ನಾನು ಸನ್ಯಾಸಿನಿ ಆಗಿಲ್ಲ, ಆಧ್ಯಾತ್ಮಿಕ ದೀಕ್ಷೆಯನ್ನೂ ಪಡೆದಿಲ್ಲ; ಚೈತ್ರಾ ಕೋಟೂರ್ ಸ್ಪಷ್ಟನೆ

Chaitra Kotoor 4
Published on

ಬೆಂಗಳೂರು: ಚಿತ್ರನಟಿ ಮತ್ತು ಬಿಗ್ ಬಾಸ್ ಸೀಸನ್‌ನ 7ರ ಮಾಜಿ ಸ್ಪರ್ಧಿ ಚೈತ್ರಾ ಕೋಟೂರ್ ಆಧ್ಯಾತ್ಮಿಕ ದೀಕ್ಷೆ ಸ್ವೀಕರಿಸಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ಆ ಸುದ್ದಿಗೆ ಸ್ವತಃ ಚೈತ್ರಾ ಸ್ಪಷ್ಟನೆ ಕೊಟ್ಟಿದ್ದಾರೆ. ‘ನಾನು ಸನ್ಯಾಸಿನಿಯೂ ಆಗಿಲ್ಲ, ಮದುವೆ ವಿಚಾರಕ್ಕೆ ಎದ್ದಿದ್ದ ಗೊಂದಲಗಳಿಗೆ ಈ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ವಿಜಯವಾಣಿಗೆ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿಯ ಪಿಂಪ್ಲಿಯಲ್ಲಿನ ಓಶೋ ಧ್ಯಾನ ಕೇಂದ್ರಕ್ಕೆ ತೆರಳಿದ್ದ ಚೈತ್ರಾ, ಧ್ಯಾನ ಮಂದಿರದಲ್ಲಿನ ಒಂದಷ್ಟು ಚಟುವಟಿಕೆಗಳಲ್ಲಿ ಭಾಗವಹಿಸಿ ಅಲ್ಲಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಹಾಗೆ ಶೇರ್ ಮಾಡಿಕೊಳ್ಳುತ್ತಿದ್ದಂತೆ, ಚೈತ್ರಾ ಸನ್ಯಾಸನಿ ದೀಕ್ಷೆ ಪಡೆದಿದ್ದಾರೆ ಎಂಬೆಲ್ಲ ಸುದ್ದಿ ಸದ್ದು ಮಾಡಿತ್ತು. ಇತ್ತೀಚೆಗೆ ನಾಗಾರ್ಜುನ್ ಎಂಬುವವರೊಂದಿಗೆ ಮದುವೆ ಆದರೂ, ಅದು ಕಾರಣಾಂತರಗಳಿಂದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಅದೆಲ್ಲದ್ದರಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡರಾ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಆ ಗಾಳಿ ಸುದ್ದಿಗೆ ಅವರೇ ಉತ್ತರಿಸಿದ್ದಾರೆ.

‘ಓಶೋ ಮಾರ್ಗದರ್ಶನದಲ್ಲಿ ಧ್ಯಾನದ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದೆ. ಅಲ್ಲಿ ಭಾಗವಹಿಸಿದವರೆಲ್ಲರಿಗೂ ನಿಜವಾದ ಹೆಸರಿನ ಬದಲಿಗೆ ಬೇರೆಯದೇ ನಾಮಕರಣ ಮಾಡಲಾಗುತ್ತದೆ. ಅದೇ ರೀತಿ ನನಗೆ ಮಾ ಪ್ರಗ್ಯಾ ಭಾರತಿ ಎಂದು ಹೆಸರು ಸೂಚಿಸಿದ್ದರು. ಅದು ಆ ಧ್ಯಾನ ಕೇಂದ್ರದಲ್ಲಿನ ನೀತಿ. ಅದೇ ರೀತಿ ನಾನೂ ಸಹ ನಾಲ್ಕು ದಿನಗಳ ಕಾಲ ಭಾಗವಹಿಸಿ ಬಂದಿದ್ದೇನೆ. ಸದ್ಯ ನಾಲ್ಕು ದಿನಗಳ ಕಾಲ ಧ್ಯಾನದಲ್ಲಿ ಭಾಗವಹಿಸಿ ಬಂದಿದ್ದೇನೆ. ಮುಂದೆಯೂ ಆವಾಗಾವಾಗ ಹೋಗುತ್ತೇನೆ. ಇದು ಸನ್ಯಾಸ ದೀಕ್ಷೆ ಅಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net