

ಲಂಡನ್: ಮೇ.30ರಂದು ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧದ 4ನೇ T20I ಪಂದ್ಯದಲ್ಲಿ ಪಾಕ್ ಪರ ವಿಕೆಟ್ ಕೀಪರ್ ಆಗಿ ಮೈದಾನಕ್ಕಿಳಿದಿದ್ದ ಆಜಂ ಖಾನ್, ವಿಲ್ ಜ್ಯಾಕ್ಸ್ ಕೊಟ್ಟ ಕೀಪರ್ ಕ್ಯಾಚ್ ಹಿಡಿಯುವಲ್ಲಿ ಮುಗ್ಗರಿಸಿದ್ದರು. ಈ ದೃಶ್ಯ ನೋಡಿದ ಕ್ರಿಕೆಟ್ ಅಭಿಮಾನಿಗಳನ್ನು ಆಜಂ ವಿರುದ್ಧ ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದಲ್ಲದೇ, ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದರು.
ಇದನ್ನೂ ಓದಿ: ವ್ಯಸನಕ್ಕೆ ಬಲಿಯಾಗದೇ ಉತ್ತಮ ಜೀವನ ರೂಪಿಸಿಕೊಳ್ಳಿ
ಹ್ಯಾರಿಸ್ ರೌಫ್ ಅವರ ಬೌಲಿಂಗ್ನಲ್ಲಿ ಸಿಕ್ಸರ್ ಹೊಡೆಯಲು ಕಾಯುತ್ತಿದ್ದ ವಿಲ್ ಜ್ಯಾಕ್ಸ್ ವಿಕೆಟ್ಗಾಗಿ ಕೀಪಿಂಗ್ನಲ್ಲಿದ್ದ ಆಜಂ, ಕಡೆಗೂ ಸಿಕ್ಕ ಕ್ಯಾಚ್ ಅನ್ನು ಹಿಡಿಯುವಲ್ಲಿ ಎಡವಿದರು. ಬಾಲ್ ವಿಲ್ ಬ್ಯಾಟ್ಗೆ ಟಚ್ ಆಗಿ ಕೀಪರ್ ಕಡೆಗೆ ಹೋಗುತ್ತಿದ್ದಂತೆ 'ಕ್ಯಾಚ್ ಇಟ್' ಎಂದು ಚೀರಿದ ರೌಫ್ಗೆ ಮೂಡಿದ್ದು ನಿರಾಸೆ ಬಿಟ್ಟರೆ ಬೇರೇನೂ ಅಲ್ಲ. ಕಾರಣ, ಸಿಂಪಲ್ ಕ್ಯಾಚ್ ಹಿಡಿಯುವಲ್ಲಿ ಆಜಂ ಖಾನ್ ವಿಫಲರಾಗಿದ್ದನ್ನು ಕಂಡು ರೌಫ್ ಮತ್ತು ತಂಡದ ಸಹ ಆಟಗಾರರು ಭಾರೀ ಅಸಮಾಧಾನ ಹೊರಹಾಕಿದ್ದರು.
ಇನ್ನು ವಿಲ್ ಜಾಕ್ಸ್ ಅವರ ನೇರ ಕ್ಯಾಚ್ ಕೈಬಿಟ್ಟ ಆಜಂ ಖಾನ್ರನ್ನು ಟೀಕಿಸಿದ್ದ ಕ್ರಿಕೆಟ್ ಅಭಿಮಾನಿಗಳು, ಇದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅವಮಾನ. ಪಾಕ್ ತಂಡಕ್ಕೆ ಭಾರೀ ಮುಖಭಂಗ ಉಂಟುಮಾಡಿದ ನೀನು, ಮೊದಲು ದಡೂತಿ ದೇಹವನ್ನು ಇಳಿಸುವತ್ತ ಹೆಚ್ಚು ಶ್ರಮಿಸು. ಯಾವುದೇ ಕ್ರೀಡೆಗಾದರೂ ಮೊದಲು ಫಿಟ್ನೆಸ್ ಮುಖ್ಯ. ಅದರಲ್ಲೂ ಕ್ರಿಕೆಟ್ನಂತಹ ಆಟಕ್ಕೆ ಅತೀ ಮುಖ್ಯ ಎಂದು ವ್ಯಾಪಕ ಟೀಕೆ ಹೊರಹಾಕಿದ್ದರು. ಅಂದು ಆಜಂ ಕ್ಯಾಚ್ ಮತ್ತು ಡಕ್ಔಟ್ಗೆ ಅಷ್ಟೊಂದು ಟೀಕಾ ಪ್ರಹಾರ ಮಾಡಿದವರು ಇದೀಗ ಈ ವೈರಲ್ ವಿಡಿಯೋ ನೋಡಿದ್ರೆ, ಬಾಯಿ ಮುಚ್ಚಿಕೊಳ್ಳುವುದು ಖಂಡಿತ ಎಂದೇ ಹೇಳಬಹುದು.
ಕ್ರಿಕೆಟ್ ಲೀಗ್ಗಳಲ್ಲಿ ತಮ್ಮ ತಂಡದ ಪರ ಅಬ್ಬರದ ಬ್ಯಾಟಿಂಗ್ ಮಾಡಿರುವ ಆಜಂ ಖಾನ್ರ ವಿಡಿಯೋ ತುಣುಕುಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಅದರಲ್ಲೂ ಕೆಲವರು ಒಂದು ಬಾಲ್ಗೆ ಡಕ್ಔಟ್ ಆಗಿದ್ದಕ್ಕೆ ಟೀಕೆಗಳ ಸುರಿಮಳೆಯನ್ನೇ ಹರಿಸಿದ್ದವರು ಎಲ್ಲಿ ಹೋದ್ರಪ್ಪಾ? ಈ ವಿಡಿಯೋ ಒಮ್ಮೆ ನೋಡಿ, ಆಮೇಲೆ ನೀವೇ ಅಂದು ಆಡಿದ ಮಾತನ್ನು ಹಿಂಪಡೆಯುತ್ತೀರಾ ಎಂದು ಟೀಕಾಕಾರರಿಗೆ ಮುಖಕ್ಕೆ ಹೊಡದಂತೆ ಹೇಳಿದ್ದಾರೆ.