

ಮುಂಬೈ: ಪ್ರಿಯಾಂಕಾ ಚೋಪ್ರಾ, ಮುಂಬೈ ಬಿಟ್ಟು ಹೊರದೇಶದಲ್ಲೇ ಸೆಟ್ಲ್ ಆಗುತ್ತಾರಾ ಎಂಬ ಪ್ರಶ್ನೆಯೊಂದು ಕೇಳಿಬರುತ್ತಿದೆ. ಅದಕ್ಕೆ ಕಾರಣವೂ ಇದೆ. ಪ್ರಿಯಾಂಕಾ ಇತ್ತೀಚೆಗೆ ಮುಂಬೈನ ತಮ್ಮ ಎರಡು ಮನೆಗಳನ್ನು ಮಾರಿದ್ದಾರೆ. ಜತೆಗೆ ಒಂದು ಆಫೀಸ್ ಬಾಡಿಗೆಗೆ ಕೊಟ್ಟಿದ್ದಾರೆ. ಅದಕ್ಕೂ ಮುನ್ನ, ಕಳೆದ ವರ್ಷ ಅವರೊಂದು ಮನೆಯನ್ನು ಮಾರಿದ್ದರು. ಇವೆಲ್ಲ ನೋಡುತ್ತಿದ್ದರೆ, ಮುಂಬೈ ಬಿಟ್ಟು ವಿದೇಶದಲ್ಲೇ ನೆಲೆಸುವುದಕ್ಕೆ ಪ್ರಿಯಾಂಕಾ ಸಜ್ಜಾಗಿದ್ದಾರಾ ಎಂಬ ಪ್ರಶ್ನೆಯೊಂದು ಎಲ್ಲರನ್ನೂ ಕಾಡುತ್ತಿದೆ.
ಇದನ್ನೂ ಓದಿ: ಕಾರ್ತಿಕ್ ಆರ್ಯನ್ ಈಗ ‘ಕ್ಯಾಪ್ಟನ್ ಇಂಡಿಯಾ’ …
ಪ್ರಿಯಾಂಕಾ ಮೂರು ತಿಂಗಳುಗಳ ಹಿಂದೆ ಮುಂಬೈನ ಅಂಧೇರಿ ವೆಸ್ಟ್ನಲ್ಲಿರುವ ರಾಜ್ ಕ್ಲಾಸಿಕ್ ಎಂಬ ಅಪಾರ್ಟ್ಮೆಂಟ್ನಲ್ಲಿದ್ದ ಎರಡು ಮನೆಗಳನ್ನು ಮಾರಿದ್ದಾರೆ. ಈ ಮನೆಗಳಿಂದ ಅವರಿಗೆ ಸಿಕ್ಕ ಮೊತ್ತ ಏಳು ಕೋಟಿ ರೂಪಾಯಿ ಮಾತ್ರ. 900 ಮತ್ತು 1300 ಚದರಡಿ ವಿಸ್ತೀರ್ಣದ ಈ ಮನೆಗಳನ್ನು ಪ್ರಿಯಾಂಕಾ ಯಾವಾಗ ಖರೀದಿಸಿದ್ದರೋ ಗೊತ್ತಿಲ್ಲ? ಒಟ್ಟಾರೆ ಎರಡೂ ಮನೆಗಳನ್ನು ಅವರು ಮಾರಿದ್ದಾರೆ.
ಮನೆ ಮಾರಾಟ ಮಾಡುವುದರ ಜತೆಗೆ ಒಂದು ಆಫೇಸ್ನ್ನು ಅವರು ಪ್ರತಿ ತಿಂಗಳು ಎರಡು ಲಕ್ಷ ರೂ. ಬಾಡಿಗೆಗೆ ಬಿಟ್ಟಿದ್ದಾರೆ. ಹೀಗೆ ಒಂದೊಂದೇ ಆಸ್ತಿಯನ್ನು ಮಾರುತ್ತಿರುವುದರಿಂದ ಸಹಜವಾಗಿ ಪ್ರಿಯಾಂಕಾ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.
ಸದ್ಯ ಪ್ರಿಯಾಂಕಾ ಹಾಲಿವುಡ್ನಲ್ಲೇ ಬ್ಯುಸಿಯಾಗಿದ್ದು, 'ಮ್ಯಾಟ್ರಿಕ್ಸ್ 4' ಮತ್ತು 'ಟೆಕ್ಸ್ಟ್ ಫಾರು ಯೂ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ, 'ಸಿಟಾಡೆಲ್' ಎಂಬ ಸರಣಿಯಲ್ಲೂ ನಟಿಸುತ್ತಿದ್ದಾರೆ.