ್ಲಿ ಆಯೋಜಿಸಲಾಗಿರುವ ಕಾವಾ ಮೇಳ ಉದ್ಘಾಟಿಸಲು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್​ಕುಮಾರ್​, ಶಾಸಕ ತನ್ವೀರ್​ ಸೇಠ್​ ಆಗಮಿಸಿದ್ದರು. ಈ ವೇಳೆ ತನ್ವೀರ್​ ಸೇಠ್ ವರ್ತನೆ ಇದೀಗ ವಿವಾದಕ್ಕೆ ಗುರಿಯಾಗಿದೆ.

    ಸಮಾರಂಭದಲ್ಲಿ ಓಂ ಎಂದು ಬರೆದಿದ್ದ ಹಾಳೆಯ ಮೇಲೆ ಸಚಿವ ಸುನೀಲ್​ ಕುಮಾರ್ ಲಿಖಿತ ರೂಪದಲ್ಲಿ ಶುಭಾಶಯ ಕೋರಿದರು. ನಂತರ ಅದೇ ಹಾಳೆಯ ಮೇಲೆ ತಾವು ಶುಭಾಶಯವನ್ನು ಬರೆಯಬೇಕಾಗಿ ಬಂದಾಗ ತನ್ವೀರ್​ ಅದಕ್ಕೆ ನಿರಾಕರಿಸಿದರು. ಓಂ ಎಂದು ಬರೆದಿದ್ದ ಕಾರಣಕ್ಕೇ ಅವರು ಅದರಲ್ಲಿ ಬರೆಯಲು ನಿರಾಕರಿಸಿರುವುದು ವಿವಾದಾತ್ಮಕವಾಗಿ ಪರಿಣಮಿಸಿದೆ.

    ಪೈಲಟ್ ಕೆಲಸಕ್ಕೇ ಮುಳುವಾದ ‘ಮೂತ್ರ ವಿಸರ್ಜನೆ’; ಏರ್​ ಇಂಡಿಯಾದ ಪ್ರಕರಣ ‘ಒಂದಕ್ಕೆ’ 30 ಲಕ್ಷ ರೂ. ದಂಡ

    ಶಾಲೆಯಲ್ಲಿ ಹೃದಯಾಘಾತಕ್ಕೊಳಗಾಗಿ ಸಾವಿಗೀಡಾದ್ಲು 8ನೇ ತರಗತಿ ವಿದ್ಯಾರ್ಥಿನಿ

    ಕಾಮುಕರ ದಾಳಿಗೆ ತಲೆಸುತ್ತು ಬಂದು ಬಿದ್ದ ಯುವತಿ; ಅಪರಿಚಿತೆಯನ್ನು ‘ತಂಗಿ’ ಎಂದು ಕರೆದೊಯ್ದು ದುಷ್ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts