More

    ಪೈಲಟ್ ಕೆಲಸಕ್ಕೇ ಮುಳುವಾದ ‘ಮೂತ್ರ ವಿಸರ್ಜನೆ’; ಏರ್​ ಇಂಡಿಯಾದ ಪ್ರಕರಣ ‘ಒಂದಕ್ಕೆ’ 30 ಲಕ್ಷ ರೂ. ದಂಡ

    ನವದೆಹಲಿ: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡೈರೆಕ್ಟರ್ ಜನರಲ್ ಆಫ್​ ಸಿವಿಲ್ ಏವಿಯೇಷನ್ (ಡಿಜಿಸಿಎ) ಏರ್​ ಇಂಡಿಯಾ ಸಂಸ್ಥೆ ವಿರುದ್ಧ ಗರಂ ಆಗಿರುವುದಷ್ಟೇ ಅಲ್ಲದೆ, 30 ಲಕ್ಷ ರೂ. ದಂಡ ವಿಧಿಸಿದೆ. ಜೊತೆಗೆ ಪೈಲಟ್​ ಪರವಾನಗಿಯನ್ನೂ ಅಮಾನತುಗೊಳಿಸಿದೆ.

    ನ್ಯೂಯಾರ್ಕ್​ನಿಂದ ನ. 26ರಂದು ದೆಹಲಿಗೆ ಬರುತ್ತಿದ್ದ ಏರ್​ ಇಂಡಿಯಾ ವಿಮಾನದ ಬಿಸಿನೆಸ್​ ಕ್ಲಾಸ್​ನಲ್ಲಿ ಈ ಘಟನೆ ನಡೆದಿತ್ತು. ವಿಮಾನದಲ್ಲಿ ಊಟದ ನಂತರ ಲೈಟ್ ಡಿಮ್ ಮಾಡಿದಾಗ 70ರ ಹರೆಯದ ಸಂತ್ರಸ್ತೆಯ ಮೇಲೆ ಶಂಕರ್ ಮಿಶ್ರಾ ಎಂಬಾತ ಜಿಪ್ ಬಿಚ್ಚಿ ಮೂತ್ರ ವಿಸರ್ಜನೆ ಮಾಡಿದ್ದ. ನಂತರ ಅಲ್ಲಿಯೇ ನಿಂತು ತನ್ನ ಖಾಸಗಿ ಅಂಗಗಳನ್ನು ಪ್ರದರ್ಶನ ಮಾಡಿದ್ದ. ಇತರ ಪ್ರಯಾಣಿಕರು ಗಮನಿಸಿ ಗದರಿದ ಬಳಿಕವೇ ಆತ ಅಲ್ಲಿಂದ ತೆರಳಿದ್ದ.

    ಈ ಕೃತ್ಯದ ವಿರುದ್ಧ ಸಂತ್ರಸ್ತೆ ಟಾಟಾ ಗ್ರೂಪ್ ಅಧ್ಯಕ್ಷ ಎನ್​. ಚಂದ್ರಶೇಖರನ್ ಅವರಿಗೆ ಬರೆದಿದ್ದ ದೂರಿನಲ್ಲಿ ಉಲ್ಲೇಖಿಸಿದ್ದರು. ಆಕೆ ದೂರು ನೀಡಿದ ಬಳಿಕವೇ ಈ ಪ್ರಕರಣ ಬಹಿರಂಗಗೊಂಡು ಎಲ್ಲೆಡೆ ಸದ್ದು ಮಾಡಿತ್ತು. ಆರೋಪಿ ಶಂಕರ್ ಮಿಶ್ರಾ ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಅಮೆರಿಕದ ಬಹುರಾಷ್ಟ್ರೀಯ ಹಣಕಾಸು ಸೇವೆಗಳ ಕಂಪನಿ ವೆಲ್ಸ್ ಫಾರ್ಗೋದ ಭಾರತ ವಿಭಾಗದ ಉಪಾಧ್ಯಕ್ಷ ಆಗಿದ್ದ. ಈ ಪ್ರಕರಣದ ಬಳಿಕ ಕಂಪನಿ ಆತನನ್ನು ಕೆಲಸದಿಂದ ತೆಗೆದುಹಾಕಿತ್ತು. ದೆಹಲಿ ಪೊಲೀಸರು ಜ.06ರ ರಾತ್ರಿ ಬೆಂಗಳೂರಿನಲ್ಲಿ ಮಿಶ್ರಾನನ್ನು ಬಂಧಿಸಿದ್ದರು.

    ಈ ಪ್ರಕರಣದಿಂದಾಗಿ ಏರ್​ ಇಂಡಿಯಾದಲ್ಲಿ ವಿಮಾನ ಯಾನ ನಿಯಮಗಳ ಉಲ್ಲಂಘನೆ ಆಗಿರುವ ಹಿನ್ನೆಲೆಯಲ್ಲಿ ಸಂಸ್ಥೆಗೆ ಡಿಜಿಸಿಎ ಶುಕ್ರವಾರ 30 ಲಕ್ಷ ರೂ. ದಂಡ ವಿಧಿಸಿದೆ. ಮಾತ್ರವಲ್ಲ, ಈ ಸಂದರ್ಭದಲ್ಲಿ ಪೈಲಟ್​ ಆಗಿದ್ದಾತನ ಪರವಾನಗಿಯನ್ನು ಮೂರು ತಿಂಗಳ ಅವಧಿಗೆ ಅಮಾನತುಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳಿಕ ಭದ್ರತಾ ಸಿಬ್ಬಂದಿಗೆ ಪೈಲಟ್ ತಿಳಿಸಿಲ್ಲ. ವಿಮಾನದಲ್ಲಿನ ಸಿಬ್ಬಂದಿಯೂ ಪೊಲೀಸರಿಗೆ ದೂರು ನೀಡಿಲ್ಲ ಹಾಗೂ ಡಿಜಿಸಿಎ ಗಮನಕ್ಕೂ ತಂದಿಲ್ಲ ಎಂಬ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಿದ್ದಾಗಿ ಅದು ತಿಳಿಸಿದೆ.

    ಶಾಲೆಯಲ್ಲಿ ಹೃದಯಾಘಾತಕ್ಕೊಳಗಾಗಿ ಸಾವಿಗೀಡಾದ್ಲು 8ನೇ ತರಗತಿ ವಿದ್ಯಾರ್ಥಿನಿ

    ‘ಸತ್ತು ಹೋದವ’ ಸತ್ತ ಮರುದಿನವೇ ತಾನು ಮೃತಪಟ್ಟಿದ್ದ ಆ ಸ್ಥಳದಲ್ಲೇ ಮತ್ತೆ ಕಾಣಿಸಿಕೊಂಡಿದ್ದ!; ಆಗಿದ್ದಾದರೂ ಏನು, ಏಕೆ?

    ಕಾಮುಕರ ದಾಳಿಗೆ ತಲೆಸುತ್ತು ಬಂದು ಬಿದ್ದ ಯುವತಿ; ಅಪರಿಚಿತೆಯನ್ನು ‘ತಂಗಿ’ ಎಂದು ಕರೆದೊಯ್ದು ದುಷ್ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts