More

    ಸರಿಯಾಗಿ ಬ್ಲೌಸ್ ಸ್ಟಿಚಿಂಗ್ ಮಾಡದ ಟೈಲರ್​ಗೆ ಬಿತ್ತು 5000 ರೂ. ದಂಡ

    ಗುಜರಾತ್​​: ಮಹಿಳೆಯ ಬಟ್ಟೆಗಳನ್ನು ಹೊಲಿಯುವಲ್ಲಿ ತಪ್ಪು ಮಾಡಿದ ಟೈಲರ್​ಗೆ ಗ್ರಾಹಕರ ವೇದಿಕೆ ಅಂಗಡಿಗೆ 5 ಸಾವಿರ ದಂಡ ವಿಧಿಸಿದೆ.  ಯಾವುದೇ ವಸ್ತುವನ್ನು ಖರೀದಿಸುವಾಗ ದೂರು ಬಂದರೆ, ಅದರ ಬಗ್ಗೆ ಧ್ವನಿ ಎತ್ತುವ ಹಕ್ಕು ಪ್ರತಿಯೊಬ್ಬ ಗ್ರಾಹಕನಿಗೂ ಇದೆ. ಇಂತಹದೊಂದು ಪ್ರಕರಣ ಗುಜರಾತ್‌ನ ವಡೋದರಾ ನಗರದಲ್ಲಿ ಬೆಳಕಿಗೆ ಬಂದಿದೆ.

    ನಡೆದಿದ್ದೇನು?: ಮಹಿಳೆಯೊಬ್ಬಳು ಮದುವೆ ಸಮಾರಂಭದ ಹಿನ್ನೆಲೆ ಹೊಸ ಸೀರೆ ಖರೀದಿ ಮಾಡಿ ಗುಜರಾತ್‌ನ ವಡೋದರಾ ಜಿಲ್ಲೆಯ ಅಂಗಡಿಯೊಂದಕ್ಕೆ ಬಟ್ಟೆ ಹೊಲಿಯಲು ಟೈಲರ್​ ಬಳಿ ಕೊಟ್ಟು ಸರಿಯಾದ ಅಳತೆ ಕೂಡಾ ಕೊಟ್ಟು ಹೋಗಿದ್ದಾಳೆ. ಆದರೆ ಟೈಲರ್​ ಸರಿಯಾಗಿ ಹೊಲಿದಿಲ್ಲ. ಇದು ಮಹಿಳೆಗೆ ಕಾರ್ಯಕ್ರಮದಲ್ಲಿ ಮುಜುಗರ ಉಂಟು ಮಾಡಿದೆ. ಈ ವಿಚಾರವಾಗಿ ಬೇಸರಗೊಂಡ ಮಹಿಳೆ ಮಹಿಳೆಯ ಬಟ್ಟೆಯನ್ನು ಸರಿಯಾಗಿ ಹೊಲಿಯದಿದ್ದಾಗ ವಿಷಯ ಗ್ರಾಹಕರ ವೇದಿಕೆಯನ್ನು ತಲುಪಿತು.

    ಬಟ್ಟೆಗಳನ್ನು ತಪ್ಪಾಗಿ ಹೊಲಿದಿದ್ದರಿಂದ, ತನ್ನ ಕುಟುಂಬದಲ್ಲಿ ಮದುವೆ ಸಮಾರಂಭದಲ್ಲಿ ಇತರ ಬಟ್ಟೆಗಳನ್ನು ಧರಿಸಬೇಕಾಯಿತು. ನನಗೆ ಬೇಸರವಾಗಿದೆ. ಇದರಿಂದ ಸಮಾರಂಭದಲ್ಲಿ ಉತ್ಸಾಹ ಕುಗ್ಗಿ ಮಾನಸಿಕ ಆಘಾತಕ್ಕೆ ಒಳಗಾಗಿದೆ ಎಂದು ದೂರುದಾರ ಮಹಿಳೆ ಹೇಳಿಕೊಂಡಿದ್ದಾರೆ.  ಮಹಿಳೆಯ ದೂರಿನ ಮೇರೆಗೆ ಗ್ರಾಹಕರ ವೇದಿಕೆ ಭಾರೀ ದಂಡ ವಿಧಿಸಿ ಆದೇಶ ನೀಡಿದೆ.

    ವಡೋದರಾ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಹೆಚ್ಚುವರಿ), ಮಾರ್ಚ್ 7 ರಂದು ಹೊರಡಿಸಿದ ತನ್ನ ಆದೇಶದಲ್ಲಿ, ದೂರುದಾರ ಮಹಿಳೆ ತನ್ನ ಸೋದರಳಿಯನ ಮದುವೆಯ ಸಂದರ್ಭದಲ್ಲಿ ಈ ಬಟ್ಟೆಗಳನ್ನು ಧರಿಸಲು ಯೋಜಿಸಿದ್ದಳು. ಗ್ರಾಹಕರ ವೇದಿಕೆಯು ತನ್ನ ಆದೇಶದಲ್ಲಿ, ಈ ಉಡುಪುಗಳನ್ನು (ಮೂರು ಬ್ಲೌಸ್ ಮತ್ತು ಎರಡು ಉಡುಪುಗಳು) ಸರಿಯಾಗಿ ಹೊಲಿಯಲಾಗಿಲ್ಲ . ಇದರಿಂದಾಗಿ ಮಹಿಳೆಯ “ಕಾರ್ಯದಲ್ಲಿ ಉತ್ಸಾಹ ಕುಗ್ಗಿ ಮಾನಸಿಕ ಆಘಾತಕ್ಕೆ ಒಳಗಾದರು. ಆದ್ದರಿಂದ ಮಾನಸಿಕ ಕಿರುಕುಳಕ್ಕಾಗಿ ದೂರುದಾರರಿಗೆ 5,000 ರೂ. ಪಾವತಿಸಲು ನಾವು ಅಂಗಡಿಗೆ ಆದೇಶಿಸುತ್ತೇವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ರೀಲ್‌ ಜೋಡಿ ರಿಯಲ್‌ ಮದುವೆ; “96” ಚಿತ್ರದ ನಟ,ನಟಿ ರಿಯಲ್‌ ಲೈಫ್​ನಲ್ಲೂ ಗಂಡ-ಹೆಂಡ್ತಿ

    ಬಿಳಿ ಕೂದಲಿಗೆ ಇಲ್ಲಿದೆ ಶಾಶ್ವತ ಪರಿಹಾರ; ಪಾರ್ಲರ್​ ಹೋಗ್ಬೇಡಿ ಈ ಎಣ್ಣೆಯನ್ನು ಕಾಫಿಪುಡಿಗೆ ಬೆರೆಸಿ ಹಚ್ಚಿದ್ರೆ ಸಾಕು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts