More

  ನನ್ನ ಕರಿಯರ್​ ಇಲ್ಲಿಗೆ ಮುಗಿತು… ಪಾಕಿಸ್ತಾನ ವಿರುದ್ಧ ಗೆಲ್ಲುತ್ತಿದ್ದಂತೆ ಭಾವುಕರಾದ ಟೀಂ ಇಂಡಿಯಾದ ಸ್ಟಾರ್​ ಆಟಗಾರ

  ಅಮೆರಿಕಾ: ನಿನ್ನೆ (ಜೂನ್​ 09) ಇಲ್ಲಿನ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕ್ ವಿರುದ್ಧ 6 ರನ್​ಗಳ ರೋಚಕ ಗೆಲುವು ಸಾಧಿಸಿದ ಟೀಂ ಇಂಡಿಯಾಗೆ ಎಲ್ಲಿಲ್ಲದ ಮೆಚ್ಚುಗೆ, ಅಭಿನಂದನೆಗಳ ಮಹಾಪೂರವೇ ಹರಿದುಬಂದಿವೆ. ಅದರಲ್ಲೂ ಭಾರತ ಕೊಟ್ಟ 119 ರನ್​ಗಳ ಸಾಧಾರಣ ಗುರಿಯನ್ನು ತಲುಪುವಲ್ಲಿ ಮುಗ್ಗರಿಸಿದ ಪಾಕಿಸ್ತಾನ ತಂಡಕ್ಕೆ ಮತ್ತೊಮ್ಮೆ ಟೀಕೆಗಳು ವ್ಯಕ್ತವಾಗಿವೆ.

  ಇದನ್ನೂ ಓದಿ: ಕನ್ನಡದ ಬೆಳವಣಿಗೆಗೆ ಸಾಹಿತಿಗಳ ಕೊಡುಗೆ ಅಪಾರ: ಸಾಹಿತಿ ಆರ್.ಎಸ್.ಚಂದ್ರಶೇಖರ್ ಹೇಳಿಕೆ

  ಮೊದಲು ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಪಾಕ್, ಭಾರತಕ್ಕೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅದರಂತೆಯೇ ಬ್ಯಾಟಿಂಗ್ ಇಳಿದ ಭಾರತಕ್ಕೆ ಆರಂಭಿಕ ಹಂತದಲ್ಲೇ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಕೆಟ್​ಗಳು ಪತನಗೊಂಡಿದ್ದು, ದೊಡ್ಡ ಆಘಾತವನ್ನೇ ತಂದೊಡ್ಡಿತು. ಈ ಮಧ್ಯೆಯೂ ಕೂಡ 19 ಓವರ್​ಗಳಲ್ಲಿ 119 ರನ್​ ಕಲೆಹಾಕಿದ ಟೀಂ ಇಂಡಿಯಾ, ಈ ಸಾಧಾರಣ ಗುರಿಯನ್ನು ಚೇಸ್ ಮಾಡುವಂತೆ ಪಾಕ್​ಗೆ ಸವಾಲು ಹಾಕಿತು.

  ಆರಂಭದಿಂದಲೇ ಪಾಕ್ ಬ್ಯಾಟ್ಸ್​ಮನ್​ಗಳನ್ನು ಫುಲ್​ ಕಂಟ್ರೋಲ್​ಗೆ ತೆಗೆದುಕೊಂಡ ಟೀಂ ಇಂಡಿಯಾದ ವೇಗಿಗಳ ಪೈಕಿ, ವಿಶ್ವದ ಬೆಸ್ಟ್ ಬೌಲರ್ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ಜಸ್ಪ್ರಿತ್​ ಬುಮ್ರಾ ಮಾತ್ರ ಸಖತ್ ಪ್ರದರ್ಶನ ನೀಡಿದರು. 4 ಓವರ್​​ಗಳನ್ನು ಪೂರ್ಣಗೊಳಿಸಿದ ಬುಮ್ರಾ, 14 ರನ್ ಕೊಟ್ಟು, ಬರೋಬ್ಬರಿ ಮೂರು ವಿಕೆಟ್​ಗಳನ್ನು ಕಬಳಿಸಿದರು. ಇದು ಟೀಂ ಇಂಡಿಯಾದ ರೋಚಕ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದು, ಮಾಜಿ ಕ್ರಿಕೆಟಿಗರ ಶ್ಲಾಘನೆಗೆ ಕಾರಣವಾಯಿತು.

  ಇದನ್ನೂ ಓದಿ: ಸಮುದಾಯದ ಪರ ದುಡಿದರೆ ಅಭಿವೃದ್ಧಿ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸಲಹೆ

  ಪಾಕಿಸ್ತಾನ ವಿರುದ್ಧ ತನ್ನ ಅತ್ಯುತ್ತಮ ಪ್ರದರ್ಶನದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬುಮ್ರಾ, “ಒಂದು ವರ್ಷದ ಹಿಂದೆ, ನಾನು ಮತ್ತೆ ಕ್ರಿಕೆಟ್ ಆಡುವುದಿಲ್ಲ ಮತ್ತು ನನ್ನ ವೃತ್ತಿಜೀವನ ಅಂತ್ಯವಾಗಿತು ಎಂದೇ ಜನರು ಮಾತನಾಡಲು ಪ್ರಾರಂಭಿಸಿದ್ದರು. ಆದರೆ, ಅದೆಲ್ಲವೂ ಈಗ ಬದಲಾಗಿದೆ. ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬೌಲ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ನನ್ನ ಮುಂದಿರುವ ಸವಾಲುಗಳನ್ನು ಎದುರಿಸುವುದು ಮತ್ತು ನಾನು ಏನೇನು ಮಾಡಬಹುದು ಎಂಬುದರ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ” ಎಂದರು.

  “ಎದುರಾಳಿಗಳ ಅಬ್ಬರವನ್ನು ಹೇಗೆ ನಿಯಂತ್ರಿಸಬೇಕು ಎಂಬುದಷ್ಟೇ ನನ್ನ ಗುರಿಯಾಗಿದೆ. ಅಸಲಿಗೆ ಸತ್ಯ ಏನು ಎಂದರೆ, ಎದುರಾಳಿಗಳು ಬ್ಯಾಟಿಂಗ್​ ಬಂದಾಗ ಅವರನ್ನು ಹೇಗೆ ಬ್ಯಾಟ್ ಮಾಡದಂತೆ ತಡೆಯಬೇಕು ಎಂಬುದು ನನ್ನ ಗುರಿಯಾಗಿರುತ್ತದೆ. ಪ್ರಸ್ತುತ ಆಟದ ಬಗ್ಗೆ ಹೆಚ್ಚು ಗಮನಹರಿಸುತ್ತೇನೆ ವಿನಃ ಹೊರಗಿನ ಚೀರಾಟ, ಕೊಂಕು ಮಾತುಗಳಿಗಲ್ಲ. ಒತ್ತಡ, ಭಾವುಕತೆಗೆ ನಾನು ತಲೆಕೊಡುವುದಿಲ್ಲ. ಅದಕ್ಕೆ ಸಿಲುಕುವುದೂ ಇಲ್ಲ. ನನ್ನಿಂದ ಎಷ್ಟು ಬೆಸ್ಟ್​ ಕೊಡಬಹುದು ಅದನ್ನು ಕೊಡುವಲ್ಲಿ ಮಾತ್ರ ನಾನು ಹೆಚ್ಚು ಶ್ರಮಿಸುತ್ತೇನೆ” ಎಂದಿದ್ದಾರೆ,(ಏಜೆನ್ಸೀಸ್).

  ಸೋಲನ್ನು ಹೀಗೂ ಸಮರ್ಥಿಸಿಕೊಳ್ಳಬಹುದಾ? ಪಾಕ್​ನ ಮಾಜಿ ಕ್ಯಾಪ್ಟನ್​ಗೆ ಕ್ರಿಕೆಟ್​ ಫ್ಯಾನ್ಸ್​ ಛೀಮಾರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts