ಬರೋದು 10 ನಿಮಿಷ ತಡವಾಗಿದ್ದಕ್ಕೆ ರಾಜ್ಯಪಾಲರನ್ನೇ ಬಿಟ್ಟು ತೆರಳಿದ ವಿಮಾನ; ಥಾವರ್​ ಚಂದ್​ ಗೆಹ್ಲೋಟ್ ಅಧಿಕಾರಿಗಳಿಗೆ ಸೂಚಿಸಿದ್ದೇನು?

thawar chand gehlot
Published on

ಬೆಂಗಳೂರು: ಏರ್ಪೊಟ್​ಗೆ ಬರಲು 10 ನಿಮಿಷ ತಡವಾಗಿದ್ದಕ್ಕೆ ರಾಜ್ಯಪಾಲರನ್ನೆ ಏರ್ ಏಷ್ಯಾ ವಿಮಾನ ಬಿಟ್ಟು ಹೋಗಿದೆ.

ಈ ಘಟನೆ ನಿನ್ನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೂಟ್​ ಕಾರ್ಯಕ್ರಮದ ನಿಮಿತ್ತ ಹೈದರಾಬಾದ್​ಗೆ ತೆರಳಬೇಕಿದ್ದ ಹಿನ್ನೆಲೆಯಲ್ಲಿ ನಿನ್ನೆ ಮಧ್ಯಾಹ್ನ 2 ಗಂಟೆಗೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೈದರಾಬಾದ್​ಗೆ ಏರ್ ಏಷ್ಯಾ ವಿಮಾನ ಟಿಕೆಟ್ ಬುಕ್ ಆಗಿತ್ತು.

ಆದರೆ ರಾಜ್ಯಪಾಲರು ಏರ್ಪೊರ್ಟ್​ಗೆ ಬರುವುದು 10 ನಿಮಿಷ ತಡವಾಗಿದ್ದಕ್ಕೆ ಏರ್ ಏಷ್ಯಾ ವಿಮಾನ ಟೇಕ್ ಆಫ್​ ಮಾಡಿದೆ. ನಂತರ ನಿನ್ನೆ ಮದ್ಯಾಹ್ನ 3.30 ಕ್ಕೆ ಮತ್ತೊಂದು ಏರ್ ಏಷ್ಯಾ ವಿಮಾನದಲ್ಲಿ ಹೈದರಾಬಾದ್​ಗೆ ತೆರಳಿದರು.

ಶಿಷ್ಟಚಾರ ಉಲ್ಲಂಘಿಸಿದ ಏರ್ ಏಷ್ಯಾ ವಿಮಾನದ ಅಧಿಕಾರಿಗಳ ವಿರುದ್ದ ರಾಜ್ಯಪಾಲರು ಗರಂ ಆಗಿದ್ದಾರೆ. ವಿಮಾನ ಯಾನ ಸಂಸ್ಥೆಯ ನಡೆಯಿಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೂಟ್ ಮುಜಗರಕ್ಕೆ ಒಳಗಾಗಿದ್ದಾರೆ. ರಾಜ್ಯದ ಪ್ರಥಮ ಪ್ರಜೆಯನ್ನು ಬಿಟ್ಟು ಹೋದ ಏರ್ ಏಷ್ಯಾ ವಿಮಾನದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪಾಲರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net