ನಿಮ್ಮ ತಾಳಕ್ಕೆ ಕುಣಿಯಲು ಸಾಧ್ಯವಿಲ್ಲ; ನೆಟ್ಟಿಗರ ಒತ್ತಡಕ್ಕೆ ನಿರ್ಮಾಪಕರು ಗರಂ! ಅಸಲಿಗೆ ನಡೆದಿದ್ದೇನು?

Untitled design (80)
Published on

ಆಂಧ್ರಪ್ರದೇಶ: ತೆಲುಗು ಚಿತ್ರರಂಗದಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳು ತೆರೆಕಾಣಲು ಸಿದ್ಧವಾಗಿದ್ದು, ಸ್ಟಾರ್​​ ಹೀರೋಗಳ ಚಿತ್ರವೇ ಮುಂಚೂಣಿಯಲ್ಲಿವೆ. ಈ ಪೈಕಿ ತಮಿಳು ನಟ ಸೂರ್ಯ ಅಭಿನಯದ ಬಹುನಿರೀಕ್ಷಿತ 'ಕಂಗುವ' ಮತ್ತು ಚಿಯಾನ್ ವಿಕ್ರಮ್​ ನಟನೆಯ 'ತಂಗಾಲನ್​' ಸಿನಿಮಾಗಳ ರಿಲೀಸ್ ಡೇಟ್​ ಬಗ್ಗೆ ಸದ್ಯ ಭಾರೀ ಗೊಂದಲಗಳು ಹುಟ್ಟಿಕೊಂಡಿದ್ದು, ಚಿತ್ರತಂಡದ ವಿರುದ್ಧ ಸಿನಿಪ್ರಿಯರು ವ್ಯಾಪಕ ಅಸಮಾಧಾನ ಹೊರಹಾಕಿದ್ದರು. ಇದೀಗ ಈ ಕುರಿತಂತೆ ಸ್ವತಃ ನಿರ್ಮಾಪಕರೇ ಧ್ವನಿ ಎತ್ತಿದ್ದು, ಟ್ರೋಲಿಗರಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

ಸ್ಟುಡಿಯೋ ಗ್ರೀನ್ ನಿರ್ಮಾಣದ 'ಕಂಗುವ' ಮತ್ತು 'ತಂಗಲಾನ್' ಸಿನಿಮಾಗಳು, ಆ್ಯಕ್ಷನ್​-ಡ್ರಾಮಾ ಜಾನರ್​ ಒಳಗೊಂಡಿದ್ದು, ದಿನದಿಂದ ದಿನಕ್ಕೆ ಸಿನಿಪ್ರೇಕ್ಷಕರಲ್ಲಿ ಭಾರೀ ಕೌತುಕ ಹೆಚ್ಚಿಸಿದೆ. ಇನ್ನು ಚಿತ್ರದ ರಿಲೀಸ್​ಗೆ ಕಾದು ಕುಳಿತಿರುವ ನಟನ ಅಭಿಮಾನಿಗಳು, ಚಿತ್ರತಂಡಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸರಿಯಾದ ವೇಳಾಪಟ್ಟಿ ಅಥವಾ ಬಿಡುಗಡೆ ದಿನಾಂಕವನ್ನು ಘೋಷಿಸಿ. ಅದನ್ನು ಬಿಟ್ಟು, ಇಂತಹ ಗೊಂದಲವನ್ನೇಕೆ ಮೂಡಿಸುತ್ತೀರಿ ಎಂದು ವ್ಯಾಪಕವಾಗಿ ಟ್ರೋಲ್, ಕಮೆಂಟ್​ಗಳನ್ನು ಮಾಡುವ ಮೂಲಕ ನಿರ್ಮಾಪಕ ಧನಂಜಯನ್ ಅವರನ್ನು ಟ್ಯಾಗ್ ಮಾಡಿ, ಟೀಕಿಸಿದ್ದರು.

ಸದ್ಯ ಈ ಎಲ್ಲಾ ಬೆಳವಣಿಗೆಯಿಂದ ಸಿಟ್ಟಿಗೆದ್ದ ನಿರ್ಮಾಪಕರು, "ಕಳೆದ ಕೆಲವು ದಿನಗಳಿಂದ 'ಕಂಗುವ' ಮತ್ತು 'ತಂಗಾಲನ್' ಸಿನಿಮಾಗಳ ರಿಲೀಸ್ ಡೇಟ್​ ಕುರಿತಾದ ಟ್ರೋಲ್​, ಮೀಮ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ನಾನು ಸಹ ಗಮನಿಸುತ್ತಿದ್ದೇನೆ. ಪ್ರತಿದಿನ ನನ್ನನ್ನು ಒಂದಲ್ಲ ಒಂದು ಪೋಸ್ಟ್​ನಲ್ಲಿ ಟ್ಯಾಗ್ ಮಾಡಿ ಏಕೆ ಪ್ರಶ್ನಿಸುತ್ತೀರಿ? ನಿಮ್ಮ ಕಾತರ, ಅಭಿಮಾನ ನಮಗೂ ಅರ್ಥವಾಗುತ್ತದೆ. ಆದ್ರೆ, ಒಬ್ಬ ನಿರ್ಮಾಪಕನ ಪರಿಸ್ಥಿತಿ ಕೂಡ ನೀವು ತಿಳಿದುಕೊಳ್ಳಬೇ" ಎಂದರು.

"ಒಂದು ಚಿತ್ರದ ಮೇಲೆ ನೂರಾರು ಕೋಟಿ ರೂ. ಬಂಡವಾಳ ಹೂಡಿರುವ ನಿರ್ಮಾಪಕನಿಗೆ ಯಾವ ಸಮಯಕ್ಕೆ ಸರಿಯಾಗಿ ರಿಲೀಸ್ ಮಾಡಬೇಕು, ಮಾಡಿದರೆ ಉತ್ತಮ ಲಾಭ ಸಿಗುತ್ತದೆಯೇ? ಎಂಬ ಹಲವಾರು ವಿಷಯಗಳು ತಲೆಯಲ್ಲಿ ಓಡಾಡುತ್ತಿರುತ್ತದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡೇ ನಾವು ಸಹ ಬಿಡುಗಡೆ ದಿನಾಂಕ ಘೋಷಿಸುವುದು" ಎಂದು ಟೀಕಾಕಾರರಿಗೆ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net